ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Snake Parks In India: ಹಾವುಗಳ ಬಗ್ಗೆ ತಿಳಿದುಕೊಳ್ಳಬೇಕೆ? ಇಲ್ಲಿದೆ ಭಾರತದ ಅತ್ಯುತ್ತಮ ಸ್ನೇಕ್‌ ಪಾರ್ಕ್‌ಗಳ ವಿವರ

ಹಾವೆಂದರೆ ಯಾರಿಗೆ ಭಯವಿಲ್ಲ ಹೇಳಿ? ಹಾವು ಹೆಸರು ಕೇಳಿದರೆ ಮಾರುದ್ದ ದೂರು ಓಡುವವರೇ ಅಧಿಕ. ಈ ಭಯದಿಂದಲೇ ಹಾವಿನ ಬಗ್ಗೆ ಹಲವಾರು ಕಟ್ಟುಕಥೆಗಳು ಹುಟ್ಟಿಕೊಂಡಿವೆ. ಜತೆಗೆ ಮಾನವ ಮತ್ತು ಹಾವಿನ ಬಗ್ಗೆ ದೊಡ್ಡದೊಂದು ಅಂತರ ಸೃಷ್ಟಿಯಾಗಿದೆ. ಹಾಗೆ ನೋಡಿದರೆ ಎಲ್ಲ ಹಾವುಗಳೂ ಅಪಾಯಕಾರಿಯಲ್ಲ. ವಿಷರಹಿತ ಹಾವುಗಳೂ ಇವೆ. ಹಾವಿನ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳುವುದರಿಂದ ನಮ್ಮಲ್ಲಿ ಮೂಡಿರುವ ಭಯ ಹೋಗಲಾಡಿಸಬಹುದು ಎನ್ನುತ್ತಾರೆ ಉರಗ ತಜ್ಞರು. ಹಾವಿನ ಬಗ್ಗೆ ತಿಳಿದುಕೊಳ್ಳಲು ನೀವು ಸ್ನೇಕ್‌ ಪಾರ್ಕ್‌ಗೆ ಭೇಟಿ ನೀಡಬಹುದು. ಇಲ್ಲಿದೆ ದೇಶದ ಇಂತಹ ಪ್ರಮುಖ ಸ್ನೇಕ್‌ ಪಾರ್ಕ್‌ಗಳ ವಿವರ.

1/5

ಚೆನ್ನೈ ಸ್ನೇಕ್‌ ಪಾರ್ಕ್‌, ತಮಿಳುನಾಡು

ಚೆನ್ನೈಯಲ್ಲಿರುವ ಈ ಸ್ನೇಕ್‌ ಪಾರ್ಕ್‌ ಅನ್ನು 1972ರಲ್ಲಿ ಪ್ರಸಿದ್ಧ ಸರೀಸೃಪ ಶಾಸ್ತ್ರಜ್ಞ ರೊಮುಲಸ್ ವಿಟೇಕರ್ ಸ್ಥಾಪಿಸಿದರು. ಇದು ಹಾವುಗಳ ಸಂರಕ್ಷಣೆ ಮತ್ತು ಅಧ್ಯಯನಕ್ಕೆ ಮೀಸಲಾಗಿರುವ ಭಾರತದ ಮೊದಲ ಸ್ನೇಕ ಪಾರ್ಕ್‌. ಇದು ಗಿಂಡಿ ರಾಷ್ಟ್ರೀಯ ಉದ್ಯಾನವನದೊಳಗೆ ಇದೆ. ಇಲ್ಲಿ ನಾಗರ ಹಾವು, ಭಾರತೀಯ ಹೆಬ್ಬಾವು, ವೈಪರ್‌, ಮಾನಿಟರ್ ಹಲ್ಲಿ, ಆಮೆ, ಮೊಸಳೆ ಮತ್ತಿತರ ಜೀವಿಗಳಿವೆ.

2/5

ಬನ್ನೇರುಘಟ್ಟ ಸ್ನೇಕ್‌ ಪಾರ್ಕ್‌, ಕರ್ನಾಟಕ

ಬೆಂಗಳೂರಿನಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಾಣಿಪ್ರಿಯ ನೆಚ್ಚಿನ ತಾಣ. ವಿವಿಧ ಪ್ರಾಣಿ ಪಕ್ಷಿಗಳ ಜತೆ ಇದು ಕಾಳಿಂಗ ಸರ್ಪ, ನಾಗರಹಾವು, ಹೆಬ್ಬಾವು ಸೇರಿದಂತೆ ವಿವಿಧ ವರ್ಗದ ಹಾವುಗಳ ಆವಾಸಸ್ಥಾನವೂ ಹೌದು.

3/5

ಪಿಲಿಕುಳ ಸ್ನೇಕ್‌ ಪಾರ್ಕ್‌, ಕರ್ನಾಟಕ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹಲವು ರೀತಿಯ ಹಾವುಗಳಿವೆ. ಕಾಳಿಂಗ ಸರ್ಪ, ನಾಗರ ಹಾವು, ಹೆಬ್ಬಾವು, ಕೇರೆ ಹಾವು, ಹಸಿರು ಹಾವು ಸೇರಿದಂತೆ ವಿಷ ಸಹಿತ ಮತ್ತು ವಿಷ ರಹಿತ ಹಾವುಗಳನ್ನು ನೀವು ಇಲ್ಲಿ ನೋಡಬಹುದು.

4/5

ಪರಶಿನಕಡವು ಸ್ನೇಕ್‌ ಪಾರ್ಕ್‌, ಕೇರಳ

ಹಾವಿನ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ನೀವು ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಪರಶಿನಕಡವು ಉರಗ ಉದ್ಯಾನವನಕ್ಕೂ ಭೇಟಿ ನೀಡಬಹುದು. ಇದು ಪ್ರಸಿದ್ಧ ಉರಗ ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರ. ಈ ವಿಶಿಷ್ಟ ಉದ್ಯಾನವನವನ್ನು ಹಾವುಗಳು ಮತ್ತು ಇತರ ಸರೀಸೃಪಗಳ ರಕ್ಷಣೆ ಮತ್ತು ಪುನರ್ವಸತಿಗಾಗಿ ನಿರ್ಮಿಸಲಾಗಿದೆ. ಈ ಉದ್ಯಾನವನವು ನಾಗರಹಾವು, ರಸ್ಸೆಲ್ಸ್ ವೈಪರ್, ಕ್ರೈಟ್, ಹೆಬ್ಬಾವು ಜತೆಗೆ ಮಾನಿಟರ್ ಹಲ್ಲಿ, ಮೊಸಳೆ ಮತ್ತು ಆಮೆಯ ಆಶ್ರಯ ತಾಣ ಎನಿಸಿಕೊಂಡಿದೆ.

5/5

ಕತ್ರಜ್‌ ಸ್ನೇಕ್‌ ಪಾರ್ಕ್‌, ಮಹಾರಾಷ್ಟ್ರ

ಇದು ಮಹಾರಾಷ್ಟ್ರದ ಪುಣೆಯಲ್ಲಿರುವ ರಾಜೀವ್ ಗಾಂಧಿ ಪ್ರಾಣಿಶಾಸ್ತ್ರ ಉದ್ಯಾನವನದಲ್ಲಿದೆ. ಇದು ಅಪರೂಪದ ಅಲ್ಬಿನೋ ಕೋಬ್ರಾ ಸೇರಿದಂತೆ ವಿವಿಧ ವಿಷಕಾರಿ ಮತ್ತು ವಿಷಕಾರಿಯಲ್ಲದ ಹಾವುಗಳಿಗೆ ನೆಲೆಯಾಗಿದೆ. ಈ ಉದ್ಯಾನವನವು ಭಾರತೀಯ ಸರ್ಪ, ರಸ್ಸೆಲ್ಸ್ ವೈಪರ್, ಇಂಡಿಯನ್ ರಾಕ್ ಪೈಥಾನ್, ಕಾಮನ್ ಕ್ರೈಟ್, ಘರಿಯಲ್‌ಗಳು ಸೇರಿದಂತೆ ಮೊಸಳೆಗಳು, ಆಮೆಗಳು ಮತ್ತು ಮಾನಿಟರ್ ಹಲ್ಲಿಗಳು ಸೇರಿದಂತೆ 160ಕ್ಕೂ ಹೆಚ್ಚು ಜೀವಿಗಳಿವೆ.