ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi Birthday: ಸಂಸ್ಕೃತ ಶ್ಲೋಕದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಬರ್ತ್‌ಡೇ ವಿಶ್‌ ಮಾಡಿದ ಜಗ್ಗೇಶ್

Jaggesh: ಮೋದಿ ಅವರ ದೃಢ ನಾಯಕತ್ವ, ಜನಪರ ಆಡಳಿತದಿಂದಲೇ ಇಡೀ ಭಾರತ ಹೊಸ ಯುಗ ಪ್ರವೇಶಿಸುತ್ತಿದೆ. ಸ್ವಚ್ಛ್ ಭಾರತ್, ಆತ್ಮನಿರ್ಭರ್ ಭಾರತ್, ಡಿಜಿಟಲ್ ಇಂಡಿಯಾ ಇವೆಲ್ಲ ನಿಮ್ಮ ದೃಷ್ಟಿಕೋನದ ಪ್ರತಿಬಿಂಬವೇ ಆಗಿವೆ. ಇವು ಯುವ ಜನತೆಗೆ ಪ್ರೇರಣೆಯ ಮೂಲಕವೇ ಆಗಿವೆ ಎಂದು ಜಗ್ಗೇಶ್‌ ಹಾರೈಸಿದ್ದಾರೆ.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi Birthday) ಅವರಿಗೆ ದೇಶದ ಬಹುತೇಕ ಎಲ್ಲ ಗಣ್ಯರಿಂದ 75 ಜನ್ಮದಿನದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಕನ್ನಡ ಚಿತ್ರರಂಗದ ಗಣ್ಯರೂ ಶುಭಾಶಯ ಕೋರಿದ್ದಾರೆ. ನವರಸ ನಾಯಕ ಜಗ್ಗೇಶ್ (Jaggesh) ಅವರು ಮೋದಿಯವರಿಗೆ ಸಂಸ್ಕೃತ ಶೋಕವನ್ನು ಉಲ್ಲೇಖಿಸಿ, ಮೋದಿಯವರೊಂದಿಗೆ ತಾವು ತೆಗೆಸಿಕೊಂಡ ಫೋಟೋ ಪೋಸ್ಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ನರೇಂದ್ರ ಮೋದಿ ಅವರೊಟ್ಟಿಗಿನ ತಮ್ಮ ಫೋಟೋ ಕೂಡ ಹಂಚಿಕೊಂಡಿರುವ ಜಗ್ಗೇಶ್‌, ವಿಶೇಷ ಡಿಸೈನ್‌ನ ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ.

ಯೋಗಯುಕ್ತೋ ವಿಶುದ್ಧಾತ್ಮಾ

ವಿಜಿತಾತ್ಮಾ ಜಿತೇಂದ್ರಿಯಃ|

ಸರ್ವಭೂತಾತ್ಮಾಭೂತಾತ್ಮಾ

ಕುರ್ವನ್ನಪಿ ನ ಲಿಪ್ಯತೇ ||೭||

ಇಂದ್ರಿಯ ಮನಸ್ಸು ನಿಗ್ರಹಿಸಿ ಭಕ್ತಿಯಿಂದ ಯಾರು ಕಾರ್ಯಮಾಡುತ್ತಾರೆ ಆತ ಎಲ್ಲಾ ಜೀವಿಯ ಪ್ರಿಯನು ಹಾಗು ಎಲ್ಲರ ಮೇಲೆ ಕರುಣೆವುಳ್ಳವನು.. #narendramodi ರವರಿಗೆ ಹುಟ್ಟುಹಬ್ಬದ ಶುಭಾಶಯಗಳು- ಎಂದು ಜಗ್ಗೇಶ್‌ ಬರೆದಿದ್ದಾರೆ. ಈ ವಿಶೇಷ ಸಾಲುಗಳ ಜೊತೆಗೆ ಪೋಸ್ಟರ್ ಕೂಡ ಹಂಚಿಕೊಂಡಿದ್ದು, ಇದರಲ್ಲಿ ಮೋದಿಯವರನ್ನು ಮೀಟ್ ಆಗಿರುವ ಸಮಯದಲ್ಲಿ ತೆಗೆದುಕೊಂಡ ಅವರ ಫೋಟೋ ಸಹ ಇದೆ.



ಭಾರತ ಹೊಸ ಯುಗ ಪ್ರವೇಶಿಸುತ್ತಿದೆ. ಮೋದಿ ಅವರ ದೃಢ ನಾಯಕತ್ವ, ಜನಪರ ಆಡಳಿತದಿಂದಲೇ ಇಡೀ ಭಾರತ ಹೊಸ ಯುಗ ಪ್ರವೇಶಿಸುತ್ತಿದೆ. ಸ್ವಚ್ಛ್ ಭಾರತ್, ಆತ್ಮನಿರ್ಭರ್ ಭಾರತ್, ಡಿಜಿಟಲ್ ಇಂಡಿಯಾ ಇವೆಲ್ಲ ನಿಮ್ಮ ದೃಷ್ಟಿಕೋನದ ಪ್ರತಿಬಿಂಬವೇ ಆಗಿವೆ. ಇವು ಯುವ ಜನತೆಗೆ ಪ್ರೇರಣೆಯ ಮೂಲಕವೇ ಆಗಿವೆ. ನಮ್ಮ ಕಾರ್ಯಕರ್ತರಿಗೆ ಮಾರ್ಗದರ್ಶಕ ಶಕ್ತಿ ಆಗಿವೆ. ನಿಮ್ಮ ಹುಟ್ಟುಹಬ್ಬದ ಈ ವಿಶೇಷ ದಿನದಲ್ಲಿ ನಿಮ್ಮ ಆಯುಷ್ಯ, ಆರೋಗ್ಯ ಹಾಗೂ ಯಶಸ್ವಿಗಾಗಿಯೇ ಪ್ರಾರ್ಥಿಸುವೆ. ಶುಭಾಶಯ ಕೋರುತ್ತಿರುವ ರಾಜ್ಯಸಭಾ ಸದಸ್ಯ ಜಗ್ಗೇಶ್ʼ ಎಂದು ಪೋಸ್ಟರ್‌ನಲ್ಲಿ ಜಗ್ಗೇಶ್ ಬರೆಸಿಕೊಂಡಿದ್ದಾರೆ. ಇದನ್ನು ನೋಡಿದ ಜಗ್ಗೇಶ್ ಫ್ಯಾನ್ಸ್ ಕೂಡ ಕಾಮೆಂಟ್ ಬಾಕ್ಸ್‌ನಲ್ಲಿ ಮೋದಿಯವರಿಗೆ ಶುಭಾಶಯ ತಿಳಿಸಿದ್ದಾರೆ.

ಹರೀಶ್‌ ಕೇರ

View all posts by this author