ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ದರ್ಶನ್‌ ಜಾಮೀನು ವಿಚಾರ ಇಂದು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು, ಬೇಲ್‌ ಸಿಗದಿದ್ರೆ 6 ತಿಂಗಳು ಜೈಲು

Renukaswamy Murder case: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 7 ಮಂದಿ ಆರೋಪಿಗಳು ಜೈಲು ಪಾಲಾಗಿದ್ದರು. ಸುಪ್ರೀಂ ಕೋರ್ಟ್ ಆರೋಪಿಗಳ​​ ಜಾಮೀನು ರದ್ದು ಮಾಡಿದರೆ ದರ್ಶನ್ ಮತ್ತೆ ಆರು ತಿಂಗಳು ಜೈಲು ಸೇರಬೇಕಾದ ಸ್ಥಿತಿ ಬರಲಿದೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (Renukaswamy Murder case) ಕನ್ನಡದ ನಟ ದರ್ಶನ್ (Actor Darshan) ಹಾಗೂ ನಟಿ ಪವಿತ್ರಾ ಗೌಡ ಸೇರಿದಂತೆ 7 ಮಂದಿ ಆರೋಪಿಗಳಿಗೆ ನೀಡಲಾಗಿರುವ ಜಾಮೀನಿನ ಕುರಿತು ಇಂದು ಸುಪ್ರೀಂ ಕೋರ್ಟ್‌ (supreme court) ಮಹತ್ವದ ತೀರ್ಪು ನೀಡಲಿದೆ. 5 ತಿಂಗಳ ಕಾಲ ಜೈಲುವಾಸ ಅನುಭವಿಸಿದ ನಟ ದರ್ಶನ್​ಗೆ ಹೈಕೋರ್ಟ್ (Karnataka high court) ಜಾಮೀನು ನೀಡಿತ್ತು. ಹೈಕೋರ್ಟ್​​ ಬೇಲ್​​ ಮಂಜೂರು ಪ್ರಶ್ನಿಸಿ ರಾಜ್ಯ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಮಹದೇವನ್ ನೇತೃತ್ವದ ದ್ವಿಸದಸ್ಯ ಪೀಠವು ವಿಚಾರಣೆ ಮುಂದುವರಿಸಲಿದೆ. ರಾಜ್ಯ ಸರ್ಕಾರ ಪರ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿ, ದಾಖಲೆಗಳನ್ನು ನೀಡಿದ್ದರು. ದರ್ಶನ್ ಪರ ಖ್ಯಾತ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ. ಇಂದೇ ಸುಪ್ರೀಂ ಕೋರ್ಟ್ ತನ್ನ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಿದೇಶದ​ಲ್ಲಿ ಶೂಟಿಂಗ್ ಮಾಡುತ್ತಿರುವ ದರ್ಶನ್‌ಗೂ ಬೇಲ್​ ಟೆನ್ಷನ್​ ಹೆಚ್ಚಿದ್ದು, ಎಲ್ಲರ ಚಿತ್ತ ಸುಪ್ರೀಂ ತೀರ್ಪಿನತ್ತ ಇದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​, ನಟಿ ಪವಿತ್ರಾ ಗೌಡ ಸೇರಿದಂತೆ 7 ಮಂದಿ ಜೈಲು ಪಾಲಾಗಿದ್ದರು. ಸುಪ್ರೀಂ ಕೋರ್ಟ್ ಆರೋಪಿಗಳ​​ ಜಾಮೀನು ರದ್ದು ಮಾಡಿದರೆ ದರ್ಶನ್ ಮತ್ತೆ ಜೈಲು ಸೇರಬೇಕಾದ ಸ್ಥಿತಿ ಬರಲಿದೆ. ಮೆಡಿಕಲ್ ರಿಪೋರ್ಟ್​ಗಳು, ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಪೊಲೀಸರ ಬಳಿ ಇರುವ ಸಾಕ್ಷ್ಯಗಳು, ಪೊಲೀಸರ ಲೋಪಗಳನ್ನ ಮುಂದಿಟ್ಟು ದರ್ಶನ್​ ಪರ ವಕೀಲರು ವಾದ ಮಂಡಿಸಲಿದ್ದಾರೆ. ಪ್ರಮುಖ ಅಂಶಗಳನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿ ಜಾಮೀನು ಮುಂದುವರಿಕೆಗೆ ಮನವಿ ಮಾಡಲಿದ್ದಾರೆ.

ಈಗಾಗಲೇ ದರ್ಶನ್ ವಿರುದ್ಧ ಹಲವು ಅಂಶಗಳನ್ನು ಉಲ್ಲೇಖಿಸಿ ಸರ್ಕಾರದ ಪರ ವಕೀಲರು ವಾದಿಸಿದ್ದಾರೆ. ವಿಟ್ನೆಸ್‌ಗಳ ಜೊತೆ ಸುತ್ತಾಟ, ಸರ್ಜರಿ ನೆಪ ಸೇರಿ ಪ್ರಮುಖ ಅಂಶಗಳ ಬಗ್ಗೆ ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಹೈಕೋರ್ಟ್ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ಹೊರ ಹಾಕಿತ್ತು. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದರೆ 6 ತಿಂಗಳ ಕಾಲ ಮೇಲ್ಮನವಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ. ಆರು ತಿಂಗಳ ಕಾಲ ಜೈಲಿನಲ್ಲೇ ಇರಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ಜಾಮೀನು ರದ್ದಾದ ಬೆನ್ನಲ್ಲೇ ದರ್ಶನ್‌ಗೆ ನೊಟೀಸ್ ಜಾರಿಯಾಗುತ್ತದೆ. ಕೂಡಲೇ ವಿಚಾರಣಾಧೀನ ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಲಾಗುತ್ತದೆ. ನಂತರ ಪೊಲೀಸರು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಅಥವಾ ಬಳ್ಳಾರಿ ಜೈಲಿಗೆ ಕಳಿಸುವ ಸಾಧ್ಯತೆ ಇದೆ. ಜಾಮೀನು ಮುಂದುವರಿಸಲು ಸುಪ್ರೀಂ ಗ್ರೀನ್ ಸಿಗ್ನಲ್​ ಕೊಟ್ಟರೆ ದಾಸನಿಗೆ ಬಿಗ್​ ರಿಲೀಫ್​ ಸಿಗಲಿದೆ.

ಇದನ್ನೂ ಓದಿ: Actor Darshan: ದರ್ಶನ್‌ ಜಾಮೀನು ಭವಿಷ್ಯ ನಾಳೆ ನಿರ್ಧಾರ; ಸುಪ್ರೀಂ ಕೋರ್ಟ್‌ನತ್ತ ಎಲ್ಲರ ಚಿತ್ತ!

ಹರೀಶ್‌ ಕೇರ

View all posts by this author