ಬೆಂಗಳೂರು: ಸೌಜನ್ಯ ಹೋರಾಟ ಹಾದಿ ತಪ್ಪಿದ್ದೇ ಮಹೇಶ್ ಶೆಟ್ಟಿ ತಿಮರೋಡಿಯಿಂದ. ತಿಮರೋಡಿ ಒಬ್ಬ ವಿಕೃತ, ವಿಲಕ್ಷಣ ಪ್ರಾಣಿ. ಆತ ಯಾವತ್ತೋ ಅರೆಸ್ಟ್ ಆಗಬೇಕಿತ್ತು ಎಂದು ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್ ಕಿಡಿಕಾರಿದ್ದಾರೆ. ನಗರದ ಟೌನ್ ಹಾಲ್‌ನಲ್ಲಿ ಆಯೋಜಿಸಿದ್ದ 'ಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ಮುಂಬೈಯಿಂದ ಗಡಿಪಾರಾಗಿದ್ದ ಮಹೇಶ್ ತಿಮರೋಡಿ ಊರಿಗೆ ಬಂದು ನೆಲೆಸಿದ್ದ. ಸಂಬಂಧಿಕರ ಹುಡುಗಿಗೆ ಬ್ಯಾರಿ ಹುಡಗ ಕಿರುಕುಳ ನೀಡಿದ ಎಂದು ಮಹೇಶ್ ಶೆಟ್ಟಿ ಗ್ಯಾಂಗ್ ಹಲ್ಲೆ ನಡೆಸಿತ್ತು. ಈ ಪ್ರಕರಣದಲ್ಲಿ ಬಿಜೆಪಿ ನಾಯಕರು ಅವರನ್ನು ಬಿಡಿಸಿಕೊಂಡು ಬಂದಿದ್ದರು. ನಂತರ ಆತ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಆಗಿದ್ದ. ಬಳಿಕ ಧರ್ಮಸ್ಥಳದ ವಿರುದ್ಧ ಮೊದಲ ದ್ವೇಷ ಶುರುವಾಯಿತು.
ನಂತರ ಮಹೇಶ್ ಶೆಟ್ಟಿ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷನಾಗಿದ್ದ. ಧರ್ಮಸ್ಥಳದಲ್ಲಿ ಆಟೋ ಚಾಲಕರು ಬೇಕಾಬಿಟ್ಟಿ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಬಂದಾಗ ಧರ್ಮಸ್ಥಳದವರು ದರಪಟ್ಟಿ ನಿಗದಿ ಮಾಡಿದ್ದರು. ಆಗ ಉಜಿರೆ ಮತ್ತು ಧರ್ಮಸ್ಥಳದವರ ನಡುವೆ ದ್ವೇಷ ಸೃಷ್ಟಿಯಾಯಿತು. ಈ ವೇಳೆ ಧರ್ಮಸ್ಥಳದವರದು ಏನು ದಬ್ಬಾಳಿಕೆ ಎಂದು ಪ್ರಶ್ನಿಸಿ, ಆಟೋ ಚಾಲಕರನ್ನು ಕ್ಯೂ ನಿಲ್ಲಿಸಲು ಮಹೇಶ್ ಶೆಟ್ಟಿ ಬಂದಾಗ ಮಹೇಶ್ ತಿಮರೋಡಿ ಅವರನ್ನು ಹೊಡೆದು ಕಳುಹಿಸಿದಾಗ, ಧರ್ಮಸ್ಥಳದವರೇ ನನ್ನನ್ನು ಓಡಿಸಿದರು ಎಂದು ದ್ವೇಷ ಶುರುವಾಗುತ್ತದೆ.
ಅದಾದ ಬಳಿಕ ಮೆಡಿಕಲ್ ಕಾಲೇಜು ಮಾಡಲು ಧರ್ಮಸ್ಥಳದವರು ಸ್ಥಳ ಖರೀದಿಸಿದ್ದರು. ಈ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ತಿಳಿದು, ಅಲ್ಲೇ ಜಾಗ ಖರೀದಿಸಿದ್ದ. ಅದಕ್ಕಿಂತ ಮುಂದಿದ್ದ ರಘುರಾಮ ಶೆಟ್ಟರ ಜಾಗವನ್ನು ಧರ್ಮಸ್ಥಳದವರು ಖರೀದಿಸಿದ್ದರು. ಆಗ ಮಹೇಶ್ ಶೆಟ್ಟಿ ಜಾಗಕ್ಕೆ ಹೋಗಲು ದಾರಿ ಇರಲಿಲ್ಲ. ಇದರಿಂದ ದ್ವೇಷ ಮತ್ತಷ್ಟು ಹೆಚ್ಚಾಯಿತು.
ಇನ್ನು ಉಜಿರೆ ಧಣಿಗಳಾದ ವಿಜಯ್ ರಾಘವ ಪಡುವೆಟ್ನಾಯ ಅವರ ಬಳಿ ಎರಡು ಎಕರೆ ಜಾಗ ನೀಡಬೇಕು ಎಂದು ಮಹೇಶ್ ಶೆಟ್ಟಿ ಬೇಡಿಕೆ ಇಟ್ಟಿದ್ದ. ಆದರೆ, ಅವರು ನಿರಾಕರಿಸಿದ್ದಕ್ಕೆ ತನ್ನ ಜನರನ್ನು ಕರೆದುಕೊಂಡು ಹೋಗಿ, ಅವರ ಜಾಗಕ್ಕೆ ಬೇಲಿ ಹಾಕಿ, ಅತಿಕ್ರಮಣ ಮಾಡಿದ್ದ. ಹೀಗಾಗಿ ಈ ರೌಡಿ ವಿರುದ್ಧ ಹೋರಾಟ ಮಾಡಲು ಆಗಲ್ಲ ಎಂದು ಪಡುವೆಟ್ನಾಯರು ಸುಮ್ಮನಾಗಿದ್ದರು. ಬಳಿಕ ಧರ್ಮಸ್ಥಳ ಹಾಗೂ ಉಜಿರೆ ಗ್ರಾಮದವರು, ಒತ್ತುವರಿ ತೆರವು ಮಾಡಿಸಿದರು. ಆದರೆ, ಇದನ್ನೂ ಹೆಗ್ಗಡೆಯವರೇ ಮಾಡಿಸಿದರು ಎಂದು ಮಹೇಶ್ ಶೆಟ್ಟಿ ಭಾವಿಷಿದ್ದ ಮತ್ತೊಂದು ಸಿಟ್ಟಿಗೆ ಕಾರಣವಾಯಿತು.
2012ರವರೆಗೆ ತಿಮರೋಡಿ, ಧರ್ಮಸ್ಥಳದಲ್ಲಿದ್ದ ನೌಕರರಿಂದ ಚಂದಾ ವಸೂಲಿ ಮಾಡುತ್ತಿದ್ದ. ಬಳಿಕ 2013ರಲ್ಲಿ ಸೌಜನ್ಯಾ ಪ್ರಕರಣದ ಹೋರಾಟಕ್ಕೆ ಎಂಟ್ರಿಯಾದ. ಆ ಸಂದರ್ಭದಲ್ಲಿ ಒಂದು ಗಲಾಟೆ ಆಗುತ್ತದೆ. ಸಾರ್ವಜನಿಕ ಆಸ್ತಿ ಹಾನಿ ಪ್ರಕರಣದಲ್ಲಿ ಇದಕ್ಕೆಲ್ಲ ಮಹೇಶ್ ಶೆಟ್ಟಿ ಬೆಂಬಲಿಗರು ಕಾರಣ ಎಂದು ತಿಳಿದಾಗ ಆತನ ಮೇಲೆ ಕೇಸ್ ದಾಖಲಾಗುತ್ತದೆ. ಹಿಂದೆ ಗಲಭೆ ಕೇಸ್‌ನಲ್ಲಿ ಊರು ಬಿಟ್ಟು ಹೋಗಿದ್ದ. ಇದಾದ ನಂತರ ಸೋಮನಾಥ ನಾಯಕ್ ಜತೆ ಮಹೇಶ್ ಶೆಟ್ಟಿ ಸೇರಿ ಸೌಜನ್ಯಾ ಪ್ರಕರಣವನ್ನು ಧರ್ಮಸ್ಥಳ ಧರ್ಮಾಧಿಕಾರಿಗಳ ತಲೆಗೆ ಕಟ್ಟಬೇಕು ಎಂದು ಕುತಂತ್ರ ಮಾಡಿದರು.
ಹೆಗ್ಗಡೆಯವರ ಮನವಿ ಮೇರೆಗೆ ಸೌಜನ್ಯಾ ಪ್ರಕರಣದ ಬಗ್ಗೆ ಸಿಒಡಿ ಹಾಗೂ ಸಿಬಿಐ ತನಿಖೆ ಆರಂಭವಾಯಿತು.ಇದರ ನಡುವೆ ಸೌಜನ್ಯಾ ತಾಯಿ ಜತೆ ಮಹೇಶ್ ಶೆಟ್ಟಿ ಮಾಧ್ಯಮದ ಮುಂದೆ ಬಂದು, ಈ ಕೇಸ್‌ನಲ್ಲಿ ನಿಶ್ಚಲ್ ಜೈನ್ (ಹರ್ಷೇಂದ್ರ ಕುಮಾರ್ ಅವರ ಮಗ), ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ್ ಜೈನ್ ಇದ್ದಾರೆ ಎಂದು ಆರೋಪ ಮಾಡುತ್ತಾರೆ ಎಂದು ವಸಂತ್ ಗಿಳಿಯಾರ್ ಹೇಳಿದರು.
ತಿಮರೋಡಿಗೆ ಸೋಮನಾಥ್ ಶೆಟ್ಟಿ ಬೆಂಬಲ
ಬಾಹುಬಲಿ ಮಹಾಮಸ್ತಕಾಭಿಷೇಕ ಸಮಯದಲ್ಲಿ ಹೆಗ್ಗಡೆಯವರು 1982ರಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಆರಂಭ ಮಾಡುತ್ತಾರೆ. ಅವರ ಜತೆಗೆ ಸೋಮನಾಥ್ ನಾಯಕ್ ಸೇರಿಕೊಳ್ಳುತ್ತಾರೆ. ಅಲ್ಲಿನ ಹಾಡಿಗಳನ್ನು ಆಮಿಷಕ್ಕೆ ಬಲಿಯಾಗಿ ಶಿಲುಬೆಗಳನ್ನು ನೆಡಲಾಗಿತ್ತು. ಅಂತಹ ಸಮಯದಲ್ಲಿ ಆ ಜನಕ್ಕೆ ನೆರವಾಗಿ ಮತ್ತೆ ಮನೆಗಳಲ್ಲಿ ಮಂಜುನಾಥ ಸ್ವಾಮಿ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಸೋಮನಾಥ್ ನಾಯಕರು ಎನ್‌ಜಿಒ ಆರಂಭ ಮಾಡಿ, ವಿದೇಶಗಳಿಂದ ದೇಣಿಗೆ ಪಡೆಯುತ್ತಿರುತ್ತಾರೆ. ಹೀಗಾಗಿ ಅವರನ್ನು ಹೆಗ್ಗಡೆಯವರು ಹೊರಗೆ ಹಾಕಿದರು. ಹೀಗಾಗಿ ಅವರಿಗೆ ಹೆಗ್ಗಡೆ ಅವರ ಮೇಲೆ ದ್ವೇಷ ಹುಟ್ಟುತ್ತದೆ. ಅಪಪ್ರಚಾರ ಮಾಡಿದ್ದರಿಂದ ಮಾನನಷ್ಟ ಮೊಕದ್ದಮೆಯಲ್ಲಿ ಸೋಮನಾಥ ನಾಯಕ್‌ಗೆ ಶಿಕ್ಷೆ ಆಗುತ್ತದೆ ಎಂದು ವಸಂತ್ ಗಿಳಿಯಾರ್ ಹೇಳಿದರು.