ಬೆಂಗಳೂರು: ಅತ್ಯಾಚಾರ (Physical Abuse) ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಲಿದೆ. ಈ ನಡುವೆ, ಕೋರ್ಟ್ ತೀರ್ಪನ್ನು ನಟಿ ರಮ್ಯಾ ಅವರು ಸ್ವಾಗತಿಸಿದ್ದು, ವೆಲ್ಡನ್ ಹೈಕೋರ್ಟ್ ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special Court) ನಿನ್ನೆ ತೀರ್ಪು ಪ್ರಕಟಿಸಿದ್ದು, ಪ್ರಜ್ವಲ್ ರೇವಣ್ಣ ದೋಷಿ ಎಂದು ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ. ಪ್ರಜ್ವಲ್ 14 ತಿಂಗಳಿಂದ ಸೆರೆಮನೆಯಲ್ಲಿ ಬಂಧಿಯಾಗಿದ್ದಾರೆ. ಅದರ ಬೆನ್ನಲ್ಲೇ ನಟಿ ರಮ್ಯಾ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದು, ʼಎಲ್ಲ ಮಹಿಳೆಯರಿಗೂ ನ್ಯಾಯ ಸಂದಿದೆ. ವೆಲ್ಡನ್ ಹೈಕೋರ್ಟ್ʼ ಎಂದು ನಟಿ ಬರೆದಿದ್ದಾರೆ.
ನಟಿ ರಮ್ಯಾ ಅವರು ಕಳೆದ ಹಲವಾರು ದಿನಗಳಿಂದ ಸುದ್ದಿಯಲ್ಲಿದ್ದಾರೆ. ರೇಣುಕಾಸ್ವಾಮಿ, ದರ್ಶನ್ ಅಭಿಮಾನಿಗಳ ವಿಚಾರವಾಗಿ ಸುದ್ದಿಯಲ್ಲಿರುವ ನಟಿ ಒಂದು ಪೋಸ್ಟ್ ಹಾಕಿ ಭಾರೀ ಚರ್ಚೆಗೆ ದಾರಿ ಮಾಡಿದ್ದರು. ನಟಿಯ ಪೋಸ್ಟ್ ಬೆನ್ನಲ್ಲೇ ಬಹಳಷ್ಟು ಜನರು ರಿಯಾಕ್ಟ್ ಮಾಡಿದ್ದಾರೆ. ಶಿವಣ್ಣ ಸೇರಿದಂತೆ ಚಿತ್ರರಂಗದವರೂ ರಿಯಾಕ್ಟ್ ಮಾಡಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್ ಬೇಲ್ ಬಗ್ಗೆ ವಿಚಾರಣೆ ನಡೆದಿದೆ. ಇತ್ತ ಸ್ಯಾಂಡಲ್‌ವುಡ್ ಕ್ವೀನ್, ನಟಿ ರಮ್ಯಾ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ವರದಿಯೊಂದನ್ನು ಶೇರ್ ಮಾಡಿರುವ ಅವರು, ದರ್ಶನ್ ಕೇಸ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. Supreme Court is a ray of hope for the common man of India, hopefully Renukaswamys family will get justice ಅಂತ ರಮ್ಯಾ ಬರೆದುಕೊಂಡಿದ್ದರು. ಸರ್ವೋಚ್ಚ ನ್ಯಾಯಾಲಯವು ಭಾರತದ ಸಾಮಾನ್ಯ ಜನರಿಗೆ ಆಶಾಕಿರಣವಾಗಿದೆ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದು ಆಶಿಸುತ್ತೇವೆ ಅಂತ ರಮ್ಯಾ ಅಭಿಪ್ರಾಯಪಟ್ಟಿದ್ದರು.