ಬೆಂಗಳೂರು: ಆಕರ್ಷಕ ರ‍್ಯಾಪ್, ಪಾರ್ಟಿ ಸಾಂಗ್‌ಗಳ ಮೂಲಕ ಯುವ ಜನರ ಗಮನ ಸೆಳೆದಿರುವ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ (Rapper Chandan Shetty) ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕ್ರಿಕೆಟ್ ದಿಗ್ಗಜ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ (chris gayle rap song) ಜತೆ ಹೊಸ ರ‍್ಯಾಪ್ ಹಾಡೊಂದನ್ನು ಚಂದನ್ ಶೆಟ್ಟಿ ಶೂಟ್ ಮಾಡುತ್ತಿದ್ದಾರೆ. ಈ ಕೊಲ್ಯಾಬೊರೇಷನ್ ಬಗ್ಗೆ ಕ್ರಿಸ್ ಗೇಲ್ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಚಂದನ್ ಶೆಟ್ಟಿಯನ್ನು ʻರಾಕ್ ಸ್ಟಾರ್ʼ ಎಂದು ಕರೆದು ಪರಿಚಯಿಸಿದ್ದಾರೆ.
ವಿಡಿಯೋದಲ್ಲಿ ಚಂದನ್ ಶೆಟ್ಟಿ ಮಾತನಾಡಿ, ಯೂನಿವರ್ಸಲ್ ಬಾಸ್ ಜತೆಗೆ ʻಲೈಫ್ ಈಸ್ ಕಸಿನೋʼ ಎಂಬ ಹಾಡನ್ನು ಮಾಡುತ್ತಿದ್ದೇವೆ. ನಾನಂತೂ ಸಿಕ್ಕಾಪಟ್ಟೆ ಎಕ್ಸೈಟೈಡ್ ಆಗಿದ್ದೇನೆ. ರ‍್ಯಾಪ್ ಭಾಗವನ್ನು ಬಾಸ್ ಅದ್ಭುತವಾಗಿ ಮಾಡಿದ್ದಾರೆ. ಅವರ ರ‍್ಯಾಪ್‌ಗೆ ನಾನು ಫ್ಯಾನ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಈ ಹಾಡು ಇಷ್ಟವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ್ದಾರೆ.
ವಿಡಿಯೋ ವೈರಲ್
ಕ್ರಿಸ್ ಗೇಲ್ ಕೂಡ ಈ ಕೊಲ್ಯಾಬೋರೇಷನ್ ಬಗ್ಗೆ ಖುಷಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಹಾಡಿನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು, “ಅನಿರೀಕ್ಷಿತ ಕೊಲ್ಯಾಬ್, ಏನ್ ಗುರು ನಿನ್ ಲೆವೆಲ್, ನಾವು ಕಾದು ಕುಳಿತಿದ್ದೇವೆ” ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಚಂದನ್ ಶೆಟ್ಟಿ ಮತ್ತು ಕ್ರಿಸ್ ಗೇಲ್‌ರ ಈ ಕೊಲ್ಯಾಬೋರೇಷನ್ ಕನ್ನಡ ಸಂಗೀತಕ್ಕೆ ಒಂದು ಅಂತಾರಾಷ್ಟ್ರೀಯ ಆಯಾಮವನ್ನು ತಂದಿದೆ. ಕನ್ನಡದ ರ‍್ಯಾಪ್ ಹಾಡುಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಈ ಪ್ರಯತ್ನವು, ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ʻಲೈಫ್ ಈಸ್ ಕಸಿನೋʼ ಹಾಡಿನ ರಿಲೀಸ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ | Kataka 2: ಮತ್ತೊಂದು ಸಾಹಸಕ್ಕೆ ಕೈ ಹಾಕಿದ ರವಿ ಬಸ್ರೂರು; 'ಕಟಕ 2' ಚಿತ್ರದ ತಂದೆ-ಮಗಳ ಎಮೋಷನಲ್ ಹಾಡು ರಿಲೀಸ್