ಕಲಬುರಗಿ: ತಂಗಿಯ ಆಸೆಯಂತೆ 41 ಕಿ.ಮೀ. ನಡೆದುಕೊಂಡು ಹೋಗಿ ಸಹೋದರನೊಬ್ಬ ರಾಖಿ ಕಟ್ಟಿಸಿಕೊಂಡ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ. ತಂಗಿಯ ಮದುವೆ ಬಳಿಕ ಬಂದ ಮೊದಲ ರಕ್ಷಾ ಬಂಧನ ಹಿನ್ನೆಲೆ, ಸಹೋದರ ಭಾಗೇಶ್ ಬಡದಾಳದಿಂದ ವಿಜಯಪುರದ ಆಲಮೇಲದಲ್ಲಿರುವ ತಂಗಿಯ ಮನೆವರೆಗೆ ಪಾದಯಾತ್ರೆ ಮಾಡಿ ರಕ್ಷಾ ಬಂಧನ ಆಚರಣೆ ಮಾಡಿದ್ದಾನೆ.
ನಡೆದುಕೊಂಡು ಬಂದು ರಾಖಿ ಕಟ್ಟಿಸಿಕೊಳ್ಳಬೇಕು ಎಂದು ಭಾಗೀಶ್ ತಂಗಿ ಆಸೆ ಪಟ್ಟಿದ್ದರಿಂದ ಬೆಳಗ್ಗೆ 7 ಗಂಟೆಗೆ ಬಡದಾಳ ಗ್ರಾಮದಿಂದ ಬಿಟ್ಟು ಮಧ್ಯಾಹ್ನ 2 ಗಂಟೆಗೆ ಆಲಮೇಲ ತಲುಪಿದ ಬಳಿಕ ಭಾಗೇಶ್ ರಾಖಿ ಕಟ್ಟಿಸಿಕೊಂಡಿದ್ದಾನೆ.