ಬೆಂಗಳೂರು: ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಅವರ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಕಾಲ ಕೂಡಿಬರಬೇಕು, ಒಳ್ಳೆ ಹುಡುಗ ಸಿಕ್ಕಿದ ತಕ್ಷಣ ಮದುವೆಯಾಗ್ತೀನಿ. ಆದಷ್ಟು ಬೇಗ ಮದುವೆ ಸುದ್ದಿ ಹೇಳೋದಾಗಿ ನಟಿ ತಿಳಿಸಿದ್ದರು. ಇದೀಗ ಸಾಮಾಜಿಕ ಜಾಲತಾಣ ಇನ್ಸ್‌ಸ್ಟಾಗ್ರಾಂನಲ್ಲಿ ರಚಿತಾ ರಾಮ್ (Rachitha Ram) ಹಂಚಿಕೊಂಡಿರುವ ಪೋಸ್ಟ್‌ನಿಂದ ಅವರ ಮದುವೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.
ರಚಿತಾ ರಾಮ್ ಮೂಗುತಿ ಹಾಕಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆ ಸಮಯದಲ್ಲಿ ಹೆಣ್ಣು ಮಕ್ಕಳು ಮೂಗು ಚುಚ್ಚಿಸಿಕೊಳ್ಳುವುದು ವಾಡಿಕೆ. ನಟಿ ರಚಿತಾ ರಾಮ್ ತಮ್ಮ ಮೂಗು ಚುಚ್ಚಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಮೂಗುತಿ ಸೆಲ್ಫಿ ತೆಗೆದಿರುವ ರಚಿತಾ ರಾಮ್, ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ನಾನು ಬಹಳ ದಿನಗಳಿಂದ ಮೂಗು ಚುಚ್ಚಿಸಿಕೊಳ್ಳಲು ಬಯಸಿದ್ದೆ. ಈ ವಿಶೇಷ ದಿನದಂದು ನಾನು ಮೂಗು ಚುಚ್ಚಿಸಿಕೊಂಡಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ ಅಂತ ಬರೆದುಕೊಂಡಿದ್ದಾರೆ.
ರಚಿತಾ ರಾಮ್ ಮೂಗುತಿ ಫೋಟೋ ಶೇರ್ ಮಾಡಿದ್ದೇ ತಡ ಅವರ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ. ಮೂಗು ಚುಚ್ಚಿಸಿಕೊಂಡ ಹಿನ್ನೆಲೆ ರಚಿತಾ ಮದುವೆ ಆಗ್ತಿದ್ದಾರಾ ಎಂಬ ಚರ್ಚೆ ಜೋರಾಗಿದೆ.
ಈ ಸುದ್ದಿಯನ್ನೂ ಓದಿ | Fraud Rushi Movie: ʼಫ್ರಾಡ್ ಋಷಿʼ ಚಿತ್ರದ ಎರಡನೇ ಹಾಡು ರಿಲೀಸ್!