ಕರ್ನಾಟಕ
Gold Price Today: ಚಿನ್ನದ ದರದಲ್ಲಿ ಯಥಾಸ್ಥಿತಿ; ಗ್ರಾಹಕರಿಗೆ ಕೊಂಚ ನಿರಾಳ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ ತಲಾ 25 ರೂ. ಮತ್ತು 27ರೂ. ಏರಿಕೆ ಕಂಡಿತ್ತು. ಸದ್ಯ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,930 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,651 ರೂ. ಇದೆ.

CM Siddaramaiah: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌, ತನಿಖೆ ಸಿಬಿಐಗೆ ಇಲ್ಲ

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌, ತನಿಖೆ ಸಿಬಿಐಗೆ ಇಲ್ಲ

ಮುಡಾ ನಿವೇಶನ ಹಂಚಿಕೆ ಸಂಬಂಧ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ (Snehamayi Krishna) ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೋರ್ಟ್ ಪೂರ್ಣಗೊಳಿಸಿ‌ ಇಂದು ಬೆಳಗ್ಗೆ ತೀರ್ಪು ನೀಡಿತು. ದೂರುದಾರ ಸ್ನೇಹಮಯಿ ಕೃಷ್ಣ ಅವರು ಈ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

BS Yediyurappa: ಪೋಕ್ಸೋ ಕೇಸ್‌ನಲ್ಲಿ ಬಿಎಸ್‌ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು, ಬಂಧನ ಭೀತಿಯಿಂದ ಪಾರು

ಪೋಕ್ಸೋ ಕೇಸ್‌ನಲ್ಲಿ ಬಿಎಸ್‌ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ (Poso Case) ಸಂಬಂಧಪಟ್ಟಂತೆ ಇಂದು ಹೈಕೋರ್ಟ್ (Karnataka High Court) ತೀರ್ಪು ಪ್ರಕಟಿಸಿದೆ. ತಮ್ಮ ವಿರುದ್ಧ ಸಲ್ಲಿಸಲಾಗಿರುವ ಪೋಕ್ಸೋ ಕೇಸ್ ರದ್ದುಗೊಳಿಸಲು ಕೋರಿ ಯಡಿಯೂರಪ್ಪ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾ ಎಂ. ನಾಗಪ್ರಸನ್ನ ಅವರ ಪೀಠ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಇಂದು ಬೆಳಗ್ಗೆ 10:30ಕ್ಕೆ ತೀರ್ಪನ್ನು ನೀಡಿತು.

Road Accident: ಗೂಗಲ್ ಮ್ಯಾಪ್‌ ನೋಡುತ್ತಾ ಕಾರು ಚಲಾಯಿಸಿದ ಚಾಲಕ, ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ವೈದ್ಯ ಮೃತ್ಯು

ಮ್ಯಾಪ್‌ ನೋಡುತ್ತಾ ಕಾರು ಚಲಾಯಿಸಿ ಕ್ಯಾಂಟರ್‌ಗೆ ಡಿಕ್ಕಿ, ವೈದ್ಯ ಸಾವು

ಮೃತ ವೈದ್ಯರನ್ನು ಹೈದ್ರಾಬಾದ್ ಮೂಲದ ಅಮರ್ ಪ್ರಸಾದ ಎಂದು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಗೂಗಲ್‌ ಮ್ಯಾಪ್‌ನಲ್ಲಿ ಮಗ್ನನಾಗಿದ್ದ ಕಾರು ಚಾಲಕ ವೇಗವಾಗಿ ಹೋಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನಲ್ಲಿದ್ದ ವೈದ್ಯರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾನೆ.

CM Siddaramaiah: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ಕುರಿತು ಇಂದು ಹೈಕೋರ್ಟ್ ತೀರ್ಪು

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ಕುರಿತು ಇಂದು ಹೈಕೋರ್ಟ್ ತೀರ್ಪು

ಸಿದ್ದರಾಮಯ್ಯ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದ್ದರು. ದೂರುದಾರ ಸ್ನೇಹಮಯಿ ಕೃಷ್ಣ ಪರವಾಗಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರ ಮಣೀಂದ್ರ್ ಸಿಂಗ್ ಅವರು ವಾದ ಮಂಡಿಸಿದ್ದರು. ಕಳೆದ ವಿಚಾರಣೆಯಲ್ಲಿ ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು.

BS Yediyurappa: ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಇಂದು ಹೈಕೋರ್ಟ್ ತೀರ್ಪು

ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಇಂದು ಹೈಕೋರ್ಟ್ ತೀರ್ಪು

ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಿಎಂ ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣದ ದೋಷಾರೋಪ ಪಟ್ಟಿಯನ್ನು ಈಗಾಗಲೇ ಸಿಐಡಿ ಪೊಲೀಸರು ದಾಖಲಿಸಿದ್ದಾರೆ. ಈವರೆಗೆ ಖುದ್ದು ಹಾಜರಾತಿಯಿಂದ ಬಿಎಸ್‌ವೈಗೆ ಕೋರ್ಟ್​ ವಿನಾಯತಿ ನೀಡಿತ್ತು. ಅಲ್ಲದೇ ಬಂಧನದಿಂದಲೂ ಮಧ್ಯಂತರ ರಕ್ಷಣೆ ನೀಡಿತ್ತು.

Road Accident: ರಾಜ್ಯದಲ್ಲಿ ನಾಲ್ಕು ಕಡೆ ಘೋರ ಅಪಘಾತ, ನಾಲ್ವರು ಸಾವು

ರಾಜ್ಯದಲ್ಲಿ ನಾಲ್ಕು ಕಡೆ ಘೋರ ಅಪಘಾತ, ನಾಲ್ವರು ಸಾವು

ಬೆಂಗಳೂರು, ಹಾಸನ, ಕಲಬುರಗಿ ಹಾಗೂ ಉತ್ತರ ಕನ್ನಡದ ಕಾರವಾರಗಳಲ್ಲಿ ನಾಲ್ಕು ಪ್ರತ್ಯೇಕ ಅಪಘಾತಗಳು ನಿನ್ನೆ ಸಂಭವಿಸಿದ್ದು, ಈ ಅಪಘಾತಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Valentines Week Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ರೋಸ್ ಪ್ರಿಂಟೆಡ್ ಔಟ್‌ಫಿಟ್ಸ್

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ರೋಸ್ ಪ್ರಿಂಟೆಡ್ ಔಟ್‌ಫಿಟ್ಸ್

Valentines Week Fashion 2025: ವಿಂಟರ್ ಎಂಡ್ ಸೀಸನ್‌ನಲ್ಲಿ ಬರುವ ವ್ಯಾಲೆಂಟೈನ್ಸ್ ವೀಕ್ ಫ್ಯಾಷನ್‌ನಲ್ಲಿ ಇದೀಗ ನಾನಾ ಬಗೆಯ ರೋಸ್ ಪ್ರಿಂಟ್ಸ್ ಇರುವಂತಹ ಡಿಸೈನರ್‌ವೇರ್‌ಗಳು ಬಿಡುಗಡೆಗೊಂಡಿವೆ ಹಾಗೂ ಟ್ರೆಂಡಿಯಾಗಿವೆ. ರೆಡ್, ಯೆಲ್ಲೊ, ಪಿಂಕ್ ಹೀಗೆ ನಾನಾ ಗುಲಾಬಿ ಹೂವುಗಳ ಚಿಕ್ಕ-ದೊಡ್ಡ ಪ್ರಿಂಟ್ಸ್ ಇರುವಂತಹ ನಾನಾ ವಿನ್ಯಾಸದ ಫ್ರಾಕ್‌ಗಳು, ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Rohan Murthy Interview: 2,500 ವರ್ಷಗಳ ಭಾರತೀಯ ಸಾಹಿತ್ಯಕ್ಕೆ ಜಾಗತಿಕ ವೇದಿಕೆ

ರೋಹನ್‌ ಮೂರ್ತಿಯವರ ಕ್ಲಾಸಿಕಲ್‌ ಲೈಬ್ರೆರಿಗೆ 10 ವರ್ಷದ ಸಂಭ್ರಮ

ಇನ್ಫೋಸಿಸ್‌ ಸ್ಥಾಪಕ ನಾರಾಯಣ ಮೂರ್ತಿಯವರ ಮಗ ರೋಹನ್‌ ನಾರಾಯಣ ಮೂರ್ತಿಯವರು ಕನ್ನಡ ಸೇರಿದಂತೆ ಭಾರತದ ಪ್ರಾಚೀನ ಭಾಷೆಗಳ ಶಾಸ್ತ್ರೀಯ ಮತ್ತು ಅಭಿಜಾತ ಕೃತಿಗಳನ್ನು, ಮಹಾ ಕಾವ್ಯಗಳನ್ನು ಇಂಗ್ಲಿಷ್‌ ಭಾಷೆಗೆ ತರ್ಜುಮೆ ಮಾಡಿಸಿ ಇಡೀ ಜಗತ್ತಿಗೆ ಪ್ರಾಚೀನ ಸಾಹಿತ್ಯ ಪರಂಪರೆಯನ್ನು ಪರಿಚಯಿಸುವ ಅತ್ಯಪರೂಪದ ಸಾಧನೆಯನ್ನು ಕಳೆದ ಹತ್ತು ವರ್ಷಗಳಿಂದಲೂ ಸದ್ದಿಲ್ಲದೆ ಮಾಡುತ್ತಿದ್ದಾರೆ.

DK Shivakumar: ಮೆಟ್ರೋ ಪ್ರಯಾಣ ದರ, ನೀರಿನ ದರ ಹೆಚ್ಚಳವಾಗುತ್ತ? ಈ ಬಗ್ಗೆ ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?

ಮೆಟ್ರೋ ಪ್ರಯಾಣ ದರ, ನೀರಿನ ದರ ಹೆಚ್ಚಳದ ಬಗ್ಗೆ ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?

ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಈಗಾಗಲೇ ನಿಗಮವು ಒಂದು ತೀರ್ಮಾನ ತೆಗೆದುಕೊಂಡಿದೆ. ನಾನು ಆ ವರದಿಯಲ್ಲಿ ಏನಿದೆ ಎಂದು ಮೂಗು ತೂರಿಸಲು ಹೋಗುವುದಿಲ್ಲ ಎಂದು ತಿಳಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ಕುಡಿಯುವ ನೀರಿನ ದರ ಏರಿಕೆ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದೆ ಇಡಲಾಗುವುದು ಎಂದು ತಿಳಿಸಿದ್ದಾರೆ.

ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿನಲ್ಲಿ ಉತ್ತಮವಾದ ಗುಣಾತ್ಮಕ ಬದಲಾವಣೆ ತಂದಿದೆ : ಉದ್ಯೋಗ ಸಹಾಯಕ ನಿರ್ದೇಶಕ ರಾಮಾಂಜನಪ್ಪ

ಸರ್ಕಾರ ಗ್ರಾಮೀಣ ಕುಟುಂಬಗಳು ಸುಸ್ಥಿತಿಗೆ ಬರುವ ಯೋಜನೆ ಹಾಕಿಕೊಂಡಿದೆ

ತಾಲ್ಲೂಕಿನಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಗ್ರಾಮೀಣ ಭಾಗದ ಸಮಗ್ರ ಶಾಲಾ ಅಭಿವೃದ್ಧಿ ಯಡಿ ಆಟದ ಮೈದಾನ, ತಡೆಗೋಡೆ ನಿರ್ಮಾಣ, ಮಳೆ ನೀರಿನ ಕೊಯ್ಲು, ಪೌಷ್ಟಿಕ ಕೈತೋಟ, ಶಾಲಾ ಅಡುಗೆ ಕೋಣೆ ಮತ್ತು ಭೋಜನಾಲಯ, ಆಟದ ಅಂಕಣಗಳ ನಿರ್ಮಾಣ ಸೇರಿದಂತೆ ವಿವಿಧ ಸಮಾಜ ಮುಖಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ

Wedding Fashion 2025: ಮದುವೆಯ ಅರಿಶಿಣ ಶಾಸ್ತ್ರದಲ್ಲಿ ಟ್ರೆಂಡಿಯಾದ ಹಳದಿ ಬಣ್ಣದ ಡ್ರೆಸ್ ಕೋಡ್‌ಗಳಿವು!

Wedding Fashion 2025: ಮದುವೆಯ ಅರಿಶಿಣ ಶಾಸ್ತ್ರದಲ್ಲಿ ಟ್ರೆಂಡಿಯಾದ ಹಳದಿ ಬಣ್ಣದ ಡ್ರೆಸ್ ಕೋಡ್‌ಗಳಿವು!

Wedding Fashion 2025: ಮದುವೆಯ ಅರಿಶಿಣ ಶಾಸ್ತ್ರದಲ್ಲಿ ಇದೀಗ ನಾನಾ ಬಗೆಯ ಹಳದಿ ಹಾಗೂ ಸನ್ ಕಲರ್ ಶೇಡ್‌ನ ಡಿಸೈನರ್‌ವೇರ್‌ಗಳು ಟ್ರೆಂಡಿಯಾಗಿವೆ. ಅವು ಯಾವುವು? ಚಾಯ್ಸ್ ಹೇಗೆ? ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.

Pralhad Joshi: ರಾಜ್ಯದಲ್ಲಿ ಜನನ-ಮರಣ ಪ್ರಮಾಣ ಪತ್ರ ಶುಲ್ಕ ಹತ್ತುಪಟ್ಟು ಹೆಚ್ಚಳ; ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಇದು ಕೈಗನ್ನಡಿ: ಜೋಶಿ ಆರೋಪ

Pralhad Joshi: ರಾಜ್ಯದಲ್ಲಿ ಜನನ-ಮರಣ ಪ್ರಮಾಣ ಪತ್ರ ಶುಲ್ಕ ಹತ್ತುಪಟ್ಟು ಹೆಚ್ಚಳ; ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಇದು ಕೈಗನ್ನಡಿ: ಜೋಶಿ ಆರೋಪ

Pralhad Joshi: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಶೇ.10 ರಷ್ಟು ತೆರಿಗೆ ಹಂಚಿಕೆ ಪಾಲು ಅಧಿಕಗೊಳಿಸಿ ಅನುದಾನ ಒದಗಿಸಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಜನನ-ಮರಣ ಪ್ರಮಾಣ ಪತ್ರದ ಶುಲ್ಕವನ್ನು ಹತ್ತುಪಟ್ಟು ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಕೈಗನ್ನಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಮಾಧ್ಯಮ ಅಕಾಡೆಮಿಯಿಂದ ಪ್ರಥಮ ಛಾಯಾಚಿತ್ರ ಸ್ಪರ್ಧೆಹಾಗೂ ಪ್ರದರ್ಶನ

ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ

ಸುದ್ದಿ ಛಾಯಾಚಿತ್ರಗಳನ್ನು ಚಿತ್ರಿಸಿರುವುದಕ್ಕೆ ಯಾವುದೇ ಭೌಗೋಳಿಕ ಪರಿಮಿತಿ ಇರುವುದಿಲ್ಲ. ಪ್ರತಿ ಸ್ಪರ್ಧಿಯೂ ಅವರು ಸುದ್ದಿ ಛಾಯಾಚಿತ್ರ ಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಸಂಪಾ ದಕರಿಂದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ ಅಥವಾ  ಕರ್ನಾಟಕ ಸರ್ಕಾ ರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಕರ್ತರಿಗಾಗಿ ನೀಡುವ ಅಕ್ರಿಡೇಷನ್ ಕಾರ್ಡ್ ಹೊಂದಿ ರುವವರು ಅದರ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು

ಬಡ ಮಕ್ಕಳಿಗೆ ಅನ್ನ ನೀಡಲು ಅನುಮತಿ ನೀಡಿ ಪುಣ್ಯ ಬರಲಿದೆ: ಸಂದೀಪ್‌ ರೆಡ್ಡಿ ಮನವಿ

ಕಾಲೇಜಿನ ಒಳಾವರಣದಲ್ಲಿ ವಿದ್ಯಾರ್ಥಿಗಳಿಗೆ ಅನ್ನ ಬಡಿಸಲು ಅವಕಾಶ ಮಾಡಿ ಕೊಡಿ

ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಮೂಲಕ ವಿದ್ಯಾರ್ಥಿ ನಿಯರಿಗೆ ಉಚಿತವಾಗಿ ನೀಡುತ್ತಿರುವ ಬಿಸಿ ಯೂಟಕ್ಕೆ ಮರುಚಾಲನೆ ನೀಡಿ ಅವರು ಮಾಧ್ಯಮ ದೊಂದಿಗೆ ಮಾತನಾಡಿದರು. ನಿಮಗೆಲ್ಲಾ ಗೊತ್ತಿ ರುವ ಹಾಗೆ ಯಾವುದೇ ಪೂರ್ವಾಗ್ರಹವಿಲ್ಲದೆ ರಾಜಕೀಯ ಲಾಭದ ಉದ್ದೇಶವಿಲ್ಲದೆ ಕಳೆದ 3 ತಿಂಗಳಿಂದ ಹಸಿದ ಹೊಟ್ಟೆಗಳಿಗೆ ಅನ್ನ ನೀಡು ತ್ತಿರುವ ಕಾರ್ಯಕ್ರಮ ಇಲ್ಲಿ ನಡೆದಿತ್ತು

Krishnaiah Shetty: ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ  ಕೃಷ್ಣಯ್ಯ ಶೆಟ್ಟಿ ದೋಷಿ; ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು

ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ದೋಷಿ

ಬ್ಯಾಂಕ್ ವಂಚನೆ ಕೇಸ್‌ನಲ್ಲಿ ಮಾಜಿ ಸಚಿವ, ಬಿಜೆಪಿ ನಾಯಕ ಕೃಷ್ಣಯ್ಯ ಶೆಟ್ಟಿ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರೊಂದಿಗೆ ರೆಡ್ಡಿ ಎಂಟಿವಿ, ಶ್ರೀನಿವಾಸ್ ಹಾಗೂ ಮುನಿರಾಜು ಸೇರಿ ನಾಲ್ವರು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ನಕಲಿ ದಾಖಲೆ ನೀಡಿ ಕೋಟ್ಯಂತರ ರೂ. ಸಾಲ ಪಡೆದು ವಂಚನೆ ಮಾಡಿದ್ದ ಆರೋಪ ಈ ನಾಲ್ವರ ಮೇಲಿದೆ.

KSDA Recruitment 2025: ಗಮನಿಸಿ; ಕೃಷಿ ಇಲಾಖೆಯಲ್ಲಿನ 945 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಕೃಷಿ ಇಲಾಖೆಯಲ್ಲಿನ 945 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಲೋಕಸೇವಾ ಆಯೋಗ ಇದೀಗ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಈ ಮೊದಲು ಅಪ್ಲೈ ಮಾಡಲು ಫೆ. 1 ಕೊನೆಯ ದಿನ ಎಂದು ಹೇಳಲಾಗಿತ್ತು. ಆದರೆ ಕೆಲವು ಅಭ್ಯರ್ಥಿಗಳು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಫೆ. 15ರವರೆಗೆ ವಿಸ್ತರಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಗ್ರೇಟ್ ಲರ್ನಿಂಗ್ ನ ಎಐ ಮೆಂಟರ್ ಮೂಲಕ ಕಲಿಕೆಯ ಹೊಸ ಅಧ್ಯಾಯ ಪ್ರಾರಂಭ

ಎಐ ಆವಿಷ್ಕಾರ ಗಳು ಲಕ್ಷಾಂತರ ಮಂದಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸಹಾಯ

ಎಐ ಮೆಂಟರ್ 24/7 ಕಲಿಕಾರ್ಥಿಗಳ ಅನುಮಾನ ಪರಿಹರಿಸುತ್ತದೆ, ಕೋಡಿಂಗ್ ಸವಾಲುಗಳನ್ನು ನಿಭಾಯಿಸಲು ಸುಳಿವು ನೀಡುತ್ತದೆ ಮತ್ತು ಅಣಕು ಸಂದರ್ಶನಗಳನ್ನು ನಡೆಸಿ ವೈಯಕ್ತಿಕ ಅಭಿಪ್ರಾ ಯಗಳನ್ನು ನೀಡುತ್ತದೆ.

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಕ್ಕೆ ಪ್ರೋತ್ಸಾಹ: ಎಸ್.ಡಿ.ಎಂ ಪ್ರತಿಪಾದನೆಗೆ ರಾಷ್ಟಮಟ್ಟದ  ಮನ್ನಣೆ

ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಕ್ಕೆ ಕೇಂದ್ರ ನಿಯಂತ್ರಣದ ನಿಯಮ ಜಾರಿ

ಭಾರತದ ಸಿಸ್ಟಮ್ ಆಫ್ ಮೆಡಿಸಿನ್‌ನ ರಾಷ್ಟ್ರೀಯ ಆಯೋಗದ (NCISM) ಸದಸ್ಯರು, ಪ್ರಮುಖ ಮುಖಂ ಡರು ಅಲ್ಲದೆ ಮಾನ್ಯ ರಾಜ್ಯ ಸಭಾ ಸದಸ್ಯ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು SVYASA ಚಾನ್ಸೆಲೆರ್ ಡಾ. ಎಚ್. ಆರ್. ನಾಗೇಂದ್ರ ಭಾಗವಹಿಸಿದ್ದರು

ರೋಬೋಟ್‌ ನೆರವಿನ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಸಚಿವ ರಾಮಲಿಂಗಾರೆಡ್ಡಿ

ತಮ್ಮ ಶೀಘ್ರ ಚೇತರಿಕೆಯ ಅನುಭವ ಹಂಚಿಕೊಂಡ ಸಚಿವರು

ರೋಬೋಟ್‌ ನೆರವಿನಿಂದ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ನನ್ನ ಶೀಘ್ರ ಚೇತರಿಕೆಗೆ ಹೆಚ್ಚು ಸಹಕಾರಿಯಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿ ದರು. ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಮೊಣಕಾಲು ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಒಳ ಪಟ್ಟು, ಚೇತರಿಸಿಕೊಂಡ ವರ ಬೆಂಬಲಕ್ಕಾಗಿ ಆಯೋಜಿಸಿದ್ದ “ಸ್ಟ್ರೈಡ್‌ ಸಪೋರ್ಟ್‌ ಗ್ರೂಪ್‌” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೆಲವು ಸಮಯದಿಂದ ಮೊಣಕಾಲಿನ ನೋವು ಕಾಡಲಾರಂಭಿಸಿತು, ಮೆಟ್ಟಿಲುಸಹ ಹತ್ತಲು ಸಾಧ್ಯವಾಗುತ್ತಿರಲಿಲ್ಲ

Employment News: 86 ಲಕ್ಷ ಭಾರತೀಯರಿಗೆ ಉದ್ಯೋಗ ಕೊಟ್ಟ ನೇರ ಮಾರುಕಟ್ಟೆ; 8 ರಾಜ್ಯಗಳಿಂದ 1854 ಕೋಟಿ ರೂ. ವಹಿವಾಟು

86 ಲಕ್ಷ ಭಾರತೀಯರಿಗೆ ಉದ್ಯೋಗ ಕೊಟ್ಟ ನೇರ ಮಾರುಕಟ್ಟೆ-ಐಡಿಎಸ್‌ಎ ವರದಿಯಲ್ಲಿ ಬಹಿರಂಗ

Employment News: ಈಶಾನ್ಯ ಭಾರತದ ಎಲ್ಲಾ 8 ಸಹೋದರ ರಾಜ್ಯಗಳು ಮಾರಾಟದಲ್ಲಿ ಜಿಗಿತ ಕಂಡಿವೆ. 2022-23ರಲ್ಲಿ ಹಿಂದಿನ ವರ್ಷಕ್ಕಿಂತ 255 ಕೋಟಿ ರೂ. ಹೆಚ್ಚುವರಿ ವಹಿವಾಟು ಸೇರಿದಂತೆ 1854 ಕೋಟಿ ರೂ. ದಾಟಿದೆ ಎಂಬುದನ್ನು ಭಾರತೀಯ ನೇರ ಮಾರಾಟ ಸಂಘ ಗುವಾಹಟಿಯಲ್ಲಿ ಆಯೋಜಿಸಿದ್ಧ 2ನೇ ಈಶಾನ್ಯ ನೇರ ಮಾರಾಟ ಸಮ್ಮೇಳನದಲ್ಲಿ ದೃಢಪಡಿಸಿದೆ. ಈ ಕುರಿತ ವಿವರ ಇಲ್ಲಿದೆ.

Fire Accident: ಬೆಂಕಿ ಅವಘಡ; ಇಬ್ಬರು ಕಾರ್ಮಿಕರ ದುರ್ಮರಣ

ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ; ಇಬ್ಬರು ಕಾರ್ಮಿಕರ ಸಾವು

ರಾಜ್ಯದಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸೀಗೆಹಳ್ಳಿ ಗೇಟ್ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಉತ್ತರ ಪ್ರದೇಶ ಮೂಲದ ಉದಯ್ ಭಾನು(40) ಮತ್ತು ಬಿಹಾರ ಮೂಲದ ರೋಷ ನ್ (23) ಎಂದು ಗುರುತಿಸಲಾಗಿದೆ.

Shivaraj Tangadagi: 'ಶುಭವಾಗಲಿ' ಬರೆಯಲು ಪರದಾಡಿದ ವಿಡಿಯೊ ಟ್ರೋಲ್‌; ಸಚಿವ ತಂಗಡಗಿ ಹೇಳಿದ್ದೇನು?

'ಶುಭವಾಗಲಿ' ಬರೆಯಲು ಪರದಾಡಿದ ವಿಡಿಯೊ ಟ್ರೋಲ್‌; ಸಚಿವ ತಂಗಡಗಿ ನೀಡಿದ ಸ್ಪಷ್ಟನೆ ಇದು

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ʼಶುಭವಾಗಲಿʼ ಎಂದು ಬರೆಯಲು ಪರದಾಡಿದ ವಿಡಿಯೊ ವೈರಲ್‌ ಆಗಿದೆ. ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ನನ್ನ ಬಗ್ಗೆ ಟೀಕಿಸಲು ಏನು ಸಿಗ್ತಿಲ್ಲ ಎಂದು ಹತಾಶರಾಗಿ ವಿರೋಧಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

Gold Price Today: ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ; ಇಂದಿನ ರೇಟ್‌ ಹೀಗಿದೆ

ಇಂದು ಚಿನ್ನದ ದರದಲ್ಲಿ ಭಾರೀ ಏರಿಕೆ- ಇಲ್ಲಿ ಚೆಕ್‌ ಮಾಡಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ ತಲಾ 25 ರೂ. ಮತ್ತು 27ರೂ. ಏರಿಕೆ ಕಂಡಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,930 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,651 ರೂ. ಇದೆ.