ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sujata Bhat: ತಪ್ಪು ಮಾಡಿದೆ, ಹೆಗ್ಗಡೆ, ಮಂಜುನಾಥ ಸ್ವಾಮಿಯಲ್ಲಿ ಕ್ಷಮೆ ಕೇಳುವೆ: ಸುಜಾತ ಭಟ್

Dharmasthala: ಗಿರೀಶ್‌ ಮಟ್ಟೆಣ್ಣವರ್‌, ಮಹೇಶ್‌ ಶೆಟ್ಟಿ ತಿಮರೋಡಿ ಅವರ್ಯಾರೂ ಈಗ ತಮ್ಮ ಜೊತೆಗಿಲ್ಲ. ಅವರ ಸಹವಾಸ ನನಗೆ ಬೇಡ. ಅವರೂ ಹಾಳಾಗುವುದಲ್ಲದೆ ನನ್ನನ್ನೂ ಹಾಳು ಮಾಡಿದರು. ನಾಲ್ಕು ಮನೆ ಮುಸುರೆ ತಿಕ್ಕಿದರೂ ನನ್ನ ಜೀವನದಲ್ಲಿ ಕಪ್ಪು ಚುಕ್ಕಿ ಇರಲಿಲ್ಲ. ಇದೇ ನನ್ನ ಜೀವನದಲ್ಲಿ ಮೊದಲ ಬಾರಿಗೆ ಬಂದ ಕಪ್ಪು ಚುಕ್ಕಿ ಎಂದಿದ್ದಾರೆ.

ಬೆಂಗಳೂರು: ನಾನು ತಪ್ಪು ಮಾಡಿದ್ದೇನೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ (Dharmasthala Manjunatha Swamy)‌ ಬಳಿ ನಾನು ಕ್ಷಮಾಪಣೆ ಕೇಳುತ್ತೇನೆ. ಡಾ. ಡಿ. ವೀರೇಂದ್ರ ಹೆಗ್ಗಡೆ (Veerendra Heggade) ಅವರನ್ನು ಭೇಟಿಯಾಗಿ ಕೈ ಮುಗಿದು ಕ್ಷಮೆ ಕೇಳುತ್ತೇನೆ ಎಂದು ಸುಜಾತ ಭಟ್‌ (Sujatha Bhat) ಕಣ್ಣೀರಿಟ್ಟಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬುರುಡೆ ಗ್ಯಾಂಗ್ ಜೊತೆ ಹೋಗಿ ನಾನು ತಪ್ಪು ಮಾಡಿದ್ದೇನೆ. ಆ ಪಶ್ಚಾತ್ತಾಪ ನನಗೆ ಈಗಲೂ ಕಾಡುತ್ತಿದೆ. ಹಾಗಾಗಿ ನಾನು ಧರ್ಮಸ್ಥಳಕ್ಕೆ ಹೋಗಿ ನನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

ಖ್ಯಾತ ನಟನ ಸಹೋದರ ತನಗೆ ಸಹಾಯ ಮಾಡಿದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ನಟನ ಸಹೋದರನಿಗೂ ನನಗೂ ಯಾವುದೇ ಸಂಬಂಧ ಇಲ್ಲ. ವಾಸಂತಿ ಸತ್ತಿಲ್ಲ ಆಕೆ ಬದುಕಿದ್ದಾಳೆ ಎಂದು ಎಂದು ಎಸ್‌ಐಟಿ ಮುಂದೆ ಹೇಳಿದ್ದೇನೆ. ಹೀಗಾಗಿ ಎಸ್‌ಐಟಿ ಅವರು ತನಿಖೆ ನಡೆಸುತ್ತಿರಬಹುದು. ಗಿರೀಶ್‌ ಮಟ್ಟೆಣ್ಣವರ್‌, ಮಹೇಶ್‌ ಶೆಟ್ಟಿ ತಿಮರೋಡಿ ಅವರ್ಯಾರೂ ಈಗ ತಮ್ಮ ಜೊತೆಗಿಲ್ಲ. ಅವರ ಸಹವಾಸ ನನಗೆ ಬೇಡ. ನಾಲ್ಕು ಮನೆ ಮುಸುರೆ ತಿಕ್ಕಿದರೂ ನನ್ನ ಜೀವನದಲ್ಲಿ ಕಪ್ಪು ಚುಕ್ಕಿ ಇರಲಿಲ್ಲ. ಇದೇ ನನ್ನ ಜೀವನದಲ್ಲಿ ಮೊದಲ ಬಾರಿಗೆ ಬಂದ ಕಪ್ಪು ಚುಕ್ಕಿ. ಇದರ ಬಗ್ಗೆ ನನಗೆ ಪಶ್ಚಾತ್ತಾಪ ಇದೆ. ಅವರೂ ಹಾಳಾಗುವುದಲ್ಲದೆ ನನ್ನನ್ನೂ ಹಾಳು ಮಾಡಿದರು ಎಂದರು.

ಇದನ್ನೂ ಓದಿ: Dharmasthala Case: ಧರ್ಮಸ್ಥಳ ಪ್ರಕರಣಗಳ ತನಿಖೆ ಶೀಘ್ರದಲ್ಲಿ ಮುಕ್ತಾಯ: ಗೃಹ ಸಚಿವ ಪರಮೇಶ್ವರ್‌

ನನಗೆ ಈಗ ಜೀವನ ನಡೆಸುವುದು ಕಷ್ಟವಾಗಿದೆ. ನನಗೆ ಮೊಬೈಲ್ ಭಾಗ್ಯ, ವಾಚ್ ಭಾಗ್ಯ, ದುಡ್ಡಿನ ಭಾಗ್ಯ ಎಂದು ಹೇಳುತ್ತಾರೆ. ಸಹಾಯ ಮಾಡುವುದೇ ತಪ್ಪು ಅಂತಾದರೆ ಮಾನವೀಯತೆ ಎಲ್ಲಿದೆ? ಅನನ್ಯ ಭಟ್ , ಬುರುಡೆ ಗ್ಯಾಂಗ್ ಎಲ್ಲದಕ್ಕೂ ನಾನು ಫುಲ್ ಸ್ಟಾಪ್ ಇಟ್ಟಿದ್ದೇನೆ. ವಾಸಂತಿ ಪ್ರಕರಣದಲ್ಲಿ ನಟನ ಸಹೋದರ ಇರುವುದು ನಿಜ. ವಾಸಂತಿ ಮಿಸ್ಸಿಂಗ್ ಕೇಸಲ್ಲಿ ನಟನ ಸಹೋದರ ಎ2 ಆರೋಪಿ. ವಾರದ ಬಳಿಕ ಕೊಳೆತ ಸ್ಥಿತಿಯಲ್ಲಿ ವಾಸಂತಿ ಶವ ಪತ್ತೆಯಾಗಿದೆ ಎಂಬ ಸುದ್ದಿ ಹರಿದಾಡಿತ್ತು. ವಾಸಂತಿ ಹಾಗೂ ಸ್ಟಾರ್ ನಟನ ಸಹೋದರನ ನಡುವಿನ ಸಂಬಂಧ ಏನು ಅಂತ ಗೊತ್ತಿಲ್ಲ ಎಂದು ಸುಜಾತ ಭಟ್‌ ಹೇಳಿದ್ದಾರೆ.

ಬಿಗ್‌ ಬಾಸ್‌ಗೆ ಒಂದು ದಿನದ ಮಟ್ಟಿಗಾದರೂ ಹೋಗಿ ಬರಬೇಕು ಎಂಬ ಆಸೆ ಇದೆ ಎಂದೂ ಅವರು ಹೇಳಿದ್ದಾರೆ.

ಹರೀಶ್‌ ಕೇರ

View all posts by this author