ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻರಿಂಕು ಸಿಂಗ್‌ಗೆ ಕುಲ್ದೀಪ್‌ ಯಾದವ್‌ ಕಪಾಳಮೋಕ್ಷʼ-ಸ್ಪಷ್ಟನೆ ಕೊಟ್ಟ ಕೆಕೆಆರ್‌!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತಾ ನೈಟ್‌ ರೈಡರ್ಸ್‌ 14 ರನ್‌ಗಳ ಗೆಲುವು ಪಡೆದ ಬಳಿಕ ಡೆಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್, ಕೆಕೆಆರ್ ಬ್ಯಾಟ್ಸ್‌ಮನ್ ರಿಂಕು ಸಿಂಗ್‌ಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಬಗ್ಗೆ ಕೆಕೆಆರ್‌ ಸ್ಪಷ್ಟನೆ ನೀಡಿದೆ.

ರಿಂಕು ಸಿಂಗ್‌ಗೆ ಕುಲ್ದೀಪ್‌ ಕಪಾಳಮೋಕ್ಷ

ನವದೆಹಲಿ:‌ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌(Kolkata Knight Riders) ತಂಡದ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ 14 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದ ಬಳಿಕ ಕುಲ್ದೀಪ್‌ ಯಾದವ್‌ (Kuldeep Yadav) ಹಾಗೂ ರಿಂಕು ಸಿಂಗ್‌ ಇಬ್ಬರ ನಡುವೆ ನಡೆದಿದ್ದ ಒಂದು ಘಟನೆ ನಡೆದಿತ್ತು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಒಂದು ಕಡೆ ಎರಡೂ ತಂಡಗಳು ಆಟಗಾರರು ನಗು ನಗುತ್ತಾ ಸಂಭಾಷಣೆ ನಡೆಸುತ್ತಿದ್ದರೆ, ಇವರ ಪಕ್ಕಾ ನಿಂತಿದ್ದ ಕುಲ್ದೀಪ್‌ ಯಾದವ್‌, ರಿಂಕು ಸಿಂಗ್‌ಗೆ ಎರಡು ಭಾರಿ ಕಪಾಳ ಮೋಕ್ಷ ಮಾಡಿದ್ದರು. ಈ ವಿಡಿಯೊ ನೋಡಿದ ಕ್ರಿಕೆಟ್‌ ಅಭಿಮಾನಿಗಳು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌, ಒಂದಲ್ಲ ಎರಡು ಬಾರಿ ರಿಂಕು ಸಿಂಗ್‌ಗೆ ಬಾರಿಸಿದರು. ಈ ವೇಳೆ ರಿಂಕು ಸಿಂಗ್‌ ಪ್ರತಿಕ್ರಿಯೆ ವಿಭಿನ್ನವಾಗಿತ್ತು. ಅವರು ಅಸಮಾಧಾನ ವ್ಯಕ್ತಪಡಿಸಿದ ರೀತಿ ಕಾಣುತ್ತಿದ್ದರು. ಅಂದರೆ ಅವರ ಮುಖ ಭಾವದಲ್ಲಿ ಹಾಸ್ಯ ಕಾಣುತ್ತಿರಲಿಲ್ಲ. ಈ ಕಾರಣದಿಂದ ಕೆಲ ಅಭಿಮಾನಿಗಳು ಕುಲ್ದೀಪ್‌ ಯಾದವ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಭಾರತ ತಂಡದ ಸಹ ಆಟಗಾರನ ಎದುರು ಕುಲ್ದೀಪ್‌ ಯಾದವ್‌ ಅವರ ನಡೆಯನ್ನು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

IPL 2025: ಪಂದ್ಯದ ಬಳಿಕ ರಿಂಕು ಸಿಂಗ್‌ ಕೆನ್ನೆಗೆ ಬಾರಿಸಿದ ಕುಲ್ದೀಪ್‌ ಯಾದವ್!‌ ವಿಡಿಯೊ

ಸೋಶಿಯಲ್‌ ಮೀಡಿಯಾದಲ್ಲಿ ರಿಂಕು ಸಿಂಗ್‌ ಹಾಗೂ ಕುಲ್ದೀಪ್‌ ಯಾದವ್‌ ಅವರ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಕೋಲ್ಕತಾ ನೈಟ್‌ ರೈಡರ್ಸ್‌ ಸ್ಪಷ್ಟನೆ ನೀಡಿದೆ. "ಮೀಡಿಯಾ vs ರಿಯಾಲಿಟಿ! ನಮ್ಮ ಪ್ರತಿಭಾವಂತ ಹುಡುಗರು," ಎಂದು ಕೋಲ್ಕತಾ ಫ್ರಾಂಚೈಸಿ, ಕುಲ್ದೀಪ್‌ ಹಾಗೂ ರಿಂಕು ಸಿಂಗ್‌ ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಜೊತೆಯಾಗಿರುವ ಫೋಟೋಗಳನ್ನು ಒಳಗೊಂಡ ವಿಡಿಯೊಗೆ ಈ ರೀತಿಯ ಶೀರ್ಷಿಕೆ ನೀಡಿದೆ.

ವಿಡಿಯೊ ಮೂಲಕ ಕುಲ್ದೀಪ್‌ ಹಾಗೂ ರಿಂಕು ನಡುವೆ ಗಂಭೀರ ವಿಷಯ ಯಾವುದೂ ಇಲ್ಲ. ಇವರು ತಮಾಷೆಗಾಗಿ ನಡೆದುಕೊಂಡಿದ್ದಾರೆಂದು ಕೆಕೆಆರ್‌ ಸ್ಪಷ್ಟನೆ ನೀಡಿದ ಹೊರತಾಗಿಯೂ ಕೆಲವರು ಒಪ್ಪಿಕೊಂಡಿಲ್ಲ. ಕುಲ್ದೀಪ್‌ ಯಾದವ್‌, ರಿಂಕು ಸಿಂಗ್‌ ಬಳಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತಿದ್ದಾರೆ.



ಕೋಲ್ಕತಾ ನೈಟ್‌ ರೈಡರ್ಸ್‌ ಪ್ಲೇಆಫ್ಸ್‌ ಆಸೆ ಜೀವಂತ

ಅಂದ ಹಾಗೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 204 ರನ್‌ಗಳನ್ನು ಕಲೆ ಹಾಕಿತ್ತು. ಕೆಕೆಆರ್‌ ಪರ ರಿಂಕು ಸಿಂಗ್‌

36 ರನ್‌ಗಳನ್ನು ಕಲೆ ಹಾಕಿದ್ದರೆ, ಅಂಗ್‌ಕೃಷ ರಘುವಂಶಿ 44 ರನ್‌ಗಳನ್ನು ಕಲೆ ಹಾಕಿದ್ದರು. ಬಳಿಕ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಫಾಫ್‌ ಡು ಪ್ಲೆಸಿಸ್‌ (62) ಹಾಗೂ ಅಕ್ಷರ್‌ ಪಟೇಲ್‌ (43) ಅವರ ಬ್ಯಾಟಿಂಗ್‌ ಬಲದ ಹೊರತಾಗಿಯೂ ಸುನೀಲ್‌ ನರೇನ್‌ ಸ್ಪಿನ್‌ ಮೋಡಿಗೆ (29/3) ನಲುಗಿ 190 ರನ್‌ಗಳಿಗೆ ಸೀಮಿತವಾಯಿತು.



ರಿಂಕು ಸಿಂಗ್‌ ನೀರಸ ಪ್ರದರ್ಶನ

ಪ್ರಸಕ್ತ ಋತುವಿನಲ್ಲಿ ರಿಂಕು ಸಿಂಗ್ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಆದರೆ, ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಿಂಕು 25 ಎಸೆತಗಳಲ್ಲಿ 36 ರನ್ ಗಳಿಸಿದ್ದರು. ಅವರು ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ. ಈ ಋತುವಿನಲ್ಲಿ ರಿಂಕು ಅವರ ಪ್ರದರ್ಶನ ನಿರಾಶಾದಾಯಕವಾಗಿದೆ. ಮೆಗಾ ಹರಾಜಿಗೂ ಮುನ್ನ ಅವರನ್ನು ಕೆಕೆಆರ್ ಉಳಿಸಿಕೊಂಡಿತ್ತು. 10 ಪಂದ್ಯಗಳಲ್ಲಿ ಅವರು 33.80ರ ಸರಾಸರಿ ಮತ್ತು 145.68ರ ಸ್ಟ್ರೈಕ್ ರೇಟ್‌ನಲ್ಲಿ 169 ರನ್ ಗಳಿಗೆ ಸೀಮಿತರಾಗಿದ್ದಾರೆ.