ಮಂಗಳೂರು: ದಕ್ಷಿಣ ಕನ್ನಡ (dakshina kannada) ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ (PSI) ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಪಿಎಸ್‌ಐ ಕೀರಪ್ಪ ಗಟಕಂಬಳಿ ಬಂಟ್ವಾಳ (Bantwala) ಪೇಟೆಯಲ್ಲಿದ್ದ ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ನಿನ್ನೆ ಬೆಳಗ್ಗೆ ಡ್ಯೂಟಿಗೆ ಗೈರಾಗಿದ್ದ ಪಿಎಸ್ಐ ಮನೆಯಲ್ಲೇ ಇದ್ದರು. ಪೊಲೀಸ್ ಠಾಣೆ ಸಿಬ್ಬಂದಿ ಕಾಲ್ ಮಾಡಿದ್ರೂ ರಿಸೀವ್ ಮಾಡಿರಲಿಲ್ಲ. ಸಂಜೆ ಅವರ ಬಾಡಿಗೆ ಮನೆಗೆ ಹೋಗಿದ್ದಾಗ, ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಆಗಿದ್ದ ಕೀರಪ್ಪ ಗಟಕಂಬಳಿ ಬಂಟ್ವಾಳ ಪೇಟೆಯಲ್ಲಿದ್ದ ಬಾಡಿಗೆ ಮನೆಯಲ್ಲಿದ್ದರು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಿವಾಸಿಯಾಗಿದ್ದ 54 ವರ್ಷದ ಕೀರಪ್ಪ ಗಟಕಂಬಳಿ ಇಲ್ಲಿ ಒಬ್ಬರೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರ ಇಡೀ ಕುಟುಂಬ ಕಾರವಾರದಲ್ಲೇ ಇತ್ತು. ಇವರು ಶಿರಸಿ ಪೊಲೀಸ್ ಠಾಣೆಯಿಂದ ಕಳೆದ 5 ತಿಂಗಳ ಹಿಂದಷ್ಟೇ ವರ್ಗಾವಣೆಯಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದಿದ್ದು, ಬಂಟ್ವಾಳದ ತನಿಖಾ ವಿಭಾಗದ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಆನ್‌ಲೈನ್ ಬೆಟ್ಟಿಂಗ್‌ಗೆ ಬ್ಯಾಂಕ್ ಸಾಲ ಮಾಡಿ ಕಳೆದುಕೊಂಡ ಉದ್ಯೋಗಿ ಆತ್ಮಹತ್ಯೆ
ಬೆಂಗಳೂರು : ಲಕ್ಷಗಟ್ಟಲೆ ಹಣ ಸಾಲ ಮಾಡಿಕೊಂಡು ಅದನ್ನು ಆನ್‌ಲೈನ್ ಬೆಟ್ಟಿಂಗ್‌ಗೆ (Online Betting) ಚೆಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಬೆಂಗಳೂರಿನಲ್ಲಿ (bengaluru) ಖಾಸಗಿ ಬ್ಯಾಂಕ್ ಉದ್ಯೋಗಿ ಒಬ್ಬರು ತಾನು ಕೆಲಸ ಮಾಡುವ ಬ್ಯಾಂಕ್‌ನಲ್ಲೆ ಸಾಲ ಪಡೆದು ಸಾಲ (loan) ತೀರಿಸಲಾಗದೆ ಬೆಟ್ಟಿಂಗ್‌ನಲ್ಲಿ ಸೋತು ಮನನೊಂದು ಆತ್ಮಹತ್ಯೆಗೆ (Self Harming) ಶರಣಾಗಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿ ಮನೋಜ್ ಕುಮಾರ್ (25) ಸೆಲ್ಫಿ ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಿಂದ ಲೋನ್ ಪಡೆದು ಮೃತ ಮನೋಜ್ ಕುಮಾರ್ ಬೆಟ್ಟಿಂಗ್ ಆಡುತ್ತಿದ್ದರು. ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ಹಣ ಕಳೆದುಕೊಂಡಿದ್ದ ಮನೋಜ್ ಕುಮಾರ್ ಮನನೊಂದು ನೇಣಿಗೆ ಶರಣಾಗಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆ ಕುರಿತು ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Self Harming: ಮದುವೆಗೆ ಹೆಣ್ಣು ಸಿಗಲಿಲ್ಲ ಎಂದು ಮನನೊಂದು ಹೋಮ್ ಗಾರ್ಡ್ ಆತ್ಮಹತ್ಯೆ