ಬೆಂಗಳೂರು : ಬೆಂಗಳೂರಿನ ಬಾಣಸವಾಡಿಯಲ್ಲಿ (Bengaluru Crime news) ಒಂದು ಶಾಲಾ ಬಸ್ ತಡರಾತ್ರಿ ಹೊತ್ತಿ ಉರಿದಿದ್ದು, ನಂತರ ಪರಿಶೀಲಿಸಿದಾಗ ಬಸ್‌ನೊಳಗೆ ಸುಟ್ಟು ಕರಕಲಾದ ವ್ಯಕ್ತಿಯ ಶವ (body found) ಪತ್ತೆಯಾಗಿದೆ. ಬೆಂಗಳೂರಿನ ಬಾಣಸವಾಡಿಯಲ್ಲಿ ಕಳೆದ 4 ತಿಂಗಳಿಂದ ಈ ಶಾಲಾ ಬಸ್ಸನ್ನು ಓಡಿಸದೆ ನಿಲ್ಲಿಸಲಾಗಿತ್ತು. ನಿನ್ನೆ ತಡರಾತ್ರಿ ಬಸ್ ಹೊತ್ತಿ ಉರಿದಿದೆ. ಅದರೊಳಗೆ ವ್ಯಕ್ತಿಯ ಶವ ಪತ್ತೆಯಾಗಿದೆ. ಕೊಲೆ ಮಾಡಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಯಾರೂ ಉಪಯೋಗಿಸದೆ ನಿಲ್ಲಿಸಿದ್ದ ಈ ಬಸ್ಸು ಪಡ್ಡೆ ಹುಡುಗರ ಅಡ್ಡೆಯಾಗಿತ್ತು. ಅದರೊಳಗೆ ಹುಡುಗರು ಮದ್ಯ ಸೇವನೆ, ಗಾಂಜಾ ಸೇವನೆ ನಡೆಸುತ್ತಿದ್ದರು. ಹೀಗಾಗಿ ಬಸ್‌ನೊಳಗೆ ಎಣ್ಣೆ ಹೊಡೆದು, ವ್ಯಕ್ತಿಯನ್ನು ಕೊಲೆ ಮಾಡಿ ಬಸ್‌ಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಬಾಣಸವಾಡಿಯ ಅಗ್ನಿಶಾಮಕ ಕಚೇರಿ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
ಮೆಟ್ರೋ ರೈಲಿನ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಯತ್ನ
ಬೆಂಗಳೂರು: ಮೆಜೆಸ್ಟಿಕ್ ನಮ್ಮ ಮೆಟ್ರೋ (Namma Metro) ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಟ್ರೈನ್ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಟ್ರ್ಯಾಕಿಗೆ ಜಿಗಿದಿದ್ದಾನೆ. ಆತ್ಮಹತ್ಯೆಗೆ (Self Harming) ಯತ್ನಿಸಿದವ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ನಿನ್ನೆ ರಾತ್ರಿ 10.04ರ ಸುಮಾರಿಗೆ ಈ ಘಟನೆ ನಡೆದಿದೆ. ಹಸಿರು ಮಾರ್ಗದ ಮೆಟ್ರೊ ಲೈನ್ ಫ್ಲಾಟ್ ಫಾರ್ಮ್ 1ರಲ್ಲಿ 35 ವರ್ಷದ ವ್ಯಕ್ತಿ ಮೆಟ್ರೊ ಟ್ರ್ಯಾಕಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ. ಟ್ರೈನ್ ಬರುವ ವೇಳೆ ವ್ಯಕ್ತಿಯು ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕಾರಣ ಗಂಭೀರ ಗಾಯಗಳಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೆಟ್ರೋದಲ್ಲಿ ಬಿಗಿ ಸೆಕ್ಯೂರಿಟಿ ಇದ್ದರೂ ಇಂತಹ ಘಟನೆಗಳು ಸಂಭವಿಸುತ್ತಲೇ ಇದೆ. ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಗಳು ಈ ಹಿಂದಿಯೂ ದಾಖಲಾಗಿದೆ. ಹೀಗಾಗಿ ಬಿಎಂಆರ್ಸಿಎಲ್ ಮತ್ತಷ್ಟು ಭದ್ರತೆ ಹೆಚ್ಚಿಸಿದೆ.
ಇದನ್ನೂ ಓದಿ: Cauvery Wildlife Sanctuary: ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳ ಸಾವು