ಮೇಲುಕೋಟೆ, ಜ. 15, 2025: ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಲೇಖನ, ಭಾಷಣ, ಕಂಠಪಾಠ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಾಜ್ಯದ ವಿವಿಧ ಭಾಗದ 80 ಕಾಲೇಜಿನ ಒಟ್ಟು 160 ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಯತೀಂದ್ರ ಮತ ದೀಪಿಕಾಯಾಃ ವೈಶಿಷ್ಠ್ಯಂ - ವಿಷಯದ ಲೇಖನ ಸ್ಪರ್ಧೆಯಲ್ಲಿ ಮೇಲುಕೋಟೆ ಆಚಾರ್ಯ ಪಾಠಶಾಲೆಯ ಪ್ರಜ್ವಲ್ ಪ್ರಥಮ, ಮೈಸೂರು ವಿಶ್ವಚೇತನ ಪಾಠಶಾಲೆಯ ಧೃತಿ ಆತ್ರೇಯ ದ್ವಿತೀಯ, ಚಿತ್ರದುರ್ಗದ ಶ್ರೀ.ಮ.ನಿ.ಜ. ತೊಂಟದಾರ್ಯ ಸಂಸ್ಕೃತ ಪಾಠಶಾಲೆಯ ರಿಜವಾನ್ ಗೋಡೇಕಾರ ತೃತೀಯ, ತುಮಕೂರು ಸಿದ್ಧಗಂಗಾಮಠದ ಉದ್ಧಾನೇಶ್ವರ ವೇದ-ಸಂಸ್ಕೃತ ಪಾಠಶಾಲೆಯ ಲೋಹಿತ್ ಸಮಾಧಾನಕರ ಬಹುಮಾನ ಸ್ವೀಕರಿಸಿದರು.
ಭಾಷಣ ಸ್ಪರ್ಧೆ: ಸನಾತನ ಶಿಕ್ಷಾಪದ್ಧತೇಃ ವೈಲಕ್ಷಣಂ ಎಂಬ ಭಾಷಣ ಸ್ಪರ್ಧೆಯಲ್ಲಿ ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆಯ ಎಂ.ಜಿ. ವಿಕಾಸ್ ಪ್ರಥಮ, ಹೊನ್ನಾವರ ರಾಘವೇಂದ್ರ ಭಾರತಿ ಸುವೇದ ಸಂಸ್ಕೃತ ಪಾಠಶಾಲೆಯ ರಾಜೇಶ ದತ್ತಾತ್ರೇಯ ಹೆಗಡೆ ದ್ವಿತೀಯ, ಆದಿಚುಂಚನಗಿರಿ ಶ್ರೀ ಕಾಲಭೈರೇಶ್ವರ ವೇದಾಗಮ ವಿದ್ಯಾಲಯದ ಸೋಮಶೇಖರ ತೃತೀಯ ಸ್ಥಾನ ವಿಜೇತರಾಗಿ ಬಹುಮಾನ ಪಡೆದುಕೊಂಡರು.
ಸ್ತೋತ್ರದ ಕಂಠಪಾಠ ಸ್ಪರ್ಧೆ: ಶ್ರೀ ಗೋಪಾಲ ವಿಂಶತಿ- ಸ್ತೋತ್ರದ ಕಂಠಪಾಠ ಸ್ಪರ್ಧೆಯಲ್ಲಿ ತುಮಕೂರು ಸಿದ್ಧಗಂಗಾಮಠದ ಉದ್ಧಾನೇಶ್ವರ ವೇದ, ಸಂಸ್ಕೃತ ಪಾಠಶಾಲೆಯ ಮುಂಜುನಾಥ್ ಪ್ರಥಮ, ಮೈಸೂರಿನ ವಿಶ್ವಮಾನವ ವೇದ ಸಂಸ್ಕೃತ ಪಾಠಶಾಲೆಯ ವೈಷ್ಣವಿ ದ್ವಿತೀಯ, ತುಮಕೂರು ಬಸವೇಶ್ವರ ಸಂಸ್ಕೃತ ಪಾಠ ಶಾಲೆಯ ಪುನೀತ್ ತೃ, ಮಾನ್ವಿತ ಸಮಾಧಾನಕರ ಬಹುಮಾನ ಪಡೆದರು.
ಈ ಸುದ್ದಿಯನ್ನೂ ಓದಿ | KUWJ awards: ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಪ್ರಕಟ; ಯಾರಿಗೆ ಯಾವ ಪ್ರಶಸ್ತಿ?
ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಧಾರ್ಮಿಕದತ್ತಿ ಇಲಾಖೆಯ ಆಯುಕ್ತ ಡಾ.ಎಂ.ವಿ. ವೆಂಕಟೇಶ್ ಅವರು ಪ್ರಶಸ್ತಿ ಪತ್ರ, ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಂಶೋಧನಾ ಸಂಸತ್ ಕುಲಸಚಿವ ಎಸ್. ಕುಮಾರ್, ಸಂಸ್ಕೃತ ವಿವಿ ಕುಲಸಚಿವ ವಿಶ್ವನಾಥ ಹಿರೇಮಠ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶ್ರೀನಿವಾಸ, ತಹಸೀಲ್ದಾರ್ ತಮ್ಮೇಗೌಡ, ಜಯತೀರ್ಥ ಹಾಗೂ ಇತರರು ಉಪಸ್ಥಿತರಿದ್ದರು.