ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ತುಮಕೂರಿನಲ್ಲಿ ಕಾರಿಗೆ ಖಾಸಗಿ ಬಸ್ಸು ಡಿಕ್ಕಿ, ಮೂವರು ದುರ್ಮರಣ

Tumkur news: ತುಮಕೂರಿನಿಂದ ಪಾವಗಡದತ್ತ ಖಾಸಗಿ ಬಸ್ ತೆರಳುತ್ತಿತ್ತು. ಇದೇ ವೇಳೆ ಕೊರಟಗೆರೆ ಕಡೆಯಿಂದ ತುಮಕೂರು ಕಡೆ ಕಾರ್ ಬರುತ್ತಿತ್ತು. ಈ ವೇಳೆ ಮುಖಾಮುಖಿ ಡಿಕ್ಕಿಯಾಗಿ ಕಾರ್​ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಇದ್ದವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯಕ್ಕೆ ದರ್ಶನಕ್ಕೆ ತೆರಳುತ್ತಿದ್ದರು.

ತುಮಕೂರು: ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ (Road accident) ಕಾರಲ್ಲಿದ್ದ ಐವರು ಪೈಕಿ ಮೂವರು ದುರ್ಮರಣ (death) ಹೊಂದಿರುವಂತಹ ಘಟನೆ ತುಮಕೂರು (Tumkur news) ತಾಲೂಕಿನ ಬೆಳಧರ ಗ್ರಾಮದ ಬಳಿ ನಡೆದಿದೆ. ಶಿವಕುಮಾರ್ (27), ಗೋವಿಂದಪ್ಪ (50) ಮತ್ತು ಭೈಚಾರಪುರದ ನಿವಾಸಿ ಶಿವಶಂಕರ್ (30) ಮೃತರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯಕ್ಕೆ ದರ್ಶನಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಅಪಘಾತದ ನಂತರ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ.

ತುಮಕೂರಿನಿಂದ ಪಾವಗಡದತ್ತ ಖಾಸಗಿ ಬಸ್ ತೆರಳುತ್ತಿತ್ತು. ಇದೇ ವೇಳೆ ಕೊರಟಗೆರೆ ಕಡೆಯಿಂದ ತುಮಕೂರು ಕಡೆ ಕಾರ್ ಬರುತ್ತಿತ್ತು. ಈ ವೇಳೆ ಮುಖಾಮುಖಿ ಡಿಕ್ಕಿಯಾಗಿ ಕಾರ್​ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಕೊರಟಗೆರೆ ತಾಲೂಕಿನ ರೆಡ್ಡಿಹಳ್ಳಿಯ ಶಂಕರ್ (28) ನನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ, ಮತ್ತೋರ್ವ ಕಿತ್ತಿನಾಗೇನಹಳ್ಳಿಯ ವೇಣುಗೋಪಾಲ್ (28) ನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಮೃತರು ಹಾಗೂ ಗಾಯಾಳುಗಳು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಕ್ಕಪಕ್ಕದ ಹಳ್ಳಿಯ ನಿವಾಸಿಗಳು ಎಂದು ತಿಳಿದುಬಂದಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹೈಕೋರ್ಟ್‌ಗೂ ಬಾಂಬ್‌ ಬೆದರಿಕೆ, 6 ಜಾಗಗಳಿಗೆ ಸ್ಫೋಟ ಸಂದೇಶ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್‌, ಇಸ್ರೇಲ್ ರಾಯಭಾರಿ ಕಚೇರಿ ಸೇರಿದಂತೆ 6 ಕಡೆಗಳಲ್ಲಿ RDX ಇಟ್ಟಿರುವುದಾಗಿ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ. ಶುಕ್ರವಾರ ಪ್ರಾರ್ಥನೆಯ ವೇಳೆಗೆ ಸ್ಫೋಟ ಆಗುತ್ತದೆ ಎಂದು ಬೆದರಿಕೆ ಸಂದೇಶ ಬಂದಿದ್ದು, ತಕ್ಷಣವೇ ಅಲರ್ಟ್‌ ಆದ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಇದು ಹುಸಿ ಸಂದೇಶ ಎಂದು ಗೊತ್ತಾಗಿದೆ.

ಇದನ್ನೂ ಓದಿ: Chitradurga Accident: ಹಿರಿಯೂರಿನ ಬಳಿ ಭೀಕರ ಅಪಘಾತ; ಕಾರು ಪಲ್ಟಿಯಾಗಿ ಮಗು ಸೇರಿ ಮೂವರ ಸಾವು

ಸೆ.22ರಂದು Cho_ramaswami@hotmail ಎಂಬ ಐಡಿಯಿಂದ ಆರು ಕಡೆಗಳಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಇಮೇಲ್ ಸಂದೇಶ ಬಂದಿದೆ. ಜೊತೆಗೆ ಹೈಕೋರ್ಟ್‌ಗೂ ಬಾಂಬ್ ಇಟ್ಟಿರುವುದಾಗಿ ಬೆದರಿಸಲಾಗಿತ್ತು. ಇಮೇಲ್​ ಮಾಡಿದ 'ರಾಮಸ್ವಾಮಿ'ಯನ್ನು ಹುಡುಕಲು ಪೊಲೀಸರು ಮುಂದಾಗಿದ್ದು, ಹಾಟ್‌ಮೇಲ್​​ಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಆದರೆ ಹಾಟ್‌ಮೇಲ್‌ನಿಂದ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ ಐಪಿ ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಕಳೆದ 10 ದಿನಗಳಿಂದ ವಿಶೇಷ ತಂಡದಿಂದ ಹುಡುಕಾಟ ನಡೆದಿದ್ದು, ಈ ಸಂಬಂಧ ವಿಧಾನಸೌಧ ಹಾಗು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಬೆದರಿಕೆ ಹಾಕುತ್ತಿರುವವರು ಡಾರ್ಕ್ ವೆಬ್ ಹಾಗೂ ವಿಪಿಎನ್‌ಗಳನ್ನು ಬಳಸಿ ಗುರುತು ಸಿಗದಂತೆ ನೋಡಿಕೊಂಡಿದ್ದಾರೆ. ಆದರೆ ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ, ಯಾವುದೇ ಬಾಂಬ್‌ ಬೆದರಿಕೆ ಕರೆಯನ್ನು ಪೊಲೀಸರು ಲಘುವಾಗಿ ಪರಿಗಣಿಸುತ್ತಿಲ್ಲ.

ಹರೀಶ್‌ ಕೇರ

View all posts by this author