ಬೆಂಗಳೂರು: ಬಳ್ಳಾರಿಯ ಮಾಜಿ ಎಂಎಲ್‌ಸಿ, ಹಿರಿಯ ಮುತ್ಸದ್ದಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಎನ್ ತಿಪ್ಪಣ್ಣ (N Tippanna) ಲಿಂಗೈಕ್ಯರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸು ಆಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬಳ್ಳಾರಿ (Bellary) ನಿವಾಸದಲ್ಲಿ ನೆಲೆಸಿದ್ದರು. ತಿಪ್ಪಣ್ಣ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಳ್ಳಾರಿಯ ಮಾಜಿ ಎಂಎಲ್ಸಿ ತಿಪ್ಪಣ್ಣ ಅವರಿಗೆ ಅಪಾರ ಅಭಿಮಾನಿಗಳಿದ್ದರು. ಸಮಾಜಸೇವೆ ಸಲ್ಲಿಸಿದ ಎನ್ ತಿಪ್ಪಣ್ಣ ಅವರಿಗೆ ಬಳ್ಳಾರಿ ಜಿಲ್ಲೆಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಎನ್ ತಿಪ್ಪಣ್ಣ ಸೇವೆ ಸಲ್ಲಿಸಿದ್ದರು. ಇಳಿ ವಯಸ್ಸಿನಲ್ಲೂ ತಮ್ಮ ಕೆಲಸಗಳಿಂದ ಜನರ ಮನ ಗೆದ್ದಿದ್ದರು. ಶತಾಯುಷಿಯಾಗಲು 3 ವರ್ಷ ಬಾಕಿ ಇರುವಾಗಲೇ ತಿಪ್ಪಣ್ಣ ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ: Heart Attack: ಸರಣಿ ಹೃದಯಾಘಾತಗಳ ಕುರಿತು ವರದಿ ಸಲ್ಲಿಕೆ; ಯುವಕರ ಸಾವಿಗೆ ಬಯಲಾಯ್ತು ಕಾರಣ