ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ಜಾಮೀನು ಟೆನ್ಷನ್‌ನಲ್ಲಿ ಥಾಯ್ಲೆಂಡ್‌ನಿಂದ ವಾಪಸಾದ ದರ್ಶನ್‌

Supreme Court: ಜುಲೈ 24ರಂದು ಸುಪ್ರೀಂ ಕೋರ್ಟ್​ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಜಾಮೀನು ಬಗ್ಗೆ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ನಿನ್ನೆ ರಾತ್ರಿ ದರ್ಶನ್‌ ಹಾಗೂ ವಿಜಯಲಕ್ಷ್ಮಿ ಥಾಯ್ಲೆಂಡ್‌ನಿಂದ ಹಿಂದಿರುಗಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (Renukaswamy Murder Case) ನಟ ದರ್ಶನ್​​ಗೆ (Actor Darshan) ನೀಡಿರುವ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್‌ (Supreme Court) ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ, ಡೆವಿಲ್‌ ಸಿನಿಮಾ ಚಿತ್ರೀಕರಣಕ್ಕಾಗಿ ಹಾಗೂ ಫ್ಯಾಮಿಲಿ ಟ್ರಿಪ್‌ ತೆರಳಿದ್ದ ನಟ ದರ್ಶನ್‌ ನಿನ್ನೆ ಬೆಂಗಳೂರಿಗೆ ವಾಪಸಾಗಿದ್ದಾರೆ. ವಿಶೇಷ ಅನುಮತಿ ಪಡೆದು ಥಾಯ್ಲೆಂಡ್‌ನಲ್ಲಿ ಚಿತ್ರೀಕರಣದಲ್ಲಿದ್ದ ದರ್ಶನ್‌ ಜುಲೈ 25ರ ರಾತ್ರಿ 11:45ರ ಸುಮಾರಿಗೆ ವಿಮಾನದಲ್ಲಿ ಥಾಯ್ಲೆಂಡ್‌​ನಿಂದ ಹಿಂತಿರುಗಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತ ಧನ್ವೀರ್​ ಜೊತೆ ನಟ ದರ್ಶನ್ ಕಾಣಿಸಿಕೊಂಡರು.

ಜುಲೈ 24ರಂದು ಸುಪ್ರೀಂ ಕೋರ್ಟ್​ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ (Pavithra Gowda) ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಬೇಲ್ ಮಂಜೂರು ಮಾಡಿದ ಕ್ರಮವನ್ನು ಸುಪ್ರೀಂ ಕೋರ್ಟ್​ ಪ್ರಶ್ನೆ ಮಾಡಿದ್ದು, ಹೈಕೋರ್ಟ್​ ಅನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣ ಸಂಬಂಧ ನ್ಯಾಯಪೀಠ ಮಾಡಿದ ಪ್ರಶ್ನೆಗಳು ಡಿ ಗ್ಯಾಂಗ್ ಎದೆಯಲ್ಲಿ ಬೇಲ್​ ರದ್ದಾಗುವ ಭಯ ಹೆಚ್ಚಿಸಿದೆ. ಇದರ ನಡುವೆಯೇ ವಿದೇಶದಿಂದ ನಟ ದರ್ಶನ್​ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪತ್ನಿ ವಿಜಯಲಕ್ಷ್ಮಿ ಜೊತೆಯಲ್ಲಿ ಕಾರಿನಲ್ಲಿ ನಟ ದರ್ಶನ್​ ಮನೆಯತ್ತ ಪ್ರಯಾಣ ಬೆಳೆಸಿದರು. ನಟ ಧನ್ವೀರ್ ಮತ್ತೊಂದು ಕಾರಿನಲ್ಲಿ ತೆರಳಿದ್ದಾರೆ. ವಿದೇಶದಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ ವಾಪಾಸ್​ ಆದ ನಟ ದರ್ಶನ್ ಮುಖದಲ್ಲಿ ಬೇಲ್ ಟೆನ್ಷನ್ ಎದ್ದು ಕಂಡಿದೆ.

ಇದನ್ನೂ ಓದಿ: Actor Darshan: ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ಗೆ 10 ದಿನ ರಿಲೀಫ್‌, ತೀರ್ಪು ಕಾಯ್ದಿರಿಸಿದ ನ್ಯಾಯಪೀಠ

ಹರೀಶ್‌ ಕೇರ

View all posts by this author