Sonu Srinivas Gowda: ಬಿಕಿನಿ ತೊಟ್ಟು ಶ್ರೀಲಂಕಾ ಬೀಚ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಸೋನು ಗೌಡ
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದ, ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಸೋನು ಶ್ರೀನಿವಾಸ ಗೌಡ ಆಗಾಗ ವಿದೇಶಗಳಿಗೆ ಪ್ರವಾಸ ಮಾಡುತ್ತ ತಮ್ಮ ಹಾಟ್ ಫೋಟೊಗಳನ್ನು ಪೋಸ್ಟ್ ಮಾಡಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರು ಶ್ರೀಲಂಕಾಕ್ಕೆ ಹಾರಿದ್ದು, ಅಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಜತೆಗೆ ಬೀಚ್‌ನಲ್ಲಿ ಬಿಕಿನಿ ಧರಿಸಿ ಬೋಲ್ಡಾಗಿ ಕಾಣಿಸಿಕೊಂಡು ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ.
ʼʼರೆಡ್ ಸೀ ಶ್ರೀಲಂಕಾʼʼ ಎಂದು ಕ್ಯಾಪ್ಶನ್ ನೀಡಿ ಅವರು ಈ ಬೋಲ್ಡ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸಮುದ್ರ ದಡದಲ್ಲಿ ನಿಂತು ಸೆಕ್ಸಿಯಾಗಿ ಪೋಸ್ ನೀಡಿದ ಸೋನು ಗೌಡ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರು ಈ ಫೋಟೊಗಳನ್ನು ಹಾಟ್ ಎಂದು ಕರೆದರೆ, ಕೆಲವರು ಕಮೆಂಟ್ ಸೆಕ್ಷನ್‌ನಲ್ಲಿ ಬೆಂಕಿಯ ಇಮೋಜಿ ಹಾಕುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʼʼಬ್ಯಾಡ್ ಕಮೆಂಟ್ಸ್ ಮಾಡಿ. ಚಿತ್ರದಲ್ಲಿ ಈ ಥರ ಬಟ್ಟೆ ಹಾಕಿದ್ರೆ ಜೊಲ್ಲು ಸುರಿಸಿಕೊಂಡು ನೋಡ್ತಿರ. ಅದೇ ನಾವು ಹಾಕಿದ್ರೆ ತಪ್ಪು. ಇಷ್ಟ ಇದ್ರೆ ನೋಡಿ ಇಲ್ಲ ಬ್ಲಾಕ್ ಮಾಡಿʼʼ ಎಂದು ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಸೋನು ಗೌಡ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕೆಲವು ಸಮಯಗಳ ಹಿಂದೆ ಅವರು ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದ ಸಮಯದಲ್ಲಿಯೂ ಹಾಟ್ ಆಗಿ ಪೋಸ್ ನೀಡುವ ಮೂಲಕ ಗಮನ ಸೆಳೆದಿದ್ದರು. ಅವರ ಬೋಲ್ಡ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.
ಕಳೆದ ವರ್ಷ ಸೋನು ಗೌಡ ಅವರಿಗೆ ಅಕ್ರಮವಾಗಿ ಬಾಲಕಿಯನ್ನು ದತ್ತು ಪಡೆದ ವಿವಾದ ಸುತ್ತಿಕೊಂಡಿತ್ತು. ಈ ಆರೋಪದ ಮೇಲೆ ಅವರು ಜೈಲು ಸೇರಿದ್ದರು. 2024ರ ಮಾರ್ಚ್ 22ರಂದು ಸೋನು ಗೌಡ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. 14 ದಿನಗಳ ನ್ಯಾಯಾಂಗ ಬಂಧನದ ಬಳಿಕ ಸೋನು ಅವರಿಗೆ ಜಾಮೀನು ಸಿಕ್ಕಿತ್ತು. ಸೋನು ಗೌಡ ಅವರ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು.