Self Harming: ಗೆಳತಿ ಸೈಕಲ್ ಕೊಡಲಿಲ್ಲ ಎಂದು ಪುಟ್ಟ ಬಾಲಕಿ ಆತ್ಮಹತ್ಯೆ
ಪಕ್ಕದ ಮನೆ ಗೆಳತಿ ಜೊತೆ ಬಾಲಕಿ ಪ್ರತಿನಿತ್ಯ ಸೈಕಲ್ ಆಡುತ್ತಿದ್ದಳು. ಅವಳು ಅಂದು ಆಡುವುದಕ್ಕೆ ಸೈಕಲ್ ಕೊಟ್ಟಿಲ್ಲ ಎಂದು ಮನನೊಂದು ಸ್ಪಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಷ್ಟು ಸಣ್ಣ ಬಾಲಕಿಗೆ ಕರಾರುವಕ್ಕಾಗಿ ನೇಣು ಬಿಗಿದುಕೊಳ್ಳುವುದಕ್ಕೆ ತಿಳಿದದ್ದು ಕೂಡ ಆಶ್ಚರ್ಯಕರವಾಗಿದೆ.

ಮೃತ ಸ್ಪಂದನಾ

ಚಿತ್ರದುರ್ಗ: ಸಾವು ಎಂದರೇನು, ಬದುಕು ಎಂದರೇನು ಎಂದು ತಿಳಿಯದ ವಯಸ್ಸಿನಲ್ಲಿ ಆತ್ಮಹತ್ಯೆ (Self Harming) ಮಾಡಿಕೊಳ್ಳುವ ಪುಟ್ಟ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಚಿತ್ರದುರ್ಗದಲ್ಲಿ (Chitradurga news) ಇಂಥದೊಂದು ಘೋರ ಘಟನೆ ನಡೆದಿದೆ. ಪಕ್ಕದ ಮನೆ ಸ್ನೇಹಿತೆ ಸೈಕಲ್ ಕೊಟ್ಟಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಿಲ್ಲೆಯ ಹಿರಿಯೂರು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗೋಪಾಲ ಮತ್ತು ರುದ್ರಮ್ಮ ದಂಪತಿ ಪುತ್ರಿ ಸ್ಪಂದನಾ (11) ಮನೆಯಲ್ಲಿ ನೇಣು ಬಿಗಿದುಕೊಂಡು (Hanging) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪಕ್ಕದ ಮನೆ ಗೆಳತಿ ಜೊತೆ ಬಾಲಕಿ ಪ್ರತಿನಿತ್ಯ ಸೈಕಲ್ ಆಡುತ್ತಿದ್ದಳು. ಅವಳು ಅಂದು ಆಡುವುದಕ್ಕೆ ಸೈಕಲ್ ಕೊಟ್ಟಿಲ್ಲ ಎಂದು ಮನನೊಂದು ಸ್ಪಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಷ್ಟು ಸಣ್ಣ ಬಾಲಕಿಗೆ ಕರಾರುವಕ್ಕಾಗಿ ನೇಣು ಬಿಗಿದುಕೊಳ್ಳುವುದಕ್ಕೆ ತಿಳಿದದ್ದು ಕೂಡ ಆಶ್ಚರ್ಯಕರವಾಗಿದೆ.
ಗೋಕರ್ಣದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ನೀರುಪಾಲು
ಗೋಕರ್ಣ: ಪ್ರವಾಸಕ್ಕೆ ಹೋಗಿದ್ದ ವೇಳೆ ತಮಿಳುನಾಡು ಮೂಲದ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ (Gokarna tragedy) ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯರನ್ನು ಕಾಂಝಿಮೋಳಿ ಮತ್ತು ಸಿಂಧುಜಾ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಇಲ್ಲಿನ ಜಟಾಯು ತೀರ್ಥದಲ್ಲಿ ಈಜಲು ಇಳಿದಿದ್ದಾಗ ಸಮುದ್ರದ ಅಲೆಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ವಿದ್ಯಾರ್ಥಿನಿಯರು ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಸಮುದ್ರದ ಅಲೆಗಳು ಜೋರಾಗಿದ್ದರಿಂದ ರಕ್ಷಿಸಲು ಸಾಧ್ಯವಾಗಿಲ್ಲ. ಮೃತರು ತಮಿಳುನಾಡಿನ ತಿರುಚ್ಚಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇವರು ಅಂತಿಮ ವರ್ಷದ ಅಧ್ಯಯನವನ್ನು ಮುಗಿಸಿ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಸುದೀರ್ಘ ಹುಡುಕಾಟದ ನಂತರ ರಕ್ಷಣಾ ತಂಡವು ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Murder case: ಕೇರಳದ ಉದ್ಯಮಿ ಕೊಡಗಿನ ತೋಟದ ಮನೆಯಲ್ಲಿ ಕೊಲೆ