ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika Mandanna: ನೋಡ ನೋಡುತ್ತಿದ್ದಂತೆ ಸಮೀರಾ ಆಗಿ ಬದಲಾದ ರಶ್ಮಿಕಾ; ʼಕುಬೇರʼ ಚಿತ್ರದ ಶೂಟಿಂಗ್‌ ಸೆಟ್‌ನ ಅಪರೂಪದ ಫೋಟೊ ಹಂಚಿಕೊಂಡ ಕೊಡಗಿನ ಬೆಡಗಿ

ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಚಿತ್ರ ʼಕುಬೇರʼ ತೆರೆಕಂಡಿದೆ. ತಮಿಳು-ತೆಲುಗಿನಲ್ಲಿ ತಯಾರಾದ ಈ ಸಿನಿಮಾ ಕನ್ನಡ ಸೇರಿದಂತೆ ಮಲಯಾಳಂ ಮತ್ತು ಹಿಂದಿಯಲ್ಲಿಯೂ ರಿಲೀಸ್‌ ಆಗಿದೆ. ಮೊದಲ ಬಾರಿಗೆ ಧನುಷ್‌-ರಶ್ಮಿಕಾ ಮಂದಣ್ಣ ಒಂದ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪರಸ್ಕೃತ ನಿರ್ದೇಶಕ ಶೇಖರ್‌ ಕಮ್ಮುಲ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸಮೀರಾ ಎನ್ನುವ ಮಧ್ಯಮ ವರ್ಗದ ಯುವತಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಶೂಟಿಂಗ್‌ ಸೆಟ್‌ನ ಫೋಟೊವನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದ‍ಣ್ಣ (ಇನ್‌ಸ್ಟಾಗ್ರಾಮ್‌ ಚಿತ್ರ).
1/5

ಸಾದಾ-ಸೀದಾ ಯುವತಿಯಾಗಿ ಬದಲಾದ ರಶ್ಮಿಕಾ

ರಶ್ಮಿಕಾ ಇದುವರೆಗೆ ತೆರೆಮೇಲೆ ಆಧುನಿಕ ಯುವತಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ತೆಲುಗಿನ ʼಪುಷ್ಪʼ ಸೀರಿಸ್‌ನಲ್ಲಿ ಹಳ್ಳಿ ಯುವತಿಯಾಗಿ ಮೋಡಿ ಮಾಡಿದ್ದ ಅವರು ಇದೀಗ ʼಕುಬೇರʼದಲ್ಲಿ ಮಧ್ಯಮ ವರ್ಗದ ಯುವತಿಯಾಗಿ ತೆರೆ ಮೇಲೆ ಪ್ರತ್ಯಕ್ಷರಾಗಿದ್ದಾರೆ. ಕಡಿಮೆ ಮೇಕಪ್‌ ಹೊಂದಿರುವ, ಡಿಗ್ಲಾಮರ್‌ ಲುಕ್‌ನಲ್ಲಿಯೇ ಗಮನ ಸೆಳೆದಿದ್ದಾರೆ.

2/5

ಅಭಿನಯಕ್ಕೆ ಮೆಚ್ಚುಗೆ

ಸರಳ ಲುಕ್‌ನಿಂದಲೇ ಗಮನ ಸೆಳೆದ ರಶ್ಮಿಕಾ ಅವರ ಅಭಿನಯಕ್ಕೂ ಪ್ರೇಕ್ಷಕರು ಫಿದಾ ಆಗಿದ್ದಾರೆ. ಧನುಷ್‌-ನಾಗಾರ್ಜುನ ಅವರಂತಹ ಘಟಾನುಘಟಿಗಳು ಚಿತ್ರದಲಿದ್ದರೂ ರಶ್ಮಿಕಾ ಅವರ ಪಾತ್ರವೂ ನೋಡುಗರನನು ಆಕರ್ಷಿಸಿದೆ. ಆ ಮೂಲಕ ರಶ್ಮಿಕಾ ಮತ್ತೊಂದು ಗೆಲುವು ದಾಖಲಿಸಿದ್ದಾರೆ.

3/5

ಅನ್‌ಸೀನ್‌ ಫೋಟೊ ಹಂಚಿಕೊಂಡ ರಶ್ಮಿಕಾ

ಇದೀಗ ರಶ್ಮಿಕಾ ಶೂಟಿಂಗ್‌ ಸೆಟ್‌ನ ಅಪರೂಪದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಈ ಬಗ್ಗೆ ತಿಳಿಸಿದ್ದಾರೆ. ''ಕುಬೇರʼ ಚಿತ್ರದ ಸಮೀರಾ. ಶೇಖರ್ ಕಮ್ಮುಲ ನಿರ್ದೇಶನದ ಈ ಚಿತ್ರದಲ್ಲಿ ಏನೋ ಒಂದು ವೈಬ್‌ ಇದೆ. ಅದು ನಾನು ಸಮೀರಾ ಪಾತ್ರವನ್ನು ನಿರ್ವಹಿಸುವಂತೆ ಮಾಡಿತು. ಕಲೆಯ ಮೇಲಿನ ನಿಜವಾದ ಪ್ರೀತಿ ಯಾವಾಗಲೂ ಅವರ ಚಿತ್ರಗಳಲ್ಲಿ ತುಂಬಿರುತ್ತದೆ. ಅದಕ್ಕಾಗಿಯೇ ನಾನು ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆʼʼ ಎಂದು ಬರೆದುಕೊಂಡಿದ್ದಾರೆ.

4/5

ಖುಷಿಕೊಟ್ಟ ಚಿತ್ರ, ಪಾತ್ರ

ʼʼನೀವು ಅದ್ಭುತ ವ್ಯಕ್ತಿಗಳೊಂದಿಗೆ, ನಟರೊಂದಿಗೆ ಕೆಲಸ ಮಾಡುವಾಗ ದೊಡ್ಡ ಜವಾಬ್ದಾರಿ ನಿಮ್ಮ ಮೇಲೆಯೂ ಇರುತ್ತದೆ. ಧನುಷ್‌ ಅವರಂತಹ ಅದ್ಭುತ ನಟ ನಿಮ್ಮ ಎದುರಿಗೆ ಇದ್ದಾಗ ನೀವೂ ಅವರಂತೆಯೇ ಪ್ರದರ್ಶನ ತೋರುವುದು ಬಿಟ್ಟರೆ ನಿಮಗೆ ಬೇರೆ ದಾರಿಯಿಲ್ಲ. ಧನುಷ್‌ ಅವರ ದೇವ ಪಾತ್ರದ ಜತೆಗೆ ಸಮೀರಾ ಪಾತ್ರವನ್ನು ನಿರ್ವಹಿಸಲು ಸಂತಸ ತಂದಿದೆʼʼ ಎಂದಿದ್ದಾರೆ.

5/5

ಉತ್ತಮ ಆರಂಭ

ʼಕುಬೇರʼ ಚಿತ್ರಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಆರಂಭ ದೊರೆತಿದೆ. ರಿಲೀಸ್‌ ಆದ ಮೊದಲ ದಿನವೇ 13 ಕೋಟಿ ರೂ. ದೋಚಿಕೊಂಡಿದೆ. ಪಾಸಿಟಿವ್‌ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್‌ಗಳಲ್ಲಿ ಕಲೆಕ್ಷನ್‌ ಹೆಚ್ಚಾಗುವ ಸಾಧ್ಯತೆ ಇದೆ.