#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

About Us

image

'ವಿಶ್ವವಾಣಿ' ದಿನಪತ್ರಿಕೆಯನ್ನು ಧೀಮಂತ ಪತ್ರಕರ್ತ ಮತ್ತು ಅಗ್ರಗಣ್ಯ ಕನ್ನಡ ಹೋರಾಟಗಾರ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು 1958ರಲ್ಲಿ ಹುಬ್ಬಳ್ಳಿಯಲ್ಲಿ ಆರಂಭಿಸಿ, ಐವತ್ತೇಳು ವರ್ಷಗಳ ಕಾಲ ಮುನ್ನಡೆಸಿದರು. ಆಗ ಅದು ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸೀಮಿತವಾಗಿತ್ತು. ಕಳೆದ ಹತ್ತು ವರ್ಷಗಳಿಂದ ಕನ್ನಡದ ಖ್ಯಾತ ಸಂಪಾದಕ ವಿಶ್ವೇಶ್ವರ ಭಟ್ ಅವರು 'ವಿಶ್ವವಾಣಿ'ಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ 'ವಿಶ್ವವಾಣಿ' ಆರು ಆವೃತ್ತಿಗಳೊಂದಿಗೆ ರಾಜ್ಯಮಟ್ಟದ ಸ್ಥಾನಮಾನವನ್ನು ಪಡೆದುಕೊಂಡು ಕನ್ನಡ ಓದುಗರ ಸಮುದಾಯದಲ್ಲಿ ಜನಪ್ರಿಯತೆ ಗಳಿಸಿದೆ. ತಾಜಾಸುದ್ದಿ, ಹೊಸ ಪ್ರಯೋಗ, ಆಕರ್ಷಕ ವಿನ್ಯಾಸ, ವೈವಿಧ್ಯಮಯ ಅಂಕಣ, ವಿಶೇಷ ಪುರವಣಿಗಳಿಂದ 'ವಿಶ್ವವಾಣಿ' ಕನ್ನಡಿಗರ ಅಚ್ಚುಮೆಚ್ಚಿನ ದೈನಿಕವಾಗಿ ಹೆಸರುವಾಸಿಯಾಗಿದೆ.

'ವಿಶ್ವವಾಣಿ ಟಿವಿ', 'ವಿಶ್ವವಾಣಿ ಟಿವಿ ಸ್ಪೆಷಲ್' ಮತ್ತು 'ವಿಶ್ವವಾಣಿ ಮನಿ' ಎಂಬ ಡಿಜಿಟಲ್ ಚಾನೆಲ್, 'ವಿಶ್ವವಾಣಿ ಪುಸ್ತಕ' ಎಂಬ ಪ್ರಕಾಶನ ಸಂಸ್ಥೆ, 'ವಿಶ್ವವಾಣಿ ಮಾಧ್ಯಮ ವಿದ್ಯಾಪೀಠ' ಎಂಬ ಶಿಕ್ಷಣ ಸಂಸ್ಥೆ, 'ವಿಶ್ವವಾಣಿ ಕ್ಲಬ್ ಹೌಸ್' ಎಂಬ ನಿತ್ಯ ಮಾತಿನ ಮಂಟಪ, 'ವಿಶ್ವವಾಣಿ ಗ್ಲೋಬಲ್ ಫೋರಂ' ಎಂಬ ಅಂತಾರಾಷ್ಟ್ರೀಯ ಕನ್ನಡ ಸಾಧಕರ ಸಮಾವೇಶ, 'ವಾಗ್ದೇವಿ ವಿದ್ಯಾವರ್ಧಕ ಟ್ರಸ್ಟ್' ಎಂಬ ಬಹು ಆಯಾಮದ ಸಾಂಸ್ಕೃತಿಕ ಸಂಘಟನೆ 'ವಿಶ್ವವಾಣಿ'ಯ ಅಂಗಸಂಸ್ಥೆಗಳಾಗಿವೆ. 'ವಿಶ್ವವಾಣಿ' ಮತ್ತು ಅದರ ಬಳಗದ ಪ್ರಕಟಣೆಗಳು ಪ್ರಿಂಟ್, ವೆಬ್, ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‌‌ಗಳಲ್ಲೂ ಬಲವಾದ ಅಸ್ತಿತ್ವವನ್ನು ಹೊಂದಿವೆ