ಲಿಂಗಸುಗೂರಿನಲ್ಲಿ ಮೊಹರಂ ಆಚರಣೆ ವೇಳೆ ಬೆಂಕಿಯಲ್ಲಿ ಬಿದ್ದು ವ್ಯಕ್ತಿ ಸಾವು
Raichur News: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗುಂಟಿಯಲ್ಲಿ ಅವಘಡ ನಡೆದಿದೆ. ಅಲಾಯಿ ಕುಣಿಯಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ. ಬೆಂಕಿ ದೊಡ್ಡ ಪ್ರಮಾಣದಲ್ಲಿ ಹೊತ್ತಿ ಉರಿಯುತ್ತಿದ್ದರಿಂದ ಸ್ಥಳದಲ್ಲೇ ನೂರಾರು ಜನರಿದ್ದರೂ ಯುವಕನನ್ನು ರಕ್ಷಿಸಲು ಅಸಹಾಯಕರಾಗಿದ್ದಾರೆ.