ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake: ಅಮೆರಿಕದಲ್ಲಿ ಮತ್ತೆ ಭೂಕಂಪ; ಸುನಾಮಿ ಭೀತಿ

South America Earthquake: ದಕ್ಷಿಣ ಅಮೆರಿಕದ ಡ್ರೇಕ್ ಪ್ಯಾಸೇಜ್‌ನಲ್ಲಿ ಶುಕ್ರವಾರ ಬೆಳಿಗ್ಗೆ 7.5 ತೀವ್ರತೆಯ ಭೂಕಂಪ ಸಂಭವಿಸಿದೆದೆ. ಇದರ ಬೆನ್ನಲ್ಲೇ ಚಿಲಿಯ ಅಂಟಾರ್ಕ್ಟಿಕ್ ಪ್ರದೇಶದಲ್ಲಿ ಸುನಾಮಿ ಭೀತಿ ಎದುರಾಗಿದೆ. ಈ ಭೂಕಂಪದ ತೀವ್ರತೆಯನ್ನು ಆರಂಭದಲ್ಲಿ 8.0 ಎಂದು ವರದಿ ಮಾಡಲಾಗಿತ್ತು.

ನವದೆಹಲಿ: ಅಮೆರಿಕದಲ್ಲಿ ಬೆಳ್ಳಂ ಬೆಳಗ್ಗೆ ಮತ್ತ ಪ್ರಬಲ ಭೂಕಂಪ ಸಂಭವಿಸಿದ್ದು, 7.5 ತೀವ್ರತೆ ದಾಖಲಾಗಿದೆ. ದಕ್ಷಿಣ ಅಮೆರಿಕದ ಡ್ರೇಕ್ ಪ್ಯಾಸೇಜ್‌ನಲ್ಲಿ ಶುಕ್ರವಾರ ಬೆಳಿಗ್ಗೆ 7.5 ತೀವ್ರತೆಯ ಭೂಕಂಪ (South America Earthquake) ಸಂಭವಿಸಿದೆದೆ. ಇದರ ಬೆನ್ನಲ್ಲೇ ಚಿಲಿಯ ಅಂಟಾರ್ಕ್ಟಿಕ್ ಪ್ರದೇಶದಲ್ಲಿ ಸುನಾಮಿ ಭೀತಿ ಎದುರಾಗಿದೆ. ಈ ಭೂಕಂಪದ ತೀವ್ರತೆಯನ್ನು ಆರಂಭದಲ್ಲಿ 8.0 ಎಂದು ವರದಿ ಮಾಡಲಾಗಿತ್ತು. ಆದರೆ ನಂತರ ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಅದನ್ನು 7.5 ಕ್ಕೆ ಇಳಿಸಿತು. ಭೂಕಂಪವು 11 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಸಮೀಕ್ಷೆಯು ಹೇಳಿದೆ. ಆರಂಭಿಕ ವರದಿಗಳ ಪ್ರಕಾರ, ದಕ್ಷಿಣ ಅಮೆರಿಕಾ ಮತ್ತು ಅಂಟಾರ್ಕ್ಟಿಕಾದ ದಕ್ಷಿಣ ತುದಿಯ ನಡುವಿನ ಸಮುದ್ರ ಪ್ರದೇಶವಾದ ಡ್ರೇಕ್ ಪ್ಯಾಸೇಜ್‌ನಲ್ಲಿ ಭೂಮಿ ಕಂಪಿಸಿದೆ. ಇನ್ನು ದುರ್ಘಟನೆಯಲ್ಲಿ ಇದುವರೆಗೂ ಯಾವುದೇ ಸಾವು ನೋವು ಸಂಭವಿಸಿಲ್ಲ.

ಇನ್ನು ಈ ಭೂಕಂಪ ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 7:46 ಕ್ಕೆ ಭೂಕಂಪನ ದಾಖಲಾಗಿದೆ. ವಿಜ್ಞಾನಿಗಳ ಪ್ರಕಾರ, ಇಷ್ಟು ಹೆಚ್ಚಿನ ತೀವ್ರತೆಯ ಭೂಕಂಪವು ಸಾಗರದಲ್ಲಿ ಸುನಾಮಿಯಂತಹ ವಿಪತ್ತುಗಳಿಗೆ ಕಾರಣವಾಗಬಹುದು. ಈ ಭೂಕಂಪದಿಂದಾಗಿ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲವಾದರೂ, ಡ್ರೇಕ್ ಪ್ಯಾಸೇಜ್ ಪ್ರದೇಶವನ್ನು ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗಿದೆ. ಇಲ್ಲಿ ಹಠಾತ್ ಕಂಪನಗಳು ಸ್ಥಳೀಯವಾಗಿ ಮಾತ್ರವಲ್ಲದೆ ಜಾಗತಿಕವಾಗಿಯೂ ಕಳವಳವನ್ನು ಉಂಟುಮಾಡಬಹುದು.

ಕಳೆದ ತಿಂಗಳೂ ಅಮೆರಿಕದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು.ಅಮೆರಿಕದ ಅಲಾಸ್ಕಾ ರಾಜ್ಯದ ಕರಾವಳಿಯಲ್ಲಿ ಬುಧವಾರ (ಸ್ಥಳೀಯ ಸಮಯ) ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯ ಭೂಕಂಪ (Earthquake) ಸಂಭವಿಸಿದ್ದು, ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದರು. ಭೂಕಂಪದ ಕೇಂದ್ರಬಿಂದುವು ದ್ವೀಪ ಪಟ್ಟಣವಾದ ಸ್ಯಾಂಡ್ ಪಾಯಿಂಟ್‌ನಿಂದ 87 ಕಿಲೋಮೀಟರ್ ದಕ್ಷಿಣದಲ್ಲಿತ್ತು ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಭೂಕಂಪದ ಕೇಂದ್ರಬಿಂದುವಿನ ಆಳ 20.1 ಕಿಲೋಮೀಟರ್ ಆಗಿತ್ತು.

ಈ ಸುದ್ದಿಯನ್ನೂ ಓದಿ: Viral Video: ತಾಜ್‌ ಮಹಲ್‌ ಒಳಗಿನ ಯಾರೂ ಕಂಡಿರದ ದೃಶ್ಯ ರೆಕಾರ್ಡ್‌! ಶಹಜಹಾನ್- ಮುಮ್ತಾಜ್ ಸಮಾಧಿಗಳ ವಿಡಿಯೊ ವೈರಲ್‌

ಭಾರೀ ಭೂಕಂಪದ ನಂತರ ದಕ್ಷಿಣ ಅಲಾಸ್ಕಾ ಮತ್ತು ಅಲಾಸ್ಕಾ ಪರ್ಯಾಯ ದ್ವೀಪಕ್ಕೆ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದರು. ದಕ್ಷಿಣ ಅಲಾಸ್ಕಾ ಮತ್ತು ಅಲಾಸ್ಕಾ ಪರ್ಯಾಯ ದ್ವೀಪ, ಅಲಾಸ್ಕಾದ ಕೆನಡಿ ಪ್ರವೇಶ ದ್ವಾರದಿಂದ (ಹೋಮರ್‌ನಿಂದ 40 ಮೈಲಿ ವಾಯುವ್ಯ) ಅಲಾಸ್ಕಾದ ಯುನಿಮಾಕ್ ಪಾಸ್‌ವರೆಗೆ (ಉನಾಲಸ್ಕಾದಿಂದ 80 ಮೈಲಿ ಈಶಾನ್ಯ) ಪೆಸಿಫಿಕ್ ಕರಾವಳಿಗಳಿಗೆ ಈ ಎಚ್ಚರಿಕೆ ನೀಡಲಾಗಿತ್ತು.

ಅಮೆರಿಕದ ಸುನಾಮಿ ಎಚ್ಚರಿಕೆ ಕೇಂದ್ರವು ಅಲಾಸ್ಕಾದ ಕರಾವಳಿಯ ಬಹುಭಾಗಕ್ಕೆ - ಹೋಮರ್‌ನ ನೈಋತ್ಯಕ್ಕೆ ಸುಮಾರು 40 ಮೈಲುಗಳಿಂದ ಯುನಿಮಾಕ್ ಪಾಸ್‌ವರೆಗೆ, ಸುಮಾರು 700 ಮೈಲುಗಳನ್ನು ಒಳಗೊಂಡಂತೆ - ಎಚ್ಚರಿಕೆ ನೀಡಲಾಗಿತ್ತು. ಇದರಲ್ಲಿ ಸುಮಾರು 5,200 ಜನರಿರುವ ಪ್ರಮುಖ ಸ್ಥಳೀಯ ಕೇಂದ್ರವಾದ ಕೊಡಿಯಾಕ್‌ನಂತಹ ಹಲವಾರು ಕರಾವಳಿ ಪಟ್ಟಣಗಳು ಸೇರಿವೆ. ಅಮೆರಿಕದ ಯಾವುದೇ ರಾಜ್ಯಕ್ಕಿಂತ ಅಲಾಸ್ಕಾದಲ್ಲಿ ಹೆಚ್ಚು ಭೂಕಂಪಗಳು ಸಂಭವಿಸಿವೆ. ಮತ್ತು ಪ್ರಪಂಚದ ಎಲ್ಲಾ ಭೂಕಂಪಗಳಲ್ಲಿ ಸುಮಾರು 11% ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಂಭವಿಸಿದ್ದ ಭೂಕಂಪಗಳಲ್ಲಿ 17.5% ರಷ್ಟು ಅಲಸ್ಕಾದಲ್ಲೇ ಸಂಭವಿಸಿದೆ.