ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರೋಗ್ಯ

Health Tips: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರನ್ನು ಕುಡಿದರೆ ಈ ಎಲ್ಲ ಆರೋಗ್ಯ ಸಮಸ್ಯೆಯಿಂದ ಮುಕ್ತಿ

ಏಲಕ್ಕಿ ನೀರು ಕುಡಿಯುವುದರಿಂದ ಸಿಗಲಿದ ಇಷ್ಟೆಲ್ಲ ಪ್ರಯೋಜನ

ಆರೋಗ್ಯಯುತ ಆಹಾರವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅಂತವುಗಳಲ್ಲಿ ಏಲಕ್ಕಿಯೂ ಒಂದು. ಇದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಕಡಿಮೆ ಪ್ರಮಾಣದಲ್ಲಿದೆ. ಏಲಕ್ಕಿ ನೀರಿನ ಸೇವನೆಯಿಂದ ಪ್ರಯೋಜನ ತಿಳಿಯುವ ಮೊದಲು ಏಲಕ್ಕಿ ನೀರನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.

Beauty Tips: ಚಳಿಗಾಲದಲ್ಲಿ ತುಟಿ ಬಿರುಕು ಬಿಡುತ್ತಾ? ಈ ಮನೆಮದ್ದು ಬಳಸಿ ನೋಡಿ

ಚಳಿಗೆ ತುಟಿ ಒಡೆಯುತ್ತಿದ್ಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಚಳಿಗಾಲದಲ್ಲಿ ಸೌಂದರ್ಯದ ಆರೈಕೆ ಮಾಡಿಕೊಳ್ಳುವುದು ತುಸು ಕಷ್ಟದ ಕೆಲಸವೇ. ಅದರಲ್ಲೂ ಅಂದದ ತುಟಿಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ದೊಡ್ಡ ಸವಾಲೇ. ತುಟಿಗೆ ಬೆಣ್ಣೆ, ತುಪ್ಪ ಸವರುವುದರಿಂದ, ನಾಲಗೆಯ ಉತ್ತಮ ಆರೈಕೆ ಮಾಡುವುದರಿಂದ ತುಟಿ ಒಡೆಯುವ ಸಮಸ್ಯೆಯಿಂದ ದೂರ ಉಳಿಯಬಹುದು. ಚಳಿಗಾಲದಲ್ಲಿ ಕಾಡುವ ಬಿರುಕು ತುಟಿ ಸಮಸ್ಯೆಗೆ ಈ ಮನೆಮದ್ದುಗಳನ್ನು ಬಳಸಬಹುದು.

Health Tips: ಆಹಾರ ಹಸಿಯಾಗಿ ಸೇವಿಸಿದರೆ ಒಳ್ಳೆಯದೇ?

ಹಸಿಯಾಗಿ ಆಹಾರ ಸೇವಿಸಿದರೆ ಒಳಿತೆ?

ಆಹಾರ ಹಸಿಯದಾಗಿದ್ದರೆ ಸರಿಯೋ ಅಥವಾ ಬೇಯಿಸಿದ್ದು ಸೂಕ್ತವೋ? ಎಂಬುದು ಈ ಪ್ರಶ್ನೆಯ ತಿರುಳು. ಕೆಲವರು ಹಸಿ ಆಹಾರಗಳ ಸೇವನೆಗೆ ಹೆಚ್ಚಿನ ಒತ್ತು ನೀಡಿದರೆ, ಹಲವರು ಬೇಯಿಸಿದ್ದೇ ಸರಿ ಎನ್ನುವವರಿದ್ದಾರೆ. ಈ ಎರಡೂ ತಂಡಗಳಿಗೆ ತಂತಮ್ಮ ವಾದವನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಾಕಷ್ಟು ವಿಷಯಗಳಿವೆ. ಆದರೆ ಇತ್ತಂಡಗಳಿಂದಾಗಿ ನಮಗೆ ಗೊಂದಲ ಆಗಬಾರದಲ್ಲಾ- ಹಾಗಾಗಿ ಈ ಬಗ್ಗೆ ಒಂದಿಷ್ಟು ವಿವರಗಳು ಇಲ್ಲಿವೆ.

Fact Check: ರೇಬಿಸ್ ದನದ ಹಾಲಿನಿಂದಲೂ ಹರಡುತ್ತದೆಯೇ? ಇಲ್ಲಿದೆ ನೈಜಾಂಶ

ದನದ ಹಾಲಿನ ಸೇವನೆಯಿಂದ ರೇಬಿಸ್ ಬರುತ್ತ?

ನಾಯಿಯೊಂದು ಹಸುವಿಗೆ ಕಚ್ಚಿತ್ತು. ಆ ಹಸುವಿನ ಹಾಲು ಕುಡಿದ ನೂರಾರು ಜನರು ಇದೀಗ ಆತಂಕಕ್ಕೆ ಒಳಗಾಗಿರುವ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ತಿಳಿಯದೇ ಹುಚ್ಚು ನಾಯಿ ಕಚ್ಚಿದ ಹಸುವಿನ ಹಾಲಿನಿಂದ ಧಾರ್ಮಿಕ ಕಾರ್ಯಕ್ರಮಕ್ಕೆ ಪಂಚಾಮೃತ ತಯಾರಿಸಿದ್ದಾರೆ. ಅದನ್ನು 200 ಜನರು ಸೇವಿಸಿದ್ದು, ಹಲವರಲ್ಲಿ ಆತಂಕ ಮನೆ ಮಾಡಿದೆ. ಹಾಗಾದರೆ ದನದ ಹಾಲು ಕುಡಿದರೆ ರೇಬಿಸ್ ಬರುತ್ತಾ?

ಬಿರ್ಲಾ ಫರ್ಟಿಲಿಟಿ & IVF, ಬೆಂಗಳೂರು ಸುಧಾರಿತ ರೋಗನಿರ್ಣಯ ಮತ್ತು ವೈಯಕ್ತಿಕಗೊಳಿಸಿದ ಆರೈಕೆ

ಬಹು IVF ವೈಫಲ್ಯಗಳ ನಂತರ ಮಹಿಳೆಯು ತಾಯ್ತನ ಸಾಧಿಸಲು ಸಹಾಯ

ಪುನರಾವರ್ತಿತ ವೈಫಲ್ಯಗಳಿಗೆ ಸಾಮಾನ್ಯ ಕಾರಣ ವೆಂದರೆ ಭ್ರೂಣಗಳಲ್ಲಿನ ವರ್ಣತಂತು ಅಸಹಜತೆಗಳು. ಸೂಕ್ಷ್ಮದರ್ಶಕದ ಅಡಿಯಲ್ಲಿ ಆರೋಗ್ಯಕರವಾಗಿ ಕಾಣುವ ಭ್ರೂಣಗಳು ಸಹ ತಳೀಯವಾಗಿ ಅಸಹಜವಾಗಿರಬಹುದು. ಅದಕ್ಕಾಗಿಯೇ ನಾವು ಪ್ರಿಇಂಪ್ಲಾಂಟೇಶನ್ ಜೆನೆಟಿಕ್ ಟೆಸ್ಟಿಂಗ್ ಫಾರ್ ಅನ್ಯೂಪ್ಲಾಯ್ಡಿ (ಪಿಜಿಟಿ-ಎ) ಅನ್ನು ಬಳಸಿದ್ದೇವೆ,

Health Tips: ಚಳಿಗಾಲದಲ್ಲಿ ಪಾಲಕ್ ಸೊಪ್ಪು ತಿನ್ನೋದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಚಳಿಗಾಲಕ್ಕೆ ಬಹಳ ಉಪಯೋಗಕಾರಿ ಈ ಪಾಲಕ್ ಸೊಪ್ಪು

ಹಸಿರು ತರಕಾರಿಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಗೊತ್ತೇ ಇದೆ. ಅದರಲ್ಲಿ ಪಾಲಕ್ ಸೊಪ್ಪು ಕೂಡಾ ಒಂದು. ಪಾಲಕ್ ಸೊಪ್ಪು ಚಳಿಗಾಲದಲ್ಲಿ ಲಭ್ಯವಿರುವ ಹಸಿರು ತರಕಾರಿಯಾಗಿದೆ. ಇದು ಆರೋಗ್ಯಕ್ಕೂ ಬಹಳ ಒಳ್ಳೆಯದು. ಈ ಸೊಪ್ಪನ್ನು ನೀವು ಸೇವಿಸಿದರೆ, ದೇಹದ ಎಲ್ಲಾ ವಿಷಕಾರಿ ವಸ್ತುಗಳು ದೇಹದಿಂದ ಹೊರಹಾಕಲ್ಪಡುತ್ತವೆ. ಇದರೊಂದಿಗೆ, ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ನಾರಾಯಣ ಮೂರ್ತಿ ಹೇಳಿದಂತೆ ವಾರಕ್ಕೆ 72 ಗಂಟೆಗಳ ಕೆಲಸ ಮಾಡಿದ್ರೆ ಏನಾಗುತ್ತೆ? ಈ ಬಗ್ಗೆ ವೈದ್ಯರ ಎಚ್ಚರಿಕೆ ಇಲ್ಲಿದೆ

ನಾರಾಯಣ ಮೂರ್ತಿ ಹೇಳಿದಂತೆ 72 ಗಂಟೆಗಳ ಕೆಲಸ ಮಾಡಿದ್ರೆ ಏನಾಗುತ್ತೆ?

Narayana Murthy: ನಾರಾಯಣ ಮೂರ್ತಿಯವರ ವಾರಕ್ಕೆ 72 ಗಂಟೆಗಳ ಕೆಲಸದ ಸಲಹೆಯು ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆಗೆ ಕಾರಣವಾಗಿದೆ. ಈ ರೀತಿಯ ದೀರ್ಘ ಕೆಲಸದ ವೇಳಾಪಟ್ಟಿ ಉದ್ಯೋಗಿಗಳ ಆರೋಗ್ಯದ ಮೇಲೆ ಯಾವ ತರದ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಈಗ ವೈದ್ಯರು ಗಂಭೀರ ಎಚ್ಚರಿಕೆಗಳನ್ನು ನೀಡಿದ್ದಾರೆ.

Health Tips: ಬೆಳಗ್ಗೆ ಖಾಲಿ ಹೊಟ್ಟೆಗೆ ನೆನೆಹಾಕಿದ ಒಣ ದ್ರಾಕ್ಷಿ ತಿಂದರೆ, ಇಷ್ಟೆಲ್ಲಾ ಲಾಭಗಳು ಸಿಗುತ್ತವೆ ನೋಡಿ...!

ಪ್ರತಿದಿನ ಬೆಳಿಗ್ಗೆ ಒಣ ದ್ರಾಕ್ಷಿ ತಿಂದರೆ ಏನಾಗುತ್ತೆ ಗೊತ್ತಾ..?

ಉತ್ತಮ ಜೀರ್ಣ ಶಕ್ತಿಯನ್ನು ಪಡೆಯಲು ಒಣದ್ರಾಕ್ಷಿ ತುಂಬಾ ಉಪಯುಕ್ತವಾಗಿದೆ. ಜೊತೆಗೆ ಒಣದ್ರಾಕ್ಷಿ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಇದರ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Brain fever: ಅಯ್ಯಪ್ಪನ ಭಕ್ತರೇ ಅಲರ್ಟ್‌... ಅಲರ್ಟ್‌...! ಕೇರಳದಲ್ಲಿ ಹೆಚ್ಚಿದ ಮೆದುಳು ಜ್ವರ ಭೀತಿ- ರೋಗದ ಲಕ್ಷಣಗಳೇನು?

ಕೇರಳದಲ್ಲಿ ಮೆದುಳು ಜ್ವರ ಭೀತಿ; ಶಬರಿಮಲೆ ಭಕ್ತರಿಗೆ ಆರೋಗ್ಯ ಸಲಹೆ

Kerala News: ಕೇರಳದಲ್ಲಿ ಮೆದುಳು ಜ್ವರದ ಭೀತಿಯು ಹೆಚ್ಚುತ್ತಿದ್ದು, ಸರ್ಕಾರವು ಶಬರಿಮಲೆ ಯಾತ್ರಿಕರಿಗೆ ವಿಶೇಷ ಆರೋಗ್ಯ ಸೂಚನೆಗಳನ್ನು ಹೊರಡಿಸಿದೆ. ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು, ಸೋಂಕು ತಡೆಯಲು ಅಗತ್ಯ ಕ್ರಮಗಳನ್ನು ಪಾಲಿಸಬೇಕು ಮತ್ತು ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು ಎಂದು ಸೂಚಿಸಲಾಗಿದೆ.

Health Tips: ಯಾವ ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಸೂಕ್ತ?

ಯಾವ ವ್ಯಾಯಾಮ ದೇಹಕ್ಕೆ ಅಗತ್ಯ!.

Exercise for health: ವ್ಯಾಯಾಮವನ್ನು ಅತಿ ಸ್ಥೂಲವಾಗಿ ವಿಂಗಡಿಸಬಹುದಾದರೆ ಏರೋಬಿಕ್‌ ಮತ್ತು ಅನರೋಬಿಕ್‌ ಎನ್ನಬಹುದು. ಅಂದರೆ ಏರೋಬಿಕ್‌ ವ್ಯಾಯಾಮಗಳನ್ನು ಕಾರ್ಡಿಯೊ ಮಾದರಿಗಳೆಂದು ಕರೆಯಬಹುದು. ಅಂದರೆ ನಮ್ಮ ಇಡೀ ದೇಹಕ್ಕೆ ರಕ್ತಪರಿಚಲನೆ ಯನ್ನು ಹೆಚ್ಚಿಸಿ, ಇದಕ್ಕಾಗಿ ಹೆಚ್ಚು ಕೆಲಸ ಮಾಡುವಂತೆ ನಮ್ಮ ಹೃದಯವನ್ನು ಪ್ರೇರೇಪಿಸುತ್ತದೆ. ಹಾಗಾದರೆ ಮಾಡುವ ವ್ಯಾಯಾಮ ಹೇಗಿರಬೇಕು ಎಂಬುದನ್ನು ತಿಳಿಯುವ ಬಗೆ ಹೇಗೆ? ಯಾರಿಗೆ ಯಾವ ರೀತಿಯ ವ್ಯಾಯಾಮ ಸೂಕ್ತ ಎಂಬುದನ್ನು ತಿಳಿಯುವುದು ಹೇಗೆ?

Health Tips: ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೋರೆಕಾಯಿ ಜ್ಯೂಸ್​ ಕುಡಿದರೆ ಬೊಜ್ಜು ಕರಗುವುದರ ಜೊತೆಗೆ ಶುಗರ್ ಕಂಟ್ರೋಲ್ ಆಗುತ್ತದೆ

ತೂಕ ಇಳಿಸಿಕೊಳ್ಳಬೇಕೆ? ಹಾಗಾದ್ರೆ ಈ ಪಾನೀಯ ಸೇವಿಸಿ

ತೂಕ ಇಳಿಸಿಕೊಳ್ಳಲು ಹಲವಾರು ಜನ ಈ ವ್ಯಾಯಾಮ - ಜಿಮ್ ಅಂತೆಲ್ಲಾ ನಾನಾ ಸರ್ಕಸ್ ಮಾಡ್ತಾರೆ. ಆದ್ರೆ ಇದರ ಜೊತೆ ನಾವು ಸೇವಿಸುವ ಆಹಾರ, ಕುಡಿಯುವ ಪಾನೀಯವು ಪ್ರಮುಖ ಪಾತ್ರವಹಿಸುತ್ತವೆ. ಹಾಗೆಯೇ ನಿತ್ಯ ಬೆಳಗ್ಗೆ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ನೀವು ತೂಕವನ್ನು ಇಳಿಸಿಕೊಳ್ಳಬಹುದು. ಜೊತೆಗೆ ಮಧುಮೇಹವೂ ನಿಯಂತ್ರಣಗೊಳ್ಳಲಿದೆ.

Health Tips: ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕೊತ್ತಂಬರಿ ಬೀಜ ನೆನೆಸಿದ ನೀರು ಕುಡಿಯೋದು ಎಷ್ಟು ಒಳ್ಳೆಯದು ಗೊತ್ತೆ?

ಪ್ರತಿ ದಿನ ಈ ಆರೋಗ್ಯಕರ ಪಾನೀಯ ಕುಡಿಯಿರಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಡ್ ಟೀ ಕಾಫಿ ಕುಡಿಯುವ ಬದಲು ಒಂದು ಲೋಟ ಕೊತ್ತಂಬರಿ ಬೀಜದ ನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಲಾಭಗಳು ಸಿಗುತ್ತದೆ. ತೂಕ ಇಳಿಕೆ, ಹೊಟ್ಟೆಯುಬ್ಬರ ಕಡಿಮೆ ಮಅಡುತ್ತದೆ. ಅಲ್ಲದೆ ಮುಟ್ಟಿನ ಸಮಸ್ಯೆ ಸೇರಿದಂತೆ ಹಲವು ರೋಗಗಳಿಗೆ ಇದು ಮದ್ದಿನಂತೆ ಕೆಲಸ ಮಾಡುತ್ತದೆ. ಹಾಗಾದರೆ ಪ್ರತಿದಿನ ಕೊತ್ತಂಬರಿ ನೀರು ಕುಡಿಯುವುದರಿಂದಾಗುವ ಪ್ರಯೋಜನವೇನು ಎನ್ನುವ ವಿವರ ಇಲ್ಲಿದೆ.

Fenugreek Health Benefits: ಮೆಂತೆಯನ್ನು ಮಧುಮೇಹಿಗಳು ಎಷ್ಟು ತಿಂದರೆ ಸಾಕು?

ಮಧುಮೇಹಿಗಳು ಮೆಂತೆಯನ್ನು ತಿನ್ನಬಹುದೇ?

Fenugreek for Diabetes: ಮೆಂತೆ ಬೀಜಗಳನ್ನು ತಿನ್ನುವುದು ಮಧುಮೇಹಿಗಳ ಪಾಲಿಗೆ ಅನುಕೂಲಕರ ಎಂಬುದನ್ನು ನಾವೆಲ್ಲ ಕೇಳಿರುತ್ತೇವೆ. ಆದರೆ ಎಷ್ಟು ತಿನ್ನಬೇಕು ಅಥವಾ ಹೇಗೆ ತಿನ್ನಬೇಕು ಎಂಬ ಸ್ಪಷ್ಟತೆ ಇರಬೇಡವೇ? ಮದ್ದು ಹೋಗಿ ಮದ್ದಿನ ಮರವನ್ನೇ ತಿನ್ನಬಾರದಲ್ಲ. ಹೆಚ್ಚಿನ ಪ್ರಮಾಣದಲ್ಲಿ ಮೆಂತೆ ಬೀಜಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕುಸಿಯುವ ಅಪಾಯವೂ ಇದೆ. ಹಾಗಾಗಿ ಮಧುಮೇಹಿಗಳು ಮೆಂತೆ ಬೀಜಗಳನ್ನು ಎಷ್ಟು ತಿನ್ನಬೇಕು? ಇದನ್ನು ಚಿಕಿತ್ಸೆ ನೀಡುತ್ತಿರುವ ವೈದ್ಯರಲ್ಲಿ ಹೇಳಬೇಕೇ?

Persimmon Fruit: ಚಳಿಗಾಲದಲ್ಲಿ ತಿನ್ನಲೇಬೇಕಾದ ‌ಪರ್ಸಿಮನ್‌ ಹಣ್ಣಿನ ಉಪಯೋಗ ತಿಳಿಯಿರಿ

ಪರ್ಸಿಮನ್‌ ಎಂಬ ಹಣ್ಣಿನ ಉಪಯೋಗವೇನು ಗೊತ್ತೆ?

Health Tips: ‌ಪರ್ಸಿಮನ್‌ ಎಂಬ ಕಡು ಕೇಸರಿ ಬಣ್ಣದ ಹಣ್ಣಿನ ಬಗ್ಗೆ ಹೇಳಲೇಬೇಕು. ನೋಡುವುದಕ್ಕೆ ಪುಟ್ಟ ಕುಂಬಳಕಾಯಿಯನ್ನೇ ಹೋಲುವ ಇದನ್ನು ʻಕಾಕಿ ಹಣ್ಣುʼ ಎಂದೂ ಕರೆಯಲಾಗುತ್ತದೆ. ಮೂಲದಲ್ಲಿ ಚೀನಾದಿಂದ ವಿಶ್ವದ ಉಳಿದೆಡೆಗಳಿಗೆ ಹರಡಿರುವ ಈ ಬೆಳೆ ಕೈಗೆ ಬರುವುದು ಚಳಿಗಾಲದಲ್ಲಿ...ಇದನ್ನು ತಿನ್ನುವುದರಲ್ಲಿ ಇರುವ ಲಾಭಗಳೇನು?

Health Tips: ಖಾಲಿ ಹೊಟ್ಟೆಯಲ್ಲಿ ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಮೂಲಂಗಿ ಜ್ಯೂಸ್ ಕುಡಿದು ಈ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ಮೂಲಂಗಿ ಒಂದು ಸೂಪರ್‌ ಫುಡ್ ಆಗಿದ್ದು, ಇದರಲ್ಲಿ ಪೋಷಕಾಂಶಗಳು ಹೇರಳವಾಗಿದೆ. ದಿನಕ್ಕೊಂದು ಲೋಟ ತಾಜಾ ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಲಭಿಸಲಿದ್ದು, ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುತ್ತವೆ. ಜೀರ್ಣಾಂಗ ವ್ಯವಸ್ಥೆ, ತ್ವಚೆಯ ಆರೋಗ್ಯ, ಹೃದಯದ ಆರೋಗ್ಯಕ್ಕೂ ಒಳ್ಳೆಯದಾಗಿದ್ದು, ಈ ತರಕಾರಿಯ ರಸವನ್ನು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

Stretch Marks Solutions: ಸ್ಟ್ರೆಚ್‌ ಮಾರ್ಕ್‌ ತಡೆಯಲು ಇಲ್ಲಿದೆ ಪರಿಹಾರ ಕ್ರಮ!

ಸ್ಟ್ರೆಚ್‌ ಮಾರ್ಕ್‌ ತಡೆಯುವುದು ಹೇಗೆ?

ಸ್ಟ್ರೆಚ್‌ ಮಾರ್ಕ್‌ ಎನ್ನುತ್ತಿದ್ದಂತೆ, ಈ ಲೇಖನ ʻಗರ್ಭಿಣಿಯರಿಗೆ ಮಾತ್ರʼ ಎಂದು ಭಾವಿಸ ಬೇಕಿಲ್ಲ. ಯಾರಿಗೆ ಬೇಕಿದ್ದರೂ ಕಾಣಬರುವಂಥ ಕಲೆಗಳಿವು..ದೇಹದ ತೂಕ ಇದ್ದಕ್ಕಿದ್ದಂತೆ ಹೆಚ್ಚು- ಕಡಿಮೆಯಾದರೆ, ತೋಳು, ತೊಡೆಗಳು, ಹೊಟ್ಟೆಯ ಭಾಗ ದಲ್ಲೆಲ್ಲಾ ಬಿಳಿಯ ಬರೆ ಎಳೆದಂತೆ ಕಂಡು ಬರುವ ಕಲೆಗಳಿವು. ಇವು ಯಾಕಾಗಿ ಬರುತ್ತವೆ ಮತ್ತು ಬರದಂತೆ ತಡೆಯಲು ಸಾಧ್ಯವೇ ಎಂಬುದನ್ನು ನೋಡೋಣ.

Health Tips: ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಅರಿಶಿನದ ನೀರು ಕುಡಿದರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?

ಅರಿಶಿನ ನೀರು ಕುಡಿಯುವುದರಿಂದ ಕಡಿಮೆಯಾಗಲಿದೆ ತೂಕ

Turmeric Water: ಒತ್ತಡ ಜೀವನ ಶೈಲಿಯ ಪರಿಣಾಮವೋ ಏನೋ ಇಂದಿನ ಯುವ ಜನತೆ ನಾನಾ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದೆ. ಅವುಗಳ ಪೈಕಿ ಜೀರ್ಣಕಾರಿ ಸಮಸ್ಯೆ ಪ್ರಮುಖವಾದುದು. ಹೆಚ್ಚಿನವರು ಈ ಸಮಸ್ಯೆಯಿಂದ ಬಳಲುತ್ತಿದ್ದು, ಅಂತಹವರಿಗೆ ಅರಿಶಿನ ನೀರು ಉತ್ತಮ ಪರಿಹಾರ ಎನ್ನುತ್ತಾರೆ ತಜ್ಞರು. ಬೆಳಗ್ಗೆ ಎದ್ದ ತಕ್ಷಣ ಅರಿಶಿನ ನೀರನ್ನು ಕುಡಿಯುವುದರಿಂದ ಅದ್ಭುತವಾದ ಪ್ರಯೋಜನಗಳನ್ನು ಪಡೆಯಬಹುದು.

Health Tips: ಚಳಿಗಾಲದ ಮಲಬದ್ಧತೆ: ಪರಿಹಾರವೇನು?

ಚಳಿಗಾಲದಲ್ಲಿ ಮಲಬದ್ಧತೆ: ಏನು ಮಾಡಬೇಕು?

Health Tips: ವರ್ಷವಿಡೀ ಈ ಸಮಸ್ಯೆ ಇದ್ದರೆ ಅಂಥವರಿಗೆ ಸೂಕ್ತ ಚಿಕಿತ್ಸೆಯೇ ಅಗತ್ಯ. ಆದರೆ ಉಳಿದ ಸಮಯದಲ್ಲಿ ಇಲ್ಲದ್ದು, ಕೆಲವರಲ್ಲಿ ಇದು ಚಳಿಗಾಲದಲ್ಲೇ ಕಾಣಿಸಿಕೊಳ್ಳುತ್ತದೆ ಎಂದಾದರೆ, ಇದೀಗ ಜೀವನಶೈಲಿಯಿಂದ ಬರುವಂಥದ್ದು. ಚಳಿ ಹೆಚ್ಚಿದ್ದಾಗ ಬಾಯಾರಿಕೆ ಕಡಿಮೆ ಎನ್ನುವ ಕಾರಣಕ್ಕೆ ಕುಡಿ ಯುವ ನೀರಿನ ಪ್ರಮಾಣ ಕಡಿಮೆಯಾಗಬಹುದು. ತಣ್ಣೀರು ಕುಡಿಯಲಾಗದು ಎಂಬ ಕಾರಣದಿಂದ ಬಿಸಿಯಾಗಿ ಕುಡಿಯುವ ಟೀ, ಕಾಫಿ ಪ್ರಮಾಣ ಹೆಚ್ಚಿರಬಹುದು.

Laser Angioplasty: ಲೇಸರ್ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯನ್ನು ಆರಂಭಿಸಿದ ಮಣಿಪಾಲ್ ಆಸ್ಪತ್ರೆ!

ಲೆಸರ್ ಆಂಜಿಯೋಪ್ಲಾಸ್ಟಿ– ಈಗ ಮಣಿಪಾಲ್ ಆಸ್ಪತ್ರೆಗಳಲ್ಲಿ ಲಭ್ಯ!

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆ ನವೀನ ಲೇಸರ್ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯನ್ನು ಪರಿಚಯಿಸಿದೆ. ಈ ಚಿಕಿತ್ಸಾಕ್ರಮವು ಕ್ಯಾಲ್ಸಿಯಂ ಬ್ಲಾಕ್ ಗಳಿಂದ ಗಟ್ಟಿಯಾಗಿರುವ, ಅಥವಾ ಈ ಹಿಂದೆ ಚಿಕಿತ್ಸೆ ಕಷ್ಟ ಎಂದು ಪರಿಗಣಿಸಲಾದ ಅಪಧಮನಿ (ಆರ್ಟರಿ ಯಲ್) ಬ್ಲಾಕೇಜ್ ಹೊಂದಿರುವ ರೋಗಿಗಳಿಗೆ ಬೈಪಾಸ್‌ ಕಾರ್ಡಿಯಾಕ್ ಶಸ್ತ್ರಚಿಕಿತ್ಸೆಗಳಿ ಗಿಂತಲೂ ಸುರಕ್ಷಿತ ಮತ್ತು ಕಡಿಮೆ ಆಘಾತಕಾರಿ, ಮತ್ತು ಹೆಚ್ಚು ಪರಿಣಾಮ ಕಾರಿಯಾಗಿದೆ...

Air Pollution: ಭಾರತದಲ್ಲಿ ಸ್ವಚ್ಛ ಗಾಳಿಗೆ ಬರ- ನಿತ್ಯ ಬಲಿಯಾಗ್ತಿರುವ ಭಾರತೀಯರೆಷ್ಟು ಗೊತ್ತಾ?

ವಾಯು ಮಾಲಿನ್ಯಕ್ಕೆ ನಿತ್ಯ ಭಾರತೀಯರು ಬಲಿಯಾಗುತ್ತಿದ್ದಾರೆ!

ಭಾರತದ ನಗರಗಳಲ್ಲಿ ವಿಪರೀತ ವಾಯುಮಾಲಿನ್ಯ ಆಗುತ್ತಿದ್ದು ಇಲ್ಲಿನ ಜನರನ್ನು ವಾಯುಮಾಲಿನ್ಯದ ಅಪಾಯದಿಂದ ಪಾರು ಮಾಡಲು ಭಾರತ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಮತ್ತು ಸಾರ್ವಜನಿಕ ಆರೋಗ್ಯ ತಜ್ಞೆ ಡಾ. ಸೌಮ್ಯ ಎಚ್ಚರಿಸಿದ್ದಾರೆ.

Health Tips: ಕಟ್ಟಿದ ಮೂಗಿನ ಸಮಸ್ಯೆಯಿಂದ ಪರಿಹಾರ ಬೇಕೆ? ಇಲ್ಲಿದೆ ಸೂಪರ್‌ ಟಿಪ್ಸ್‌

ಕಟ್ಟಿದ ಮೂಗಿನ ಸಮಸ್ಯೆ ಹೋಗಲಾಡಿಸಲು ಏನು ಮಾಡಬೇಕು?

Nose Feels Blocked: ವೈರಲ್ ಸೋಂಕಿನ ಬಳಿಕ‌ ಅನೇಕರು ದೀರ್ಘಕಾಲದ ಮೂಗಿನ ಕಟ್ಟುವಿಕೆ ಅಥವಾ ಸೈನಸ್ ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದಾಗಿ ಸರಿಯಾಗಿ ಉಸಿರಾಡಲು ಕೂಡ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಕೆಲವು ಮನೆ ಮದ್ದುಗಳನ್ನು ಬಳಸುವ ಮೂಲಕ ಸಮಸ್ಯೆಯನ್ನು ನಿವಾರಿಸಬಹುದು.

ಬಹೂಪಯೋಗಿ ಜಾರಿಗೆ ಹಣ್ಣು

ಬಹೂಪಯೋಗಿ ಜಾರಿಗೆ ಹಣ್ಣು

ಹಸಿರು ಮಿಶ್ರಿತ ಬಿಳಿ ಹೂ ಬಿಡುವ ಈ ವೃಕ್ಷದ ಹಸಿರು ಕಾಯಿಗಳು ಬಲಿತು ಕಿತ್ತಳೆ-ಹಳದಿ ಬಣ್ಣಕ್ಕೆ ತಿರುಗಿ ಹಣ್ಣಾಗಿ ಮಾಗಿದಾಗ ತಿನ್ನಲು ಯೋಗ್ಯ. ಹಣ್ಣುಗಳ ಗಾತ್ರವೂ ಕಿತ್ತಳೆಯಷ್ಟೇ ಇರುತ್ತದೆ. ಹಣ್ಣಿನೊಳಗೆ ನಾಲ್ಕೈದು ಬೀಜ ಸಹಿತ ಸೊಳೆಗಳಿದ್ದು ಮಾಂಸಲವಾಗಿರುತ್ತದೆ; ಮಾಂಸಲ ಭಾಗವನ್ನು ತಿನ್ನಬಹುದು.

Winter Skincare Tips: ಚಳಿಗಾಲದಲ್ಲಿ ಶುಷ್ಕ ತ್ವಚೆಯ ಆರೈಕೆ ಹೇಗೆ?

ಚಳಿಗಾಲದಲ್ಲಿ ಶುಷ್ಕ ತ್ವಚೆಯ ಆರೈಕೆ ಹೀಗೆ ಮಾಡಿ

Health Tips: ಮಳೆಗಾಲ ಮರೆಯಾಗಿ ಚಳಿಗಾಲ ಮೆಲ್ಲನೆ ಅಡಿ ಇಟ್ಟಿದೆ. ಚಳಿಗಾಲವೆಂದರೆ ಚರ್ಮ ಬಿರಿಯುವ ಕಾಲವೂ ಹೌದು. ಹಾಗಾದರೆ ಹವಾಮಾನ ಬದಲಾಗುತ್ತಿರುವಾಗ, ಅದರಲ್ಲೂ ಶುಷ್ಕ ವಾತಾವರಣದಲ್ಲಿ ಚರ್ಮದ ದೇಖರೇಖಿ ಹೇಗಿರಬೇಕು? ಏನೆಲ್ಲಾ ಮಾಡಬೇಕು? ನಿಮ್ಮ ಮಿಲಿಯನ್‌ ಡಾಲರ್‌ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Health Tips: ಚಳಿಗಾಲದಲ್ಲಿ ಈ ಹಣ್ಣುನ್ನು ಸೇವಿಸೋದ್ರಿಂದ ತ್ವಚೆಯು ಕಾಂತಿಯುತವಾಗಿ ಹೊಳೆಯುತ್ತಂತೆ!

ಚಳಿಗಾಲದಲ್ಲಿ ಸೀತಾ ಫಲ ಹಣ್ಣು ತಿನೋದ್ರಿಂದ ಆಗೋ ಪ್ರಯೋಜನ ಇದು

ಚಳಿಗಾಲ ಬಂತೆಂದರೆ ಸಾಕು ಆರೋಗ್ಯದಲ್ಲಿ ನಾನಾ ಬದಲಾವಣೆಗಳಾಗುವಂತೆ ನಮ್ಮ ತ್ವಚೆಯಲ್ಲಿಯೂ ಬದಲಾವಣೆಗಳಾಗುವುದು ಸಾಮಾನ್ಯ. ಚಳಿಗಾಳಿಯು ತ್ವಚೆಯನ್ನು ಒಣಗಿಸುತ್ತವೆ ಮತ್ತು ತ್ವಚೆಯ ಹೊಳಪನ್ನು ಹೋಗಲಾಡಿಸುತ್ತವೆ. ಇದಕ್ಕಾಗಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಚಳಿಗಾಲದಲ್ಲಿ ಅತ್ಯಂತ ಮುಖ್ಯವಾಗುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಯಾವ ಹಣ್ಣು ತಿಂದ್ರೆ ಒಳ್ಳೆಯದು ಎಂಬುದನ್ನು ನೋಡೋಣ

Loading...