ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳ(IND vs ENG) ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ 2-2 ಅಂತರದಲ್ಲಿ ಡ್ರಾ ಆಗಿದೆ. ಈ ಸರಣಿಯಲ್ಲಿ ಆಟಗಾರರ ನಡುವೆ ಸ್ಲೆಡ್ಜಿಂಗ್ ಹಾಗೂ ಮಾತಿನ ಸಮರ ಸೇರಿದಂತೆ ಹಲವು ಆಸಕ್ತದಾಯಕ ಘಟನೆಗಳು ನಡೆದಿದ್ದವು. ಇದರ ನಡುವೆ ಉಭಯ ತಂಡಗಳ ನಡುವಣ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ರವಾಸಿ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಹಾಗೂ ಕೆನಿಂಗ್ಟನ್ ಓವಲ್ ಕ್ರೀಡಾಂಗಣದ ಪಿಚ್ ಕ್ಯುರೇಟರ್ ಲೀ ಫೋರ್ಟಿಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಘಟನೆ ಬಗ್ಗೆ ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್(Matthew Hayden) ಪ್ರತಿಕ್ರಿಯಿಸಿದ್ದಾರೆ. ಗೌತಮ್ ಗಂಭೀರ್ ಬಳಸಿದ ಭಾಷೆ ಸರಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್ ಸರಣಿಯ ಮಕೊನೆಯ ಪಂದ್ಯ ಲಂಡನ್‌ನ ಕೆನಿಂಗ್ಟನ್ ಓವಲ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ತಂಡ 6 ರನ್ ರೋಚಕ ಗೆಲುವು ಸಾಧಿಸಿತ್ತು. ಅಂದ ಹಾಗೆ ಈ ಪಂದ್ಯದ ಆರಂಭಕ್ಕೂ ಮುನ್ನ ಅಭ್ಯಾಸ ನಡೆಸುತ್ತಿದ್ದ ವೇಳೆ ಭಾರತ ತಂಡದ ಹೆಡ್ ಕೋಚ್ ಕೋಚ್ ಗೌತಮ್ ಗಂಭೀರ್ ಅವರು ಪಿಚ್ ಬಳಿ ತೆರಳಿದ್ದರು. ಈ ವೇಳೆ ಪಿಚ್ ಕ್ಯುರೇಟರ್ ಲೀ ಪೋರ್ಟಿಸ್ ಅವರು ಶೂನಲ್ಲಿ ಪಿಚ್ ಬಳಿ ತೆರಳಬಾರದು ಎಂದು ಸೂಚನೆ ನೀಡಿದ್ದರು. ಇದರಿಂದ ಕೆರಳಿದ್ದ ಗೌತಮ್ ಗಂಭೀರ್, ಪಿಚ್ ಕ್ಯುರೇಟರ್ ಬಳಿ ಜಗಳವಾಡಿದ್ದರು. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
IND vs ENG: ಅರ್ಷದೀಪ್ ಸಿಂಗ್ ಬದಲು ಅನ್ಶುಲ್ ಕಾಂಬೋಜ್‌ಗೆ ಸ್ಥಾನ ನೀಡಿದ್ದೇಕೆ? ಅರುಣ್ ಲಾಲ್ ಪ್ರಶ್ನೆ!
"ನಾವು ಅಥವಾ ನಮ್ಮ ತಂಡದ ಆಟಗಾರರು ಏನು ಮಾಡಬೇಕೆಂದು ನೀವು ಹೇಳುವ ಅಗತ್ಯವಿಲ್ಲ. ನೀವು ನಮಗೆ ಹೇಳುವ ಅಗತ್ಯವಿಲ್ಲ. ನಮ್ಮ ತಂಡದ ಯಾವುದೇ ಆಟಗಾರನಿಗೂ ನೀವು ಏನೂ ಹೇಳಬಾರದು. ನಿಮಗೆ ಹೇಳಲು ಯಾವುದೇ ಹಕ್ಕು ಇಲ್ಲ. ನೀವು ಕೇವಲ ಗ್ರೌಂಡ್ಸ್‌ಮ್ಯಾನ್ ಅಷ್ಟೇ, ಅದಕ್ಕೆ ತಕ್ಕಂತೆ ಇರಿ," ಎಂದು ಗೌತಮ್ ಗಂಭೀರ್ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮ್ಯಾಥ್ಯೂ ಹೇಡನ್, "ಇದು ಇಂಗ್ಲೆಂಡ್‌ನಲ್ಲಿ ಒಂದು ವಿಶಿಷ್ಟ ಪ್ರಕರಣ. ಇದು ಸ್ವಲ್ಪ ಮಟ್ಟಿಗೆ ಗೊಂದಲ ಮೂಡಿಸುತ್ತದೆ. ನಾವು ಇಲ್ಲಿದ್ದೇವೆ, ಇದು ಕೊನೆಯ ಟೆಸ್ಟ್ ಪಂದ್ಯ, ಇದು ನನ್ನ ಸ್ಥಳ ಎಂದು ಹೇಳುವ ಮೂಲಕ ಅವರು ಗೌತಮ್ ಗಂಭೀರ್ ಅವರನ್ನು ಕಠಿಣಗೊಳಿಸಲು ಪ್ರಯತ್ನಿಸಲಿದ್ದಾರೆ. ಆದರೆ ಮಾತಿನ ಧಾಟಿಯನ್ನು ಕಡಿಮೆ ಮಾಡಲು ಅವರಿಗೆ ಎಲ್ಲ ರೀತಿ ಹಕ್ಕಿದೆ ಎಂದು ನಾನು ಭಾವಿಸುತ್ತೇನೆ. ಅವರು ಇನ್ನೂ ಉತ್ತಮ ಭಾಷೆಯನ್ನು ಬಳಸಬಹುದಿತ್ತು. ಆದರೆ ವಾಸ್ತವವೆಂದರೆ, ಅವರ ತಂಡವು ಅತ್ಯಂತ ಪ್ರಮುಖ ಟೆಸ್ಟ್ ಪಂದ್ಯಕ್ಕೂ ಮುಂಚಿತವಾಗಿ ತರಬೇತಿ ಪಡೆಯುತ್ತಿತ್ತು," ಎಂದು ಹೇಡನ್ ತಿಳಿಸಿದ್ದಾರೆ.
IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್ ಬುಮ್ರಾಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
ಗಂಭೀರ್ ಇನ್ನಷ್ಟು ಉತ್ತಮವಾಗಿ ವ್ಯವರಿಸಬಹುದಿತ್ತು
ಗೌತಮ್ ಗಂಭೀರ್ ಅವರು ಸನ್ನಿವೇಶವನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಹೇಳಿದ್ದ ಮ್ಯಾಥ್ಯೂ ಹೇಡನ್ ಅವರ ಮಾತನ್ನು ಗ್ರೆಗ್ ಬ್ಲೆವೆಟ್ ಒಪ್ಪಿಕೊಂಡಿದ್ದಾರೆ.
"ನಾನು ಒಪ್ಪುತ್ತೇನೆ. ಈಗಲೂ ಸಹ, ಒಬ್ಬ ಕಾಮೆಂಟೇಟರ್ ಆಗಿಯೂ ನೀವು ಪಿಚ್ ಹತ್ತಿರ ಬರುತ್ತೀರಿ. ಆದರೆ, ಸ್ಪೈಕ್ಸ್ ಹಾಕಿಲ್ಲವಾದರೂ ನೀವು ಪಿಚ್ ಬಳಿ ಬರಬಾರದು ಎಂದಿ ಎಲ್ಲರೂ ಹೇಳುತ್ತಿದ್ದರು. ಇದು ತುಂಬಾ ಹಾಸ್ಯಾಸ್ಪದವಾಗಿದೆ. ನನಗೆ ಹತಾಶೆ ಅರ್ಥವಾಗುತ್ತದೆ. ಆದರೆ ಅವರು ಬಳಸಿದ ಭಾಷೆ ಉತ್ತಮವಾಗಿಲ್ಲ ಎಂದು ನಾನು ಒಪ್ಪುತ್ತೇನೆ. ಅವರು ಯೋಚಿಸಿದ್ದರೆ, ಅವರು ಬಹುಶಃ ಅದನ್ನು ಸ್ವಲ್ಪ ಉತ್ತಮವಾಗಿ ನಿರ್ವಹಿಸಬಹುದಿತ್ತು, ”ಎಂದು ಬ್ಲೆವೆಟ್ ತಿಳಿಸಿದ್ದಾರೆ.