ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kalaburagi News: ಕಲಬುರಗಿಯಲ್ಲಿ ಕುಡಿತದ ಚಟ ಬಿಡಿಸುವ ನಾಟಿ ಔಷಧಿ ಸೇವಿಸಿ ಮೂವರು ಸಾವು

Alcohol Addiction: ಕುಡಿತದ ಚಟ ಬಿಡಿಸುತ್ತೇನೆ ಎಂದು ಸಾಯಪ್ಪ ಮುತ್ಯಾ ಎಂಬಾತ ಮದ್ಯ ವ್ಯಸನಿಗಳ ಮೂಗಿನಲ್ಲಿ ನಾಟಿ ಔಷಧಿ ಹಾಕಿದ್ದರು. ಸಾಯಪ್ಪ ಮುತ್ಯಾ ನೀಡಿದ ಔಷಧಿಯಿಂದ ಲಕ್ಷ್ಮೀ ಹಾಗೂ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಕಲಬುರಗಿ: ರಾಜ್ಯದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಕಲಬುರಗಿ (Kalaburagi News) ಜಿಲ್ಲೆಯಲ್ಲಿ ಕುಡಿತದ ಚಟ (Alcohol addiction) ಬಿಡಿಸಲು ನೀಡಿದ ನಾಟಿ ಔಷಧಿ (herbal medicine) ಸೇವಿಸಿ ಮೂವರು ಸಾವನ್ನಪ್ಪಿರುವ ಶಾಕಿಂಗ್ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಮಡಾಪುರದಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಸೇಡಂ ತಾಲ್ಲೂಕಿನ ಬುರಗಪಳ್ಳಿ ಗ್ರಾಮದ ಲಕ್ಷ್ಮೀ ನರಸಿಂಹಲು(45) ಹಾಗೂ ಶಹಬಾದ್ ಪಟ್ಟಣದ ನಿವಾಸಿ ಗಣೇಶ್ ರಾಠೋಡ್(30) ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಎಂದು ಗುರುತಿಸಲಾಗಿದೆ.

ಇದೇ ಔಷಧಿ ಸೇವಿಸಿದ ಲಕ್ಷ್ಮೀ ನರಸಿಂಹಲು ಅವರ ಪುತ್ರ ನಿಂಗಪ್ಪ ನರಸಿಂಹಲು ಅವರ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡಿತದ ಚಟ ಬಿಡಿಸುತ್ತೇನೆ ಎಂದು ಸಾಯಪ್ಪ ಮುತ್ಯಾ ಎಂಬಾತ ಮದ್ಯ ವ್ಯಸನಿಗಳ ಮೂಗಿನಲ್ಲಿ ನಾಟಿ ಔಷಧಿ ಹಾಕಿದ್ದರು. ಸಾಯಪ್ಪ ಮುತ್ಯಾ ನೀಡಿದ ಔಷಧಿಯಿಂದ ಲಕ್ಷ್ಮೀ ಹಾಗೂ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳರನ್ನು ಹಿಡಿಯಲು ಹೋದ ಪೇದೆಗೆ ಚೂರಿ ಇರಿತ

ವಿಜಯಪುರ: ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ಪೇದೆಗೆ ಚಾಕು ಇರಿದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ. ಮನೆ ಕಳ್ಳತನಕ್ಕೆ ಬಂದಿದ್ದ ಕಳ್ಳರನ್ನು ಹಿಡಿಯಲು ಪೊಲೀಸರು ಬೆನ್ನಟ್ಟುವಾಗ ಪೊಲೀಸ್‌ ಪೇದೆಗೆ ಚಾಕುವಿನಿಂದ (Stabbing Case) ಇರಿಯಲಾಗಿದೆ. ಬಸವನಬಾಗೇವಾಡಿಯ ಖಾನ್ ಆಸ್ಪತ್ರೆಯ ಪಕ್ಕದಲ್ಲಿ ಮಂಗಳವಾರ ರಾತ್ರಿ ಕಳ್ಳರು ಬಂದಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಕಳ್ಳರನ್ನು ಹಿಡಿಯಲು ಹೋದಾಗ ಪೊಲೀಸ್ ಪೇದೆಗೆ‌ ಚಾಕುವಿನಿಂದ ಇರಿಯಲಾಗಿದೆ.

ಪಿಐ ಗುರುಶಾಂತ ದಾಶ್ಯಾಳ ಸೇರಿ ನಾಲ್ಕು ಪೊಲೀಸರು, ಕಳ್ಳರಿದ್ದ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ಹಿಡಿಯಲು ಪೊಲೀಸರು ಬೆನ್ನಟ್ಟುತ್ತಿದ್ದಂತೆ ಖದೀಮರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೇದೆ ರಮೇಶ ಅವರು ಒಬ್ಬ ಕಳ್ಳನನ್ನು ಹಿಡಿದಿದ್ದಾರೆ. ಈ ವೇಳೆ ಕಳ್ಳ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಪೇದೆಯ ತೊಡೆ ಹಾಗೂ ಮತ್ತೆರಡು ಕಡೆಗೆ ಇರಿದು ಪರಾರಿಯಾಗಿದ್ದಾನೆ.

ಸಿಪಿಐ ಡ್ರೈವರ್ ಹಾಗೂ ಪೊಲೀಸ್ ಪೇದೆಯಾಗಿರುವ ರಮೇಶ ಗೂಳಿ(36) ಹಲ್ಲೆಗೊಳಗಾದ ಪೊಲೀಸ್ ಪೇದೆಯಾಗಿದ್ದಾರೆ. ಸದ್ಯ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದು, ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ತಂಡವೊಂದು ಕೈಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಓಡಾಡಿರುವ ದೃಶ್ಯ ಸ್ಥಳೀಯರ ಸಿಸಿ ಟಿವಿಯಲ್ಲಿ ಸೆರೆಯಾಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು ಆ ಆತಂಕ ಮರೆಯುವ ಮುನ್ನವೇ ಸದ್ಯ ಮತ್ತೆ ಜಿಲ್ಲೆಯಲ್ಲಿ ಪೊಲೀಸರ ಮೇಲೆ ಕಳ್ಳರು ಹಲ್ಲೆ ಮಾಡಿದ್ದು ನಿಜಕ್ಕೂ ಜಿಲ್ಲೆಯ ಜನರಲ್ಲಿ ಭಯ ಹುಟ್ಟಿಸುವಂತಾಗಿದೆ.

ಇದನ್ನೂ ಓದಿ: Love Jihad: ಮುಸ್ಲಿಂ ಹುಡುಗನ ಜೊತೆ ಜೈನ ಹುಡುಗಿ ನಾಪತ್ತೆ, ʼಲವ್‌ ಜಿಹಾದ್‌ʼ ಎಂದು ದೂರು

ಹರೀಶ್‌ ಕೇರ

View all posts by this author