ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿ ತೆಲಂಗಾಣದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುಂಡಿಟ್ಟು ಹತ್ಯೆ(Techie Shot Dead) ಮಾಡಿರುವ ಶಾಕಿಂಗ್ ಘಟನೆ ವರದಿಯಾಗಿದೆ. ಮೃತನನ್ನು 30 ವರ್ಷದ ಮೊಹಮ್ಮದ್ ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ. ವಿವರಗಳ ಪ್ರಕಾರ, ಸೆಪ್ಟೆಂಬರ್ 3 ರಂದು ತಮ್ಮ ರೂಮ್‌ಮೇಟ್ ಜೊತೆ ನಡೆದ ಜಗಳದಲ್ಲಿ ನಿಜಾಮುದ್ದೀನ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆತನ ಕುಟುಂಬ ಈ ಘಟನೆಯನ್ನು ಜನಾಂಗೀಯ ತಾರತಮ್ಯ ಎಂದು ಆರೋಪಿಸಿದ್ದು, ಆದ್ದರಿಂದ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಅವರ ತಂದೆ ಮೊಹಮ್ಮದ್ ಹಸ್ನುದ್ದೀನ್ ಅವರು ವಾಷಿಂಗ್ಟನ್, ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್‌ಗೆ ಬರೆದ ಪತ್ರದಲ್ಲಿ ತಮ್ಮ ಮಗನ ಸಾವಿನ ಬಗ್ಗೆ ಮಾಹಿತಿ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ. ನಂತರ, ಅವರು ತಮ್ಮ ಮಗನ ಮೃತದೇಹವನ್ನು ಮೆಹಬೂಬ್‌ನಗರಕ್ಕೆ ತರಲು ಸಹಾಯ ಮಾಡುವಂತೆ ವಿದೇಶಾಂಗ ಸಚಿವ ಎಸ್ ಜೈಶಂಕರ್‌ಗೆ ಮನವಿ ಮಾಡಿದರು.
ಮಾಧ್ಯಮದ ಜೊತೆ ಮಾತನಾಡಿದ ಮೃತರ ತಂದೆ, ನಿಜಾಮುದ್ದೀನ್ ಅವರ ಸ್ನೇಹಿತರಿಂದ ಘಟನೆಯ ಬಗ್ಗೆ ತಮಗೆ ಮಾಹಿತಿ ಸಿಕ್ಕಿದೆ. ಆತನನ್ನು ಸಾಂತಾ ಕ್ಲಾರಾ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಅವರ ಮೃತದೇಹಗಳು ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿರುವ ಯಾವುದೋ ಆಸ್ಪತ್ರೆಯಲ್ಲಿವೆ ಎಂದು ನನಗೆ ತಿಳಿಯಿತು ಎಂದು ನಿಜಾಮುದ್ದೀನ್ ಅವರ ತಂದೆ ಹೇಳಿರುವುದಾಗಿ ವರದಿಯಾಗಿದೆ. ಪೊಲೀಸರು ಅವರನ್ನು ಏಕೆ ಗುಂಡಿಕ್ಕಿ ಕೊಂದರು ಎಂಬುದಕ್ಕೆ ನಿಜವಾದ ಕಾರಣಗಳು ನನಗೆ ತಿಳಿದಿಲ್ಲ.
ಈ ಸುದ್ದಿಯನ್ನೂ ಓದಿ: Crime News: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡ ಅಂದಿದ್ದೇ ತಪ್ಪಾಯ್ತೇ? ಅಮೆರಿಕದಲ್ಲಿ ಭಾರತೀಯನ ಶೂಟೌಟ್!
ತಮ್ಮ ಮಗ ಫ್ಲೋರಿಡಾದ ಕಾಲೇಜಿನಲ್ಲಿ ಓದಿದ್ದ. ನಂತರ ಬಡ್ತಿಯ ಮೇಲೆ ಕ್ಯಾಲಿಫೋರ್ನಿಯಾಗೆ ತೆರಳಿದ್ದ. ಅಲ್ಲಿ ಅವನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ನನ್ನ ಮಗನ ದೇಹವನ್ನು ಸಾಧ್ಯವಾದಷ್ಟು ಬೇಗ ಭಾರತಕ್ಕೆ ತರುವಂತೆ ನಾನು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಕೋರುತ್ತೇನೆ" ಎಂದು ಅವರು ಹೇಳಿದರು.
ಪತ್ರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಮಜ್ಲಿಸ್ ಬಚಾವೊ ತಹ್ರೀಕ್ (MBT) ವಕ್ತಾರ ಅಮ್ಜೆದ್ ಉಲ್ಲಾ ಖಾನ್, ಈ ವಿಷಯದಲ್ಲಿ ಕುಟುಂಬಕ್ಕೆ ಸಹಾಯ ಮಾಡುವಂತೆ ವಿದೇಶಾಂಗ ಸಚಿವರನ್ನು ಒತ್ತಾಯಿಸಿದರು. ತಮ್ಮ ಮಗ ಕೂಡ ಯುಎಸ್ಎಯಲ್ಲಿ ಎಂಎಸ್ ಮುಗಿಸಿದ ನಂತರ ಅಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಇ ಕೆಲಸ ಮಾಡುತ್ತಿದ್ದಾನೆ. ಇದು ಎಲ್ಲಾ ಭಾರತೀಯರ ಸುರಕ್ಷತೆಯ ಪ್ರಶ್ನೆ ಎಂದು ಹಸ್ನುದ್ದೀನ್ ಹೇಳಿದರು.