ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಅತ್ಯಂತ ವೇಗವಾಗಿ 5000 ಐಪಿಎಲ್‌ ರನ್‌ ಪೂರ್ಣಗೊಳಿಸಿದ ಕೆಎಲ್‌ ರಾಹುಲ್‌!

KL Rahul Scored 5000 IPL Runs: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದದ 2025 ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅಜೇಯ 57 ರನ್‌ಗಳನ್ನು ಕಲೆ ಹಾಕಿದ ಕೆಎಲ್‌ ರಾಹುಲ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ 8 ವಿಕೆಟ್‌ಗಳ ಗೆಲುವಿಗೆ ನೆರವು ನೀಡಿದರು. ತಮ್ಮ ಈ ಇನಿಂಗ್ಸ್‌ ಮೂಲಕ ಅವರು ಐಪಿಎಲ್‌ ಟೂರ್ನಿಯಲ್ಲಿ ವೇಗವಾಗಿ 5000 ರನ್‌ಗಳನ್ನು ಪೂರ್ಣಗೊಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

1/6

ಡೆಲ್ಲಿ ಕ್ಯಾಪಿಟಲ್ಸ್‌ಗೆ 8 ವಿಕೆಟ್‌ ಭರ್ಜರಿ

ಲಖನೌದ ಏಕನಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 40ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 8 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಆರನೇ ಗೆಲುವು ದಾಖಲಿಸಿತು.

2/6

ಡೆಲ್ಲಿಗೆ 160 ರನ್‌ ನೀಡಿದ್ದ ಲಖನೌ

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಲಖನೌ ಸೂಪರ್‌ ಜಯಂಟ್ಸ್‌, ಏಡೆನ್‌ ಮಾರ್ಕ್ರಮ್‌ ಅರ್ಧಶತಕದ ಬಲದಿಂದ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 159 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಡೆಲ್ಲಿ 17.5 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 161 ರನ್‌ ಗಳಿಸಿ ಗೆಲುವು ಪಡೆಯಿತು.

3/6

ಕೆಎಲ್‌ ರಾಹುಲ್‌ ಅರ್ಧಶತಕ

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಚೇಸಿಂಗ್‌ನಲ್ಲಿ ಕೆಎಲ್‌ ರಾಹುಲ್‌ ಹಾಗೂ ಅಭಿಷೇಕ್‌ ಪೊರೆಲ್‌ ಅರ್ಧಶತಕಗಳನ್ನು ಸಿಡಿಸಿದರು. ಈ ಇನಿಂಗ್ಸ್‌ನಲ್ಲಿ ಆಂಕರ್‌ ಪಾತ್ರವನ್ನು ನಿರ್ವಹಿಸಿದ ಕೆಎಲ್‌ ರಾಹುಲ್‌, 42 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ57 ರನ್‌ ಸಿಡಿಸಿದರು.

4/6

ವೇಗವಾಗಿ 5000 ರನ್‌ ಪೂರ್ಣಗೊಳಿಸಿದ ರಾಹುಲ್‌

ಐಪಿಎಲ್‌ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ 5000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಕೆಎಲ್‌ ರಾಹುಲ್‌ ಬರೆದಿದ್ದಾರೆ. ಐಪಿಎಲ್‌ ವೃತ್ತಿ ಜೀವನದ 130ನೇ ಇನಿಂಗ್ಸ್‌ನಲ್ಲಿ ಅವರು ಈ ಮೈಲುಗಲ್ಲು ತಲುಪಿದ್ದಾರೆ.

5/6

ಕೆಎಲ್‌ ರಾಹುಲ್‌ 8ನೇ ಬ್ಯಾಟರ್‌

ಐಪಿಎಲ್‌ ಟೂರ್ನಿಯಲ್ಲಿ 5000 ರನ್‌ಗಳನ್ನು ಪೂರ್ಣಗೊಳಿಸಿದ ಎಂಟನೇ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌. ಇದಕ್ಕೂ ಮುನ್ನ ಡೇವಿಡ್‌ ವಾರ್ನರ್‌, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಸುರೇಶ್‌ ರೈನಾ, ಎಂಎಸ್‌ ಧೋನಿ, ಶಿಖರ್‌ ಧವನ್ ಹಾಗೂ ಎಬಿ ಡಿವಿಲಿಯರ್ಸ್‌ ಈ ಸಾಧನೆ ಮಾಡಿದ ಇನ್ನುಳಿದ ಏಳು ಬ್ಯಾಟ್ಸ್‌ಮನ್‌ಗಳು.

6/6

ಭರ್ಜರಿ ಫಾರ್ಮ್‌ನಲ್ಲಿ ಕೆಎಲ್‌ ರಾಹುಲ್‌

ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೆಎಲ್‌ ರಾಹುಲ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ಆಡಿದ 7 ಪಂದ್ಯಗಳಿಂದ 64.60ರ ಸರಾಸರಿಯಲ್ಲಿ 323 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ.