ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala News: ಕಾಂಗ್ರೆಸ್ ಸರ್ಕಾರ ಎಡಪಂಥೀಯರ ಜತೆ ಸೇರಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

chalavadi narayanaswamy: ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರಲ್ಲಿ ಆಘಾತವಿದ್ದು, ಅದನ್ನು ಹೋಗಲಾಡಿಸಬೇಕು; ಅವರಿಗೆ ಧೈರ್ಯವನ್ನು ತುಂಬಬೇಕು ಮತ್ತು ಈ ಕ್ಷೇತ್ರಕ್ಕೆ ಯಾವುದೇ ರೀತಿಯ ಕಳಂಕ ಹಚ್ಚುವವರನ್ನು ನಾವು ಸಹಿಸಬಾರದು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ಹಚ್ಚುವ ಕಾರ್ಯವನ್ನು ಎಡಪಂಥೀಯರು ಮಾಡುತ್ತಿದ್ದು, ಅವರ ಜತೆ ಕಾಂಗ್ರೆಸ್ ಸರ್ಕಾರವು ಸೇರಿದೆ ಎಂಬುದು ಭಕ್ತರ ಅನಿಸಿಕೆ. ಇದನ್ನು ಸರ್ಕಾರ ತಿಳಿಗೊಳಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ (chalavadi narayanaswamy) ಅವರು ಆಗ್ರಹಿಸಿದರು. ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಏನೂ ಸಿಕ್ಕಿಲ್ಲ ಆಪಾದನೆ ಎಲ್ಲ ಸುಳ್ಳು. ಇದು ಒಂದು ಷಡ್ಯಂತ್ರ ಎಂದು ಟೀಕಿಸಿದರು. ಗೌರವಾನ್ವಿತ ಡಾ. ವೀರೇಂದ್ರ ಹೆಗ್ಗಡೆ ಜೀ ಅವರನ್ನು ನಾವು ಇಂದು ಭೇಟಿ ಮಾಡಿದ್ದೇವೆ. ಅವರು ಬಹಳ ನೊಂದಿದ್ದಾರೆ ಎಂಬುದು ನಮಗೆ ಮನವರಿಕೆಯಾಗಿದೆ. ಶ್ರೀ ಕ್ಷೇತ್ರದ (Dharmasthala News) ಭಕ್ತರಲ್ಲೂ ಇದೇ ರೀತಿಯ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರಲ್ಲಿ ಆಘಾತವಿದ್ದು, ಅದನ್ನು ಹೋಗಲಾಡಿಸಬೇಕು; ಅವರಿಗೆ ಧೈರ್ಯವನ್ನು ತುಂಬಬೇಕು ಮತ್ತು ಈ ಕ್ಷೇತ್ರಕ್ಕೆ ಯಾವುದೇ ರೀತಿಯ ಕಳಂಕ ಹಚ್ಚುವವರನ್ನು ನಾವು ಸಹಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯನವರ ಹಿಂದೆ ಟಿಪ್ಪು ಗ್ಯಾಂಗ್‌ ಇದೆ: ಆರ್‌. ಅಶೋಕ್‌

ಈ ವೇಳೆ ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಹಿಂದೂಗಳನ್ನು ಅವಹೇಳನ ಮಾಡುವ ಷಡ್ಯಂತ್ರಗಳು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಜಾಸ್ತಿಯಾಗಿದೆ. ಧರ್ಮಸ್ಥಳ ವಿಚಾರವಾಗಿ ಸಿದ್ದರಾಮಯ್ಯನವರ ಹಿಂದೆ ಟಿಪ್ಪು ಗ್ಯಾಂಗ್‌ ಇದೆ. ಒಬ್ಬ ಅನಾಮಿಕ ನೀಡಿದ ದೂರನ್ನು ದೊಡ್ಡದಾಗಿ ಬಿಂಬಿಸಿದ್ದಾರೆ. ನಗರ ನಕ್ಸಲರು, ಅನಾಮಿಕ ಮುಸುಕುಧಾರನಿಂದ ಸರ್ಕಾರವೇ ಈಗ ಮುಸುಕು ಹಾಕಿಸಿಕೊಂಡಿದೆ ಎಂದು ಕಿಡಿಕಾರಿದರು.

ಪ್ರತಿ ದಿನ ಸಾವಿರಾರು ದೂರುಗಳು ಬರುತ್ತವೆ. ಈ ಎಲ್ಲಕ್ಕೂ ಸರ್ಕಾರ ಎಸ್‌ಐಟಿ ರಚಿಸುತ್ತದೆಯೇ ? ಹಿಂದೂ ದೇವಸ್ಥಾನದ ವಿಷಯದಲ್ಲಿ ಈ ರೀತಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್‌ ಮಸೀದಿ ವಿಷಯದಲ್ಲಿ ಇದೇ ರೀತಿ ನಡೆದುಕೊಳ್ಳುತ್ತದೆಯೇ? ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | DK Shivakumar: ಧರ್ಮಸ್ಥಳಕ್ಕೆ ಡಿಕೆಶಿ ಬೆಂಬಲ; ವೀರೇಂದ್ರ ಹೆಗ್ಗಡೆ, ದೇವಸ್ಥಾನ, ಧಾರ್ಮಿಕ ಸೇವೆ ಬಗ್ಗೆ ಬಿಜೆಪಿಗಿಂತ ಹೆಚ್ಚು ಕಾಳಜಿ, ನಂಬಿಕೆ ನಮಗಿದೆ ಎಂದ ಡಿಸಿಎಂ

ಷಡ್ಯಂತ್ರ ಬಹಿರಂಗಪಡಿಸಬೇಕು‌ ಎಂದ ಸಿ.ಟಿ.ರವಿ

ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಮಾತನಾಡಿ, ತನಿಖೆಗೂ ಮೊದಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಕುರಿತು ಅಪಪ್ರಚಾರ ನಡೆಸಿದವರ ಹಿನ್ನೆಲೆಯ ಬಗ್ಗೆಯೂ ತನಿಖೆಯಾಗಬೇಕು. ಈಗಾಗಲೇ ಉಪಮುಖ್ಯಮಂತ್ರಿಗಳು ತನಿಖೆಯ ಹಿಂದೆ ಷಡ್ಯಂತ್ರವಿದೆ ಎಂದಿದ್ದಾರೆ. ಆ ಷಡ್ಯಂತ್ರ ಏನು ಎಂಬುದನ್ನ ಸಹ ಬಹಿರಂಗಪಡಿಸಬೇಕು‌. ಅಪಪ್ರಚಾರದ ಮೂಲಕ ಕೋಟ್ಯಂತರ ಭಕ್ತರ ನಂಬಿಕೆಗೆ ಘಾಸಿಯಾಗುವ ರೀತಿ ವರ್ತನೆ ಮಾಡಿದವರ ಮೇಲೆ ಕ್ರಮ ಯಾಕಿಲ್ಲ? ಎಂದು ಅಸಮಾಧಾನ ಹೊರಹಾಕಿದರು.