ಬಾಲಕಿಯ ಮುಗ್ಧತೆಗೆ ಮನಸೋತ ಕಳ್ಳ; ವಿಡಿಯೊ ವೈರಲ್
ದರೋಡೆಕೋರನೊಬ್ಬ ಅಂಗಡಿಯ ಮಾಲೀಕನಿಗೆ ಗನ್ ತೋರಿಸಿ ಹಣ ಮತ್ತು ಮೊಬೈಲ್ ದೋಚಿದ್ದಾನೆ. ಇನ್ನು ಸ್ಥಳದಿಂದ ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಅಲ್ಲೇ ಇದ್ದ ಪುಟ್ಟ ಬಾಲಕಿಯು ಕಳ್ಳನಿಗೆ ಲಾಲಿಪಪ್ ನೀಡಲು ಮುಂದಾಗಿದ್ದಾಳೆ. ಇದನ್ನು ನೋಡಿದ ಕಳ್ಳನ ಮನಸ್ಸು ಕರಗಿದ್ದು, ದೋಚಿದೆಲ್ಲವನ್ನೂ ಹಿಂದಿರುಗಿಸಿದ್ದಾನೆ.