ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Ikkis OTT Release: ಧರ್ಮೇಂದ್ರ ಕೊನೆ ಸಿನಿಮಾ 'ಇಕ್ಕಿಸ್'​ ಒಟಿಟಿಗೆ ಎಂಟ್ರಿ!

ಧರ್ಮೇಂದ್ರ ಕೊನೆ ಸಿನಿಮಾ 'ಇಕ್ಕಿಸ್'​ ಒಟಿಟಿಗೆ ಎಂಟ್ರಿ!

Agastya Nanda: ಇತ್ತೀಚೆಗೆ ನಿಧನರಾದ ಹಿರಿಯ ನಟ ಧರ್ಮೇಂದ್ರ ಪ್ರಮುಖ ಪಾತ್ರದಲ್ಲಿರುವ ಕೊನೆ ಸಿನಿಮಾ, ಹಿರಿಯ ತಾರಾ ದಂಪತಿ ಅಮಿತಾಭ್​ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರ ಚೊಚ್ಚಲ ಚಿತ್ರ 'ಇಕ್ಕಿಸ್' ಹೊಸ ವರ್ಷದಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ಚಲನಚಿತ್ರ ನಿರ್ಮಾಪಕ ಶ್ರೀರಾಮ್ ರಾಘವನ್ ನಿರ್ದೇಶಿಸಿದ ಈ ಚಿತ್ರವು ದೇಶದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮ ವೀರ ಚಕ್ರವನ್ನು ಪಡೆದ ಭಾರತದ ಅತ್ಯಂತ ಕಿರಿಯ ವಯಸ್ಸಿನ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರ ಸ್ಪೂರ್ತಿದಾಯಕ ಕಥೆಯನ್ನು ಒಳಗೊಂಡಿದೆ.

ಉಪೇಂದ್ರ ಮಗನ ಆಯುಷ್ ಮೊದಲ ಚಿತ್ರಕ್ಕೆ ಕಾಶ್ಮೀರದಲ್ಲಿ ಮುಹೂರ್ತ;‌ 25 ದಿನಗಳ ಶೂಟಿಂಗ್ ಮುಕ್ತಾಯ

ಕಾಶ್ಮೀರದಲ್ಲಿ ಆಯುಷ್ ಉಪೇಂದ್ರ ಚೊಚ್ಚಲ ಚಿತ್ರದ ಮುಹೂರ್ತ

Ayush Upendra Debut Movie: ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ಉಪೇಂದ್ರ ಪುತ್ರ ಆಯುಷ್‌ ಅವರ ಮೊದಲ ಸಿನಿಮಾದ ಮುಹೂರ್ತ ನಡೆದು, ಶೂಟಿಂಗ್‌ ಕೂಡ ಪ್ರಾರಂಭವಾಗಿದೆ. ಆಯುಷ್ ನಾಯಕನಾಗಿ ನಟಿಸುತ್ತಿರುವ ಈ ಮೊದಲ ಚಿತ್ರಕ್ಕೆ 'ಮೊದಲ ಸಲ' ಖ್ಯಾತಿಯ ಪುರುಷೋತ್ತಮ್ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಕಾಶ್ಮೀರದಲ್ಲಿ 25 ದಿನಗಳ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ.

Muddu Sose: ದಾಂಪತ್ಯ ಜೀವನಕ್ಕೆ ಕಾಲಿಟ್ಟ  ‘ಮುದ್ದು ಸೊಸೆ’ ಧಾರಾವಾಹಿಯ ಕ್ವಾಟ್ಲೆ ನಿಶಿತ್ ರಾಜ್ ಶೆಟ್ಟಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಕ್ವಾಟ್ಲೆʼ ನಿಶಿತ್ ರಾಜ್ ಶೆಟ್ಟಿ

nishith Raj Shetty: 'ಮುದ್ದು ಸೊಸೆ' ‍ ಧಾರಾವಾಹಿಯಲ್ಲಿ ಕ್ವಾಟ್ಲೆ ಎಂಬ ಪಾತ್ರ ಮಾಡುತ್ತಿರುವ ನಟ ನಿಶಿತ್‌ ರಾಜ್‌ ಶೆಟ್ಟಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತ್ರಿವಿಕ್ರಮ್‌ ಈ ಧಾರಾವಾಹಿಯ ನಾಯಕ. ನಾಯಕಿ ಪಾತ್ರದಲ್ಲಿ ಪ್ರತಿಮಾ ಠಾಕೂರ್ ನಟಿಸುತ್ತಿದ್ದಾರೆ. ಇವರಿಬ್ಬರಿಗೂ ಆತ್ಮೀಯವಾದ ಪಾತ್ರ ‘ಕ್ವಾಟ್ಲೆ’ ಈ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ನಿಶಿತ್‌ ರಾಜ್‌ ಶೆಟ್ಟಿ . ಧಾರಾವಾಹಿಯಲ್ಲಿ ಭದ್ರೇ ಗೌಡ್ರ ಸ್ನೇಹಿತ ಕ್ವಾಟ್ಲೆ ಪಾತ್ರದಲ್ಲಿ ನಟಿಸುತ್ತಿರುವ ನಿಶಿತ್ ರಾಜ್ ಶೆಟ್ಟಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Vijay Devarakonda:  ಮಾಜಿ ಗೆಳತಿ ಜೊತೆಗಿನ ವಿಜಯ್‌ ದೇವರಕೊಂಡ ಫೋಟೋ ವೈರಲ್‌!

ಮಾಜಿ ಗೆಳತಿ ಜೊತೆಗಿನ ವಿಜಯ್‌ ದೇವರಕೊಂಡ ಫೋಟೋ ವೈರಲ್‌!

Vijay Devarakonda Rashmika; ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹದ ವದಂತಿಗಳು ಹರಡುತ್ತಿದ್ದಂತೆ, ಮಾಜಿ ಗೆಳತಿ ಜೊತೆಗಿನ ದೇವರಕೊಂಡ ಫೋಟೊಸ್ ವೈರಲ್ ಆಗ್ತಿದೆ. ವಿಜಯ್ ಅವರ ಮಾಜಿ ಗೆಳತಿ ಎಂದು ಹೇಳಲಾಗುವ ಮಹಿಳೆಯೊಂದಿಗೆ ಇರುವ ಫೋಟೋಗಳು ಭರ್ಜರಿ ವೈರಲ್‌ ಆಗಿವೆ . ಬೆಲ್ಜಿಯಂ ಮೂಲದ ವರ್ಜೀನಿಯ ತನ್ನ ತಾಯಿ ಜೊತೆಗೆ ವಿಜಯ್ ಮನೆಗೆ ಭೇಟಿ ನೀಡಿದ್ದರು. ಆಕೆಯ 25ನೇ ವರ್ಷದ ಹುಟ್ಟುಹಬ್ಬವನ್ನು ಎಲ್ಲರೂ ಒಟ್ಟಾಗಿ ಆಚರಿಸಿದ್ದರು ಎನ್ನಲಾಗಿತ್ತು.

ಉತ್ತರ ಕರ್ನಾಟಕ ಸೊಗಡಿನ ʻರಾಕ್ಷಸʼ ವೆಬ್‌ ಸರಣಿಯ ಟ್ರೇಲರ್‌ ರಿಲೀಸ್;‌ ಸವದತ್ತಿಯ ಕಥೆ ಹೇಳೋಕೆ ಬಂದ್ರು ವಿಜಯ್‌ ರಾಘವೇಂದ್ರ

ವಿಜಯ್ ರಾಘವೇಂದ್ರ ನಟನೆಯ ʻರಾಕ್ಷಸʼ ವೆಬ್‌ ಸರಣಿಯ ಟ್ರೇಲರ್ ರಿಲೀಸ್‌!

ʻರಾಕ್ಷಸʼ ಎಂಬ ವೆಬ್‌ ಸರಣಿಯ ಮೂಲಕ ನಟ ವಿಜಯ್ ರಾಘವೇಂದ್ರ ಮೊದಲ ಬಾರಿಗೆ ಓಟಿಟಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಸವದತ್ತಿ ಎಲ್ಲಮ್ಮನ ಗುಡಿಯ ಮಲಪ್ರಭಾ ನದಿ ದಂಡೆಯ ಸುತ್ತ ನಡೆಯುವ ನಿಗೂಢ ಮೊಸಳೆ ದಾಳಿಗಳ ತನಿಖೆಯ ಕಥೆಯೇ ಈ 'ರಾಕ್ಷಸ' ವೆಬ್‌ ಸರಣಿ. ತರುಣ್ ಸುಧೀರ್ ನಿರ್ಮಾಣದದಲ್ಲಿ ಈ ಕ್ರೈಮ್ ಥ್ರಿಲ್ಲರ್ ಸರಣಿ ನಿರ್ಮಾಣಗೊಂಡಿದೆ.

Amruthadhaare Serial : ಭೂಮಿ ಕೈಗೆ ಸಿಕ್ಕಿಬೀಳ್ತಾರಾ ಮಲ್ಲಿ-ಸುನಿ?

Amruthadhaare Serial : ಭೂಮಿ ಕೈಗೆ ಸಿಕ್ಕಿಬೀಳ್ತಾರಾ ಮಲ್ಲಿ-ಸುನಿ?

Zee Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಮಗ ಕ್ಯಾಬ್ ಓಡಿಸೋದನ್ನು ನೋಡಿ ಗೌತಮ್‌ ತಾಯಿ ಬೇಸರ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಭೂಮಿಕಾ ಬಳಿ ಹೇಳುವಾಗ ಗೌತಮ್ ಇದನ್ನು ಕದ್ದು ಕೇಳಿಸಿಕೊಂಡಿದ್ದಾನೆ. ಇನ್ನೊಂದು ಕಡೆ ಮಲ್ಲಿ ಕೊನೆಗೂ ಮಿನಿ ರೌಡಿ ಸುನಿಲ್ ಗಾಳಕ್ಕೆ ಸಿಲುಕಿದ್ದಾಳೆ. ಜೈದೇವ (Jaidev) ಅವನನ್ನು ಮೋಸ ಮಾಡಲು ಕಳಿಸಿದ್ದರೂ, ಸುನಿಲ್​ ರಿಯಲ್ಲಾಗಿಯೂ ಮಲ್ಲಿಯನ್ನು ಲವ್​ ಮಾಡ್ತಿದ್ದಾನೆ.

ಕಿಸ್‌ ಬ್ಯೂಟಿಯನ್ನು ಇನ್ಮೇಲೆ ಡಾ. ಶ್ರೀಲೀಲಾ ಅಂತ ಕರೀಬೇಕು! MBBS ಡಿಗ್ರಿ ಪಡೆದ ನಟಿ, ಘಟಿಕೋತ್ಸವದ ವಿಡಿಯೋ ವೈರಲ್!‌

ಕಿಸ್ ಬ್ಯೂಟಿ ಈಗ 'ಡಾಕ್ಟರ್' ಶ್ರೀಲೀಲಾ; ಘಟಿಕೋತ್ಸವದ ವಿಡಿಯೋ ವೈರಲ್!

ಶ್ರೀಲೀಲಾ ಈಗ ಎಂಬಿಬಿಎಸ್‌ ಪದವಿ ಪಡೆದುಕೊಂಡಿರುವ ಸುದ್ದಿ ಸಂಚಲನ ಮೂಡಿಸಿದೆ. 'ಕಿಸ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದ ಶ್ರೀಲೀಲಾ, ತಮ್ಮ ಬಿಡುವಿಲ್ಲದ ಶೂಟಿಂಗ್ ಶೆಡ್ಯೂಲ್ ನಡುವೆಯೂ ವೈದ್ಯಕೀಯ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸುವ ಮೂಲಕ 'ಡಾಕ್ಟರ್ ಶ್ರೀಲೀಲಾ' ಆಗಿ ಹೊರಹೊಮ್ಮಿದ್ದಾರೆ.

ಅಜಿತ್‌ ಕುಮಾರ್‌ ಸಂಭಾವನೆ ಕೇಳಿ ಶಾಕ್‌ ಆದ್ರಾ ನಿರ್ಮಾಪಕರು? ʻಇಷ್ಟೊಂದು ಡಿಮ್ಯಾಂಡ್‌ ಮಾಡಿದ್ರೆ ಸಿನಿಮಾ ಮಾಡೋದ್ಹೇಗೆʼ ಅಂದ್ರು ನೆಟ್ಟಿಗರು!

ಅಬ್ಬಬ್ಬಾ! ನಟ ಅಜಿತ್‌ ಕುಮಾರ್‌ ಸಂಭಾವನೆ ಇಷ್ಟೊಂದಾ?

Ajith Kumar Salary: ನಟ ಅಜಿತ್ ಕುಮಾರ್‌ ಅವರು ತಮ್ಮ ಮುಂದಿನ 64ನೇ ಸಿನಿಮಾಕ್ಕಾಗಿ ಬರೋಬ್ಬರಿ 163 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಈ ದುಬಾರಿ ಮೊತ್ತದ ಕಾರಣದಿಂದಲೇ ಸಿನಿಮಾದಿಂದ ನಿರ್ಮಾಪಕರು ಹಿಂದೆ ಸರಿಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ತಂದೆಯ ಚಿತೆ ಮುಂದೆ ಭೀಷ್ಮ ಪ್ರತಿಜ್ಞೆ ಮಾಡಿದ ಭಾರ್ಗವಿ; ಲಾಯರ್ ವೃತ್ತಿಗೆ ವಿದಾಯ ಹೇಳಿದ್ದೇಕೆ?

ʻಭಾರ್ಗವಿ LLBʼ ಸೀರಿಯಲ್ ಮಹಾ ತಿರುವು: ತಂದೆಯ ಚಿತೆ ಮುಂದೆ ಮಹಾ ಶಪಥ!

Bhargavi LLB: ಕಲರ್ಸ್‌ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ಟ್ವಿಸ್ಟ್‌ ಮೂಲಕ ವೀಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ತನ್ನ ತಂದೆ ರವೀಂದ್ರ ಭಟ್ಕಳರನ್ನು ಮರಳಿ ಕೋರ್ಟ್ ಹಾಲಿಗೆ ಕರೆತಂದು ನ್ಯಾಯದ ಪರ ವಾದಿಸುವಂತೆ ಮಾಡಿದ್ದ ಭಾರ್ಗವಿ, ಆ ಗೆಲುವನ್ನು ಸಂಭ್ರಮಿಸುವ ಮೊದಲೇ ತಂದೆಯನ್ನು ಕಳೆದುಕೊಂಡಿದ್ದಾಳೆ. ತನ್ನ ತಂದೆಯ ಸಾವಿನ ಹಿಂದಿರುವ ರಹಸ್ಯವನ್ನು ಹೇಗೆ ಬೇಧಿಸುತ್ತಾಳೆ ಎಂಬುದು ಈಗಿನ ಕುತೂಹಲ.

ʻಮೆಗಾ ಪವರ್‌ ಸ್ಟಾರ್‌ʼ ರಾಮ್‌ ಚರಣ್‌ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ಡಬಲ್‌ ಧಮಾಕ; ಏನದು?

ರಾಮ್ ಚರಣ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್ ಟ್ರೀಟ್!

Ram Charan Updates: ರಾಮ್ ಚರಣ್ ಅವರು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿನ ತಂದೆಯಾಗಿರುವ ಸಂತಸದಲ್ಲಿದ್ದಾರೆ. ಇದರ ಬೆನ್ನಲ್ಲೇ ಮಾರ್ಚ್ 27ರ ಅವರ ಹುಟ್ಟುಹಬ್ಬ ಮತ್ತು ಶ್ರೀರಾಮ ನವಮಿಯ ವಿಶೇಷ ದಿನದಂದು, ಬುಚ್ಚಿ ಬಾಬು ಸನಾ ನಿರ್ದೇಶನದ 'ಪೆದ್ದಿ' ಚಿತ್ರದ ಟೀಸರ್ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಉತ್ತಮವಾಗಿ ಹಾಡುವ ನಿಮ್ಮ ಮಗು ʻಸರಿಗಮಪʼ ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕಾ? ಇಲ್ಲಿದೆ ಮಾಹಿತಿ

ಸರಿಗಮಪ ಆಡಿಷನ್ ಆರಂಭ: ನಿಮ್ಮ ಮಗುವಿನ ಹಾಡುಗಾರಿಕೆಗೆ ಇಲ್ಲಿದೆ ವೇದಿಕೆ

Sa Re Ga Ma Pa Little Champs Audition: ಜೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್‌ ಚಾಂಪ್ಸ್‌ ಶೋ‌ ಶೀಘ್ರದಲ್ಲೇ ಆರಂಭವಾಗಲಿದ್ದು, 3 ರಿಂದ 15 ವರ್ಷದೊಳಗಿನ ಪ್ರತಿಭಾವಂತ ಮಕ್ಕಳಿಗೆ ಜೀ ಕನ್ನಡ ವೇದಿಕೆ ಕಲ್ಪಿಸಿಕೊಡಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ರಾಜ್‌ಪಾಲ್‌ ಯಾದವ್‌ ಬದುಕಿಗೆ ಮುಳ್ಳಾದ ʻಆ ಒಂದುʼ ಸಿನಿಮಾ! ʻಸ್ನೇಹಿತರಿಲ್ಲ, ದುಡ್ಡೂ ಇಲ್ಲ, ನಾನೇನು ಮಾಡಲಿʼ ಎನ್ನುತ್ತಾ ತಿಹಾರ್‌ ಜೈಲು ಸೇರಿದ ನಟ!

ಜೈಲು ಸೇರಿದ ರಾಜ್‌ಪಾಲ್‌ ಯಾದವ್‌! ಹಾಸ್ಯ ನಟನ ಬದುಕಿಗೆ ಮುಳ್ಳಾದ ಆ ಸಿನಿಮಾ

ಬಾಲಿವುಡ್‌ ನಟ ರಾಜ್‌ಪಾಲ್ ಯಾದವ್‌ ಅವರು ಸಾಲದ ಸುಳಿಗೆ ಸಿಲುಕಿ, ಚೆಕ್ ಬೌನ್ಸ್ ಪ್ರಕರಣದಲ್ಲಿ ತಿಹಾರ್‌ ಜೈಲು ಸೇರಿದ್ದಾರೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಈ ಕಲಾವಿದನಿಗೆ ಇಂಥದ್ದೊಂದು ಕಠಿಣ ಪರಿಸ್ಥಿತಿ ಎದುರಾಗಿದ್ದು ಏಕೆ? ಸಾಲಕ್ಕೆ ಕಾರಣವಾದ ಆ ಸಿನಿಮಾ ಯಾವುದು?

Toxic Movie: ಟಾಕ್ಸಿಕ್‌ ಸಿನಿಮಾಗೆ ಮತ್ತೊಂದು ಸಂಕಷ್ಟ, ಸಿಡಿದೆದ್ದ ಕ್ರೈಸ್ತರ ಒಕ್ಕೂಟ

ಟಾಕ್ಸಿಕ್‌ ಸಿನಿಮಾಗೆ ಮತ್ತೊಂದು ಸಂಕಷ್ಟ, ಸಿಡಿದೆದ್ದ ಕ್ರೈಸ್ತರ ಒಕ್ಕೂಟ

ಟಾಕ್ಸಿಕ್‌ ಸಿನಿಮಾದಲ್ಲಿ ಕ್ರೈಸ್ತರ ದೇವದೂತ ಸಂತ ಮಿಖಯೇಲ್‌ಗೆ ಅಪಮಾನ ಮಾಡಲಾಗಿದೆ. ದೇವದೂತರ ಮುಂದೆ ಅಶ್ಲೀಲ ಚಿತ್ರೀಕರಣ ಮಾಡಿದ್ದಾರೆ. ಹೀಗಾಗಿ ಯೂಟ್ಯೂಬ್ ಪೋಸ್ಟ್‌ಗಳನ್ನ ತೆಗೆಯಬೇಕು. ಸಿನಿಮಾದಲ್ಲಿ ಚಿತ್ರೀಕರಣ ಮಾಡಿರುವ ದೃಶ್ಯಗಳನ್ನ ತೆಗೆಯುವಂತೆ ಸೂಚನೆ ನೀಡಬೇಕು ಎಂದು ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ದೂರಿನಲ್ಲಿ ಮನವಿ ಮಾಡಿದ್ದಾರೆ.

Mayuri Kyatari: ಡಿವೋರ್ಸ್‌ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ನಟಿ ಮಯೂರಿ ಕ್ಯಾತರಿ!

ಡಿವೋರ್ಸ್‌ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ನಟಿ ಮಯೂರಿ ಕ್ಯಾತರಿ!

Mayuri: ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಮಿಂಚಿದವ್ರು ಮಯೂರಿ ಕ್ಯಾತಾರಿ . ಹುಬ್ಬಳ್ಳಿ ಮೂಲದ ಮಯೂರಿ ಸದ್ಯ ಹೆಚ್ಚಾಗಿ ತೆರೆಮೇಲೆ ಕಾಣಿಸಿಕೊಳ್ತಿಲ್ಲ. ಮದುವೆ, ಮಗು ನಂತರ ಬಿಗ್​ ಬಾಸ್​ಗೆ ಬಂದಿದ್ರು. ಅಲ್ಲಿಂದ ಕಿರುತೆರೆ ಪಯಣ ಮತ್ತೆ ಶುರುವಾಯ್ತು. ನನ್ನ ದೇವರು ಸೀರಿಯಲ್​ ಮೂಲಕ ಕಮ್​ಬ್ಯಾಕ್ ಆಗಿದ್ದರೂ ಅಂದುಕೊಂಡಂತೆ ಧಾರಾವಾಹಿ ಯಶಸ್ವಿಯಾಗ್ಲಿಲ್ಲ. ಬಂದಷ್ಟೇ ವೇಗದಲ್ಲಿ ಸೀರಿಯಲ್​ ಮುಕ್ತಾಯವಾಯ್ತು. 2020ರಲ್ಲಿ ಮದುವೆ ಆಗಿರುವ ಮಯೂರಿ ಈಗ ಮುದ್ದು ಮಗ (Son) ಆರವ್ ಜೊತೆಗಿನ ಸಾಕಷ್ಟು ವಿಚಾರಗಳನ್ನ ಹಂಚಿಕೊಳ್ತಿರ್ತಾರೆ.

Dhanush: ʻಇಳಯರಾಜʼ ಜೊತೆಗೆ ಮತ್ತೊಂದು ಜೀವನ ಚರಿತ್ರೆಯ ಸಿನಿಮಾದಲ್ಲಿ ಧನುಷ್!

ʻಇಳಯರಾಜʼ ಜೊತೆಗೆ ಮತ್ತೊಂದು ಜೀವನ ಚರಿತ್ರೆಯ ಸಿನಿಮಾದಲ್ಲಿ ಧನುಷ್!

Dhanush to star in biopics : ತಮಿಳು ನಟ ಧನುಷ್ ಒಂದರ ನಂತರ ಒಂದರಂತೆ ಸಿನಿಮಾಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ವರ್ಷಗಳಲ್ಲಿ ಅವರು ಅನೇಕ ವಿಭಿನ್ನ ಪಾತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿಸಲಿದ್ದಾರೆ. ಈಗ ಅವರು ತಮ್ಮ ವೃತ್ತಿಜೀವನದಲ್ಲಿ ಬಹಳ ಮುಖ್ಯವಾದ ಹಂತವನ್ನು ತಲುಪಲು ಸಿದ್ಧರಾಗಿದ್ದಾರೆ. ಈಗ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದು ಕೂಡ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ.ತಮಿಳಿನ ಇಬ್ಬರು ಗಣ್ಯರ ಜೀವನ ಚರಿತ್ರೆಯನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ.

ED calls Jayaram: ಶಬರಿಮಲೆ ಚಿನ್ನ ಕಳವು ಪ್ರಕರಣ: ನಟ ಜಯರಾಮ್‌ಗೆ ಇ.ಡಿ ನೋಟಿಸ್​

ಶಬರಿಮಲೆ ಚಿನ್ನ ಕಳವು ಪ್ರಕರಣ: ನಟ ಜಯರಾಮ್‌ಗೆ ಇ.ಡಿ ನೋಟಿಸ್​

Kantara Jayaram: ಜಾರಿ ನಿರ್ದೇಶನಾಲಯವು ನಟ ಜಯರಾಮ್ (Jayaram) ಅವರನ್ನು ಮುಂದಿನ ಮಂಗಳವಾರ (ಫೆಬ್ರವರಿ 17) ವಿಚಾರಣೆಗೆ ಬರುವಂತೆ ಕೇಳಿದೆ .ಈ ಪ್ರಕರಣವು ಶಬರಿಮಲೆ ಚಿನ್ನದ ಕಳ್ಳತನಕ್ಕೆ ಸಂಬಂಧಿಸಿದೆ. ಈ ಹಿಂದೆ, ಎಸ್‌ಐಟಿ ಅವರನ್ನು ಸಾಕ್ಷಿಯಾಗಿ ಕರೆದಿತ್ತು. ರಾಜ್ಯದ ಹೆಚ್ಚುವರಿ ಡಿಜಿಪಿ ವೆಂಕಟೇಶ್ ನೇತೃತ್ವದ ವಿಶೇಷ ತನಿಖಾ ತಂಡ ಈ ಬಗ್ಗೆ ತನಿಖೆ ನಡೆಸಿತ್ತು.

Karan Johar: ಕರಣ್ ಜೋಹರ್ ಬಗ್ಗೆ ಕೆಟ್ಟದಾಗಿ ಮಾಡಿದ ವಿಡಿಯೋ; ಖ್ಯಾತ ಯೂಟ್ಯೂಬರ್‌ಗೆ ಸಂಕಷ್ಟ

ಕರಣ್ ಜೋಹರ್ ವಿಡಿಯೋ ವಿವಾದ; ಖ್ಯಾತ ಯೂಟ್ಯೂಬರ್‌ಗೆ ಸಂಕಷ್ಟ

Carry Minati : ಇತ್ತೀಚೆಗೆ ವಿಡಿಯೋ ಒಂದನ್ನು ಮಾಡಿ ಕ್ಯಾರಿ ಮಿನಾಟಿ ಪೋಸ್ಟ್ ಮಾಡಿದ್ದರು. ಕರಣ್ ಜೋಹರ್ ನಡೆಸಿಕೊಡೋ ‘ಕಾಫಿ ವಿತ್ ಕರಣ್’ ಹೋಲುವ ರೀತಿಯ ಶೋನ ಕ್ಯಾರಿಮಿನಾಟಿ ಮಾಡಿದ್ದರು. ಇದರಲ್ಲಿ ಕರಣ್ ಜೋಹರ್ ರೀತಿ ರೆಡಿ ಆಗಿ ಬಂದಿದ್ದ ಕ್ಯಾರಿ, ಅವರನ್ನು ಅನುಕರಿಸಿದ್ದರು. 'ಕಾಫಿ ವಿತ್ ಕರಣ್' ರೀತಿಯ ಶೋನಲ್ಲಿ ಕರಣ್ ಜೋಹರ್ ಅವರನ್ನು ಕೆಟ್ಟದಾಗಿ ಚಿತ್ರಿಸಿದ್ದ ವಿಡಿಯೋ ವಿರುದ್ಧ ಕರಣ್ ಜೋಹರ್ ಮುಂಬೈ ಸಿವಿಲ್ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದೀಗ ಕೋರ್ಟ್, ವಿಡಿಯೋವನ್ನು ತೆಗೆದುಹಾಕಲು ಆದೇಶಿಸಿದೆ.

ಅಲ್ಲು ಅರ್ಜುನ್‌ ಬಗ್ಗೆ ಇಲ್ಲಸಲ್ಲದ ಹೇಳಿಕೆ; ಅಖಾಡಕ್ಕಿಳಿದ ‌ʻಐಕಾನ್‌ ಸ್ಟಾರ್‌ʼ ಟೀಮ್, ಮಾತಾಡಿದವರೀಗ ಕೋರ್ಟ್‌ ಮೆಟ್ಟಿಲು ಹತ್ತೋದು ಗ್ಯಾರಂಟಿ!

ಅಲ್ಲು ಅರ್ಜುನ್ ವರ್ಚಸ್ಸಿಗೆ ಧಕ್ಕೆ ತಂದವರ ವಿರುದ್ಧ ಮಾನನಷ್ಟ ಮೊಕದ್ದಮೆ‌!

Allu Arjun Controversy: ಅಲ್ಲು ಅರ್ಜುನ್‌ ಅವರ ಪ್ರೊಟೊಕಾಲ್‌ ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು 42 ಕಠಿಣ ನಿಯಮಗಳಿವೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಅವರ ತಂಡ ಕಾನೂನು ಸಮರಕ್ಕೆ ಮುಂದಾಗಿದೆ.

Ranveer Singh: ರಣವೀರ್ ಸಿಂಗ್‌ಗೆ  ಬೆದರಿಕೆ ಕರೆ; ವಾಯ್ಸ್‌ ಮೆಸೇಜ್‌ನಲ್ಲಿ ಕೋಟಿ ಕೋಟಿ ಹಣಕ್ಕೆ ಡಿಮ್ಯಾಂಡ್‌

ರಣವೀರ್ ಸಿಂಗ್‌ಗೆ ಬೆದರಿಕೆ ಕರೆ; ಹಣಕ್ಕೆ ಡಿಮ್ಯಾಂಡ್‌

Ranveer Singh : ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಮಂಗಳವಾರ, ಫೆಬ್ರವರಿ 10 ರಂದು ವಾಟ್ಸಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಕಳಿಸಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಕೋಟ್ಯಂತರ ರೂಪಾಯಿಗಳನ್ನು ಬೇಡಿಕೆಯಿಡಲಾಗಿದೆ ಎಂದು ವರದಿಯಾಗಿದೆ. ಈ ಸಂದೇಶವು ಭದ್ರತಾ ಕಳವಳವನ್ನು ಹುಟ್ಟುಹಾಕಿದ್ದು, ಮುಂಬೈ ಪೊಲೀಸರು ನಟನ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಬೆದರಿಕೆ ಕಳುಹಿಸಿದವರು ಮತ್ತು ಅದರ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲು ಅವರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Anirudh Bhat: ನಾನು ಫುಲ್ ಟೈಮ್ ವಿಡಿಯೋ ಎಡಿಟರ್, ಪಾರ್ಟ್ ಟೈಮ್ ಆಕ್ಟರ್! ಅನಿರುದ್ಧ್ ಭಟ್

ಅನಿರುದ್ಧ್ ಭಟ್ ವಿಲನ್ ಆದ ಕಥೆಯಿದು

Anirudh Bhat rakkasapuradhol: ರವಿ ಸಾರಂಗ ನಿರ್ದೇಶನದಲ್ಲಿ ರಾಜ್‌ ಬಿ ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ರಾಜ್‌. ಬಿ ಶೆಟ್ಟಿ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಬಿಟ್ಟರೆ ಬಹುತೇಕ ಹೊಸಬರೇ ಚಿತ್ರದಲ್ಲಿ ನಟಿಸಿದ್ದಾರೆ.'ರಕ್ಕಸಪುರದೋಳ್' ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ಎದುರು ರಕ್ಕಸನಂತೆ ಅಬ್ಬರಿಸಿರುವ ಅನಿರುದ್ಧ್ ಭಟ್ ಎಲ್ಲರ ಗಮನ ಸೆಳೆದಿದ್ದಾರೆ.

ದರ್ಶನ್‌ ಹುಟ್ಟುಹಬ್ಬ; ʻಡಿ ಬಾಸ್‌ʼ ಅನುಪಸ್ಥಿತಿಯಲ್ಲೂ ಅರ್ಥಪೂರ್ಣವಾಗಿ ಸೆಲೆಬ್ರೇಟ್‌ ಮಾಡಲು ʻಸೆಲೆಬ್ರಿಟೀಸ್‌ʼ ರೆಡಿ

ದರ್ಶನ್ ಜನ್ಮದಿನ: ‌ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲು ಡಿ ಫ್ಯಾನ್ಸ್ ಕರೆ

Darshan Birthday Celebration: ನಟ ದರ್ಶನ್ ಜೈಲಿನಲ್ಲಿದ್ದರೂ, ಅವರ ಹುಟ್ಟುಹಬ್ಬವನ್ನು (ಫೆಬ್ರವರಿ 16) ಸಮಾಜಮುಖಿ ಕೆಲಸಗಳ ಮೂಲಕ ಆಚರಿಸಲು 'ಡಿ ಕಂಪನಿ' ಮತ್ತು ಅಭಿಮಾನಿಗಳು ನಿರ್ಧರಿಸಿದ್ದಾರೆ. ಹೂವು, ಕೇಕ್ ಮತ್ತು ಪಟಾಕಿಗಳ ಅಬ್ಬರದ ಬದಲು ಅನಾಥಾಶ್ರಮಗಳಿಗೆ ಅನ್ನದಾನ, ಬಟ್ಟೆ ವಿತರಣೆ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲು ಕರೆ ನೀಡಿದ್ದಾರೆ.

Sushma Raj: ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼ ಖ್ಯಾತಿಯ ಸುಷ್ಮಾ ರಾಜ್​ಗೆ ಗಂಡು ಮಗು: ತಂದೆ ನೆನೆದು ಭಾವುಕ!

ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼ ಖ್ಯಾತಿಯ ಸುಷ್ಮಾ ರಾಜ್​ಗೆ ಗಂಡು ಮಗು

sushma Raj : ಕರಾವಳಿಯ ʻಹೆಣ್ಣು ಹುಲಿʼ ಎಂದೇ ಫೇಮಸ್‌ ಆಗಿರುವ ಸುಷ್ಮಾ ರಾಜ್‌ಗೆ ಗಂಡು ಮಗುವಿನ ಜನನವಾಗಿದೆ.ಫೆಬ್ರವರಿಯಲ್ಲಿ ನಿಧನರಾದ ತಮ್ಮ ತಂದೆ ಅಶೋಕ್ ಅವರೇ ಮಗನಾಗಿ ಮರುಹುಟ್ಟು ಪಡೆದಿದ್ದಾರೆ ಎಂದು, 'ಅಶೋಕ್ ರಾಜ್ ಈಸ್ ಬ್ಯಾಕ್' ಎಂದು ಬರೆದುಕೊಂಡಿದ್ದಾರೆ. ಕನ್ನಡದ ಕೆಲ ಧಾರಾವಾಹಿ , ಸಿನಿಮಾಗಳಲ್ಲಿ ನಟಿಸಿರುವ, ಹುಲಿ ಕುಣಿತದಲ್ಲಿಯೇ ಜನಪ್ರಿಯತೆ ಪಡೆದಿದ್ದರು ನಟಿ ಸುಷ್ಮಾ ರಾಜ್ ಕಾಡಬೆಟ್ಟು.

'ವೀರ ಕಂಬಳ' ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನಟನೆ: ಈ ಸಿನಿಮಾ ಯಾವಾಗ ಬಿಡುಗಡೆ?

'ವೀರ ಕಂಬಳ' ಚಿತ್ರದಲ್ಲಿ ಬಣ್ಣ ಹಚ್ಚಿದ ಡಾ. ವೀರೇಂದ್ರ ಹೆಗ್ಗಡೆ

ಕರಾವಳಿಯ ಜಾನಪದ ಕ್ರೀಡೆ ಕಂಬಳದ ಹಿನ್ನೆಲೆಯಲ್ಲಿ 'ವೀರ ಕಂಬಳ' ಚಿತ್ರ ಮೂಡಿಬರುತ್ತಿದ್ದು, ಫೆಬ್ರವರಿ 27ರಂದು ತೆರೆಗೆ ಬರಲು ಸಿದ್ಧವಾಗಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ನಟಿಸಿರುವುದು ವಿಶೇಷ.

Chaithra Kundapura: ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಮಹಿಳಾ ಸ್ಪರ್ಧಿ ಬಗ್ಗೆ ಚೈತ್ರಾ ಕುಂದಾಪುರ ಹೊಸ ಪೋಸ್ಟ್‌!

ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಚೈತ್ರಾ ಕುಂದಾಪುರ ಹೊಸ ಪೋಸ್ಟ್‌!

Chaithra Kundapura: ಬಿಗ್​​ ಬಾಸ್ ಗುಂಗಿನಿಂದ ಜನ ಹೊರಗೆ ಬಂದಿದ್ರೂ, ಸ್ಪರ್ಧಿಗಳು ಮಾತ್ರ ಇದುವೆರೆಗೆ ಅದೇ ಗುಂಗಿನಲ್ಲಿ ಇರುವಂತಿದೆ. ಬಿಗ್​ ಬಾಸ್​ ಸೀಸನ್​ 12ರ ಶೋನಲ್ಲಿ ವೈಲ್ಡ್​​ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಚೈತ್ರಾ ಕುಂದಾಪುರ ಬಿಗ್​​ ಬಾಸ್​ ಮನೆಗೆ ಬಂದಿದ್ರು. ಆಗ ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್ ಜೋರಾಗಿತ್ತು. ಇದೀಗ ಅಶ್ವಿನಿ ಪೋಸ್ಟ್ ಒಂದನ್ನ​ ಶೇರ್​​ ಮಾಡಿದ್ದು, ಚೈತ್ರಾ ಕುಂದಾಪುರ ಅವರನ್ನು ಕೆರಳುವಂತೆ ಮಾಡಿದೆ. ಆದರೆ ಈ ಶೀತಲಸಮರ ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದಮೇಲೂ ನಿಲ್ಲುವಂತೆ ಕಾಣುತ್ತಿಲ್ಲ.

Loading...