ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Longest Train Routes In India: ವಿವೇಕ್‌ ಎಕ್ಸ್‌ಪ್ರೆಸ್‌, ಹಿಮಸಾಗರ್‌ ಎಕ್ಸ್‌ಪ್ರೆಸ್‌...ಟಾಪ್‌ 5 ದೀರ್ಘ ದೂರ ಪಯಣದ ರೈಲುಗಳಿವು

ರೈಲು-ಭಾರತೀಯರ ನೆಚ್ಚಿನ ಸಾರಿಗೆ ಎನಿಸಿಕೊಂಡಿದೆ. ಇದು ದೂರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ಅದರಲ್ಲಿಯೂ ಭಾರತದಂತಹ ದೇಶದಲ್ಲಿ ರೈಲು ಪ್ರಯಾಣವನ್ನು ಇಂದಿಗೂ ಜನರು ಮೆಚ್ಚಿಕೊಳ್ಳುತ್ತಾರೆ. ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ಗೆಳೆಯರು, ಕುಟುಂಬಸ್ಥರು, ಆತ್ಮೀಯರೊಂದಿಗೆ ತೆರಳಲು ರೈಲು ಅತ್ಯುತ್ತಮ ಆಯ್ಕೆ ಎನಿಸಿಕೊಂಡಿದೆ. ಅದರಲ್ಲಿಯೂ ಇತ್ತೀಚೆಗೆ ಕೇಂದ್ರ ಸರ್ಕಾರ ರೈಲ್ವೆ ಯೋಜನೆಗೆ ಹೆಚ್ಚಿನ ಅನುದಾನ ನೀಡುವ ಮೂಲಕ ರೈಲು ಪ್ರಯಾಣವನ್ನು ಇನ್ನಷ್ಟು ಪ್ರಯಾಣಸ್ನೇಹಿಯನ್ನಾಗಿಸುತ್ತಿದೆ (Longest Train Routes In India). ಜತೆಗೆ ಟಿಕೆಟ್‌ ದರಗಳು ಕೈಗೆಟಕುವಂತಿರುತ್ತವೆ. ಕೆಲವೊಂದು ರೈಲು ಮಾರ್ಗ ಎಷ್ಟು ದೀರ್ಘವಾಗಿರುತ್ತದೆ ಎಂದರೆ ಗುರಿ ತಲುಪಲು ದಿನಗಟ್ಟಲೆ ಬೇಕಾಗುತ್ತದೆ. ಇಲ್ಲಿದೆ ಅತೀ ದೀರ್ಘ ಪ್ರಯಾಣದ ರೈಲುಗಳ ಪಟ್ಟಿ.

1/5

ವಿವೇಕ್‌ ಎಕ್ಸ್‌ಪ್ರೆಸ್‌-Vivek Express

ಅತೀ ದೀರ್ಘ ಸಮಯ, ದೂರ ಸಂಚರಿಸುವ ರೈಲುಗಳ ಪೈಕಿ ಮೊದಲ ಸ್ಥಾನದಲ್ಲಿರುವ ವಿವೇಕ್‌ ಎಕ್ಸ್‌ಪ್ರೆಸ್‌ ಭಾರತದ ಅರ್ಧದಷ್ಟು ಪ್ರದೇಶವನ್ನು ಕವರ್‌ ಮಾಡುತ್ತದೆ ಎಂದರೆ ನೀವು ನಂಬಲೇ ಬೇಕು. ಸುಮಾರು 4,154.1 ಕಿ.ಮೀ. ಸಂಚರಿಸುವ ಇದು ದಕ್ಷಿಣ ಭಾರತವನ್ನು ಉತ್ತರ ಭಾರತದೊಂದಿಗೆ ಸಂಪರ್ಕಿಸುತ್ತದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಅಸ್ಸಾಂನ ದಿಬ್ರುಗಢಕ್ಕೆ ತಲುಪಲು ವಿವೇಕ್‌ ಎಕ್ಸ್‌ಪ್ರೆಸ್‌ಗೆ ಬರೋಬ್ಬರಿ 75 ಗಂಟೆ 30 ನಿಮಿಷ ಬೇಕು (ಸುಮಾರು ಮೂರೂವರೆ ದಿನ). ವಾರಕ್ಕೊಮ್ಮೆ ಇದು ಸಂಚರಿಸುತ್ತದೆ.

2/5

ಅರೋನೈ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌-Aronai Superfast Express

ಕೇರಳದ ತಿರುವನಂತರಪುರಂನಿಂದ ಅಸ್ಸಾಂನ ಸಿಲ್ಚಾರ್‌ಗೆ ತೆರಳುವ ಅರೋನೈ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಬರೋಬ್ಬರಿ 3,932 ಕಿ.ಮೀ. ಸಂಚರಿಸುತ್ತದೆ. ಸುಮಾರು 74 ಗಂಟೆಗಳ ಪಯಣದಲ್ಲಿ ಇದು ತಮಿಳುನಾಡು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಹಾದು ಹೋಗುತ್ತದೆ.

3/5

ಹಿಮಸಾಗರ್‌ ಎಕ್ಸ್‌ಪ್ರೆಸ್‌- Himsagar Express

ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ರೈಲು ಹಿಮಸಾಗರ್‌ ಎಕ್ಸ್‌ಪ್ರೆಸ್‌. ಇದು ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಕ್ಕೆ ತೆರಳುತ್ತದೆ. ಈ ಮಾರ್ಗದ ದೂರ 3,932 ಕಿ.ಮೀ. ವಾರಕ್ಕೊಮ್ಮೆ ಸಂಚರಿಸುವ ಈ ರೈಲಿನ ಪ್ರಯಾಣ ಬರೋಬ್ಬರಿ 68 ಗಂಟೆ 20 ನಿಮಿಷ.

4/5

ಟೆನ್‌ ಜಮ್ಮು ಎಕ್ಸ್‌ಪ್ರೆಸ್‌- Ten Jammu Express

ಇದು ಕೂಡ ತಮಿಳುನಾಡಿನಿಂದ ಜಮ್ಮು ಕಾಶ್ಮೀರಕ್ಕೆ ತೆರಳುತ್ತದೆ. ತಿರುನಲ್ವೇಲಿ ಜಂಕನ್‌ನಿಂದ ಹೊರಡುವ ಟೆನ್‌ ಜಮ್ಮು ಎಕ್ಸ್‌ಪ್ರೆಸ್‌ ರೈಲು 71 ಗಂಟೆ 20 ನಿಮಿಷಗಳಲ್ಲಿ 3,642 ಕಿ.ಮೀ. ಸಂಚರಿಸಿ ಜಮ್ಮು ಕಾಶ್ಮೀರದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಕ್ಕೆ ತಲುಪುತ್ತದೆ.

5/5

ನ್ಯೂ ಟಿನ್ಸುಕಿಯಾ-ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್-New Tinsukia to Bengaluru Weekly Express

ನ್ಯೂ ಟಿನ್ಸುಕಿಯಾದಿಂದ ಬೆಂಗಳೂರಿಗೆ ತೆರಳುವ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ದೇಶದ 5ನೇ ಅತಿ ಉದ್ದದ ರೈಲು ಮಾರ್ಗ ಎನಿಸಿಕೊಂಡಿದೆ. ಇದು ಅಸ್ಸಾಂನ ಟಿನ್ಸುಕಿಯಾದಿಂದ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಚಲಿಸುತ್ತದೆ. ಈ ರೈಲು 3,642 ಕಿ.ಮೀ. ದೂರವನ್ನು ಕ್ರಮಿಸುತ್ತದೆ ಮತ್ತು ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು 65 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಎಕ್ಸ್‌ಪ್ರೆಸ್ ಪಶ್ಚಿಮ ಬಂಗಾಳ, ಜಾರ್ಖಂಡ್, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಸಂಚರಿಸುತ್ತದೆ. ಇದು ವಾರಕ್ಕೊಮ್ಮೆ ಕಾರ್ಯ ನಿರ್ವಹಿಸುತ್ತದೆ.