ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Stampede: ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಕಬ್ಬನ್‌ ಪಾರ್ಕ್‌ ಅಸೋಸಿಯೇಶನ್

Karnataka High court: ಕಾಲ್ತುಳಿತದಲ್ಲಿ ಪಾರ್ಕ್​ಗೆ ಹಾನಿಯಾಗಿದ್ದು, ಈ ನಷ್ಟವನ್ನು ಆರ್​ಸಿಬಿ ಹಾಗೂ ಕೆಎಸ್​ಸಿಎ ಭರಿಸಿಕೊಡಬೇಕು ಅಂತ ಕಬ್ಬನ್​ ಪಾರ್ಕ್ ಅಸೋಸಿಯೇಷನ್ ಹೈಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಸಿದೆ. ಕಾಲ್ತುತುಳಿತದಲ್ಲಿ ಉಂಟಾದ ಸಂಪೂರ್ಣ ನಷ್ಟ ಭರಿಸುವಂತೆ ಕಬ್ಬನ್​ ಪಾರ್ಕ್ ಅಸೋಸಿಯೇಷನ್ ಕೋರ್ಟ್ ಮೊರೆ ಹೋಗಿ ಒತ್ತಾಯ ಮಾಡಿದೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಐಪಿಎಲ್ (IPL) ಟ್ರೋಫಿ ಗೆದ್ದ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದ ಕಾಲ್ತುಳಿತ (Bengaluru Stampede) ಘಟನೆಯಲ್ಲಿ ಈಗಾಗಲೇ ಪದಾಧಿಕಾರಿಗಳ ಬಂಧನ ಹಾಗೂ ನ್ಯಾಯಾಂಗ ಪ್ರಕ್ರಿಯೆಯ ಬಿಸಿ ಅನುಭವಿಸುತ್ತಿರುವ ಆರ್‌ಸಿಬಿ ಮತ್ತು ಕೆಎಸ್‌ಸಿಎ ವಿರುದ್ಧ ಇದೀಗ ಕಬ್ಬನ್ ಪಾರ್ಕ್ (Cubbon Park) ಅಸೋಸಿಯೇಷನ್ ಕೂಡ ಕರ್ನಾಟಕ ಹೈಕೋರ್ಟ್​ (Karnataka High court) ಮೆಟ್ಟಿಲು ಏರಿದೆ. ಅಭಿಮಾನಿಗಳ ಕಾಲ್ತುಳಿತದಿಂದ ಆದ ಹಾನಿಯನ್ನು ತುಂಬಿಕೊಡಬೇಕು ಎಂದು ಪ್ರಕರಣ ದಾಖಲಿಸಿದೆ.

ಆರ್​ಸಿಬಿ ಆಟಗಾರರನ್ನು ವಿಧಾನಸೌಧದ ಗ್ರ್ಯಾಂಡ್​ ಸ್ಟೆಪ್ಸ್​ನಲ್ಲಿ ಸರ್ಕಾರ ಸನ್ಮಾನಿಸಿತ್ತು. ಆರ್​​ಸಿಬಿ ಆಟಗಾರರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳು ವಿಧಾನಸೌಧದ ಪಕ್ಕದಲ್ಲಿ ಇದ್ದ ಕಬ್ಬನ್ ಪಾರ್ಕ್​ನಲ್ಲಿನ ಮರಗಳ ಮೇಲೆ ಹತ್ತಿ ಆಟಗಾರರನ್ನು ನೋಡಲು ಮುಂದಾದರು. ಈ ವೇಳೆ ಅಭಿಮಾನಿಗಳ ಕಾಲ್ತುತುಳಿತದಿಂದ ಸಾಕಷ್ಟು ಸಸಿಗಳು ಹಾಳಾಗಿವೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಆರೋಪಿಸಿ, ಕೋರ್ಟ್​ ಮೆಟ್ಟಿಲು ಏರಿದೆ.

ಕಬ್ಬನ್ ಪಾರ್ಕ್‌ನಲ್ಲಿದ್ದ ಸಸಿಗಳು, ಮರಗಳಿಗೆ ಮತ್ತು ಉದ್ಯಾನವನಕ್ಕೆ ಹಾನಿಯಾಗಿದೆ. ಹಾಗೇ ವಿಧಾನಸೌಧದ ಮುಂಭಾಗದ ಗಾರ್ಡನ್​​ನಲ್ಲೂ ಹಾನಿಯಾಗಿದೆ. ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್​ನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಲಾನ್ ಅಳವಡಿಸಿತ್ತು. ಈ ಲಾನ್​ ಕೂಡ ಕಾಲ್ತುತುಳಿತದಲ್ಲಿ ಹಾನಿಯಾಗಿದೆ. ಕಬ್ಬನ್​ ಪಾರ್ಕ್​ಗೆ ಹಾನಿಯಾದರೆ ನೀವೇ ಹೊಣೆಗಾರರು ಅಂತ ಆರ್​ಸಿಬಿ ಮತ್ತು ಕೆಎಸ್​ಸಿಎಗೆ ಮೊದಲೇ ಷರತ್ತು ಹಾಕಲಾಗಿತ್ತು.

ಕಾಲ್ತುತುಳಿತದಲ್ಲಿ ಪಾರ್ಕ್​ಗೆ ಹಾನಿಯಾಗಿದ್ದು, ಈ ನಷ್ಟವನ್ನು ಆರ್​ಸಿಬಿ ಹಾಗೂ ಕೆಎಸ್​ಸಿಎ ಭರಿಸಿಕೊಡಬೇಕು ಅಂತ ಕಬ್ಬನ್​ ಪಾರ್ಕ್ ಅಸೋಸಿಯೇಷನ್ ಹೈಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಸಿದೆ. ಕಾಲ್ತುತುಳಿತದಲ್ಲಿ ಉಂಟಾದ ಸಂಪೂರ್ಣ ನಷ್ಟ ಭರಿಸುವಂತೆ ಕಬ್ಬನ್​ ಪಾರ್ಕ್ ಅಸೋಸಿಯೇಷನ್ ಕೋರ್ಟ್ ಮೊರೆ ಹೋಗಿ ಒತ್ತಾಯ ಮಾಡಿದ್ದು, ಆರ್​ಸಿಬಿ ಹಾಗೂ ಕೆಎಸ್​ಸಿಎಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ನಿಮಿತ್ತ ಜೂನ್ 4 ರಂದು ನಡೆದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಪ್ರಕರಣದ ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೇತೃತ್ವದ ತನಿಖಾ ತಂಡ ಸರ್ಕಾರಕ್ಕೆ ತನಿಖಾ ಸಲ್ಲಿಸಿತ್ತು.

ಇದನ್ನೂ ಓದಿ: Bengaluru Stampede: ಕಬ್ಬನ್ ಪಾರ್ಕ್‌ನ ಗಿಡ-ಮರಗಳಿಗೆ ಹಾನಿ; ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ದೂರು ದಾಖಲು

ಹರೀಶ್‌ ಕೇರ

View all posts by this author