ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Vichara Goshti: ವೀರೇಂದ್ರ ಹೆಗ್ಗಡೆ ಶ್ರೀರಾಮ, ಹರ್ಷೇಂದ್ರ ಜೈನ್ ಲಕ್ಷ್ಮಣ: ಜಿತೇಂದ್ರ ಕುಂದೇಶ್ವರ

Jitendra Kundeshwara: ಧರ್ಮಸ್ಥಳದ ವಿರುದ್ಧ ಎಷ್ಟೊಂದು ಸುಳ್ಳುಗಳು ಹರಿದಾಡುತ್ತಿವೆ. ಬುದ್ಧಿವಂತರು, ತಿಳಿದುಕೊಂಡವರು ಹೊಸ ಹೊಸ ಸುಳ್ಳುಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಒದಗಿಸುವ ಸೌಜನ್ಯ ಜನಪ್ರತಿನಿಧಿಗಳಿಗಿಲ್ಲ ಎಂದು ವಿಶ್ವವಾಣಿ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಅಸಮಾಧಾನ ಹೊರಹಾಕಿದರು.

ಬೆಂಗಳೂರು: ಡಾ. ವೀರೇಂದ್ರ ಹೆಗ್ಗಡೆಯವರದು ರಾಮನಂತಹ ವ್ಯಕ್ತಿತ್ವ, ಹರ್ಷೇಂದ್ರ ಹೆಗ್ಗಡೆಯವರದು ಲಕ್ಷ್ಮಣನಂತಹ ವ್ಯಕ್ತಿತ್ವ. ತ್ರೇತಾಯುಗದಲ್ಲಿ ಶ್ರೀರಾಮನಿಗೇ ಅಪವಾದಗಳು ತಪ್ಪಲಿಲ್ಲ. ಅಂತಹದ್ದರಲ್ಲಿ ಕಲಿಯುಗದಲ್ಲಿ ವೀರೇಂದ್ರ ಹೆಗ್ಗಡೆ ಅವರಂತಹವರ ಮೇಲೆ ಆರೋಪಗಳು ಬರುವುದು ಸಹಜ ಎಂದು ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ (Jitendra Kundeshwara) ಹೇಳಿದರು.

ನಗರದ ಟೌನ್ ಹಾಲ್‌ನಲ್ಲಿ ಆಯೋಜಿಸಿದ್ದ 'ಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಧರ್ಮಸ್ಥಳದ ವಿರುದ್ಧ ಎಷ್ಟೊಂದು ಸುಳ್ಳುಗಳು ಹರಿದಾಡುತ್ತಿವೆ. ಬುದ್ಧಿವಂತರು, ತಿಳಿದುಕೊಂಡವರು ಹೊಸ ಹೊಸ ಸುಳ್ಳುಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಒದಗಿಸುವ ಸೌಜನ್ಯ ಜನಪ್ರತಿನಿಧಿಗಳಿಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.



ಸಮಾಜದಲ್ಲಿ ಸುಳ್ಳು ಸುದ್ದಿಗಳೇ ವಿಜೃಂಭಿಸುತ್ತಿದೆ. ಹಳೇ ಕಾಲದ ಕಥೆಗಳಲ್ಲಿ ಒಂದು ಊರಿನಲ್ಲಿ ಜಮೀನುದಾರನಿದ್ದ, ಆತ ಬಡವರ ಮೇಲೆ ದೌರ್ಜನ್ಯ ಮಾಡುತ್ತಿದ್ದ. ಹೆಣ್ಣು ಮಕ್ಕಳನ್ನು ಹಾಳು ಮಾಡುತ್ತಿದ್ದ ಎಂದು ಕೇಳಿರುತ್ತೇವೆ. ಈ ರೀತಿಯ ಕಥೆಗಳನ್ನು ಹೇಳಿದರೆ ಜನ ಸುಲಭವಾಗಿ ನಂಬುತ್ತಾರೆ. ಧರ್ಮಸ್ಥಳದ ಬಗ್ಗೆಯೂ ಇದೇ ರೀತಿಯ ಸ್ಟೋರಿಗಳು ಕೇಳಿಬರುತ್ತಿದ್ದವು. ಸೌಜನ್ಯಾ ಪ್ರಕರಣದಲ್ಲಿ ಹಿಂದುತ್ವ, ಕೇಸರಿ ಶಾಲು ಹಾಕಿಕೊಂಡವರೇ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.



ಈ ಸುದ್ದಿಯನ್ನೂ ಓದಿ | Vasanth Giliyar: ಸೌಜನ್ಯಾ ಹೋರಾಟ ಹಾದಿ ತಪ್ಪಿದ್ದೇ ತಿಮರೋಡಿಯಿಂದ: ವಸಂತ್‌ ಗಿಳಿಯಾರ್‌