ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Dhanush: ಡಿವೋರ್ಸ್‌ ಬೆನ್ನಲ್ಲೇ ಬಹುಭಾಷಾ ನಟಿ ಜತೆ ಧನುಷ್‌ ಡೇಟಿಂಗ್‌?; ಈ ವಿಡಿಯೊದಲ್ಲಿದೆ ಸಾಕ್ಷಿ

ಕಾಲಿವುಡ್‌ ಸೂಪರ್‌ ಸ್ಟಾರ್‌ ಧನುಷ್‌ ಸದ್ಯ ʼಕುಬೇರʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗೆ ಐಶ್ವರ್ಯಾ ರಜನಿಕಾಂತ್‌ ಜತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದ ಅವರು ಇದೀಗ ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಜತೆ ಡೇಟಿಂಗ್‌ ನಡೆಸಿತ್ತಿದ್ದಾರೆ ಎನ್ನುವ ವದಂತಿ ಹಬ್ಬಿದೆ. ಯಾರು ಆ ನಟಿ?

ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ಧನುಷ್‌ (Dhanush) ಸದ್ಯ ʼಕುಬೇರʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ರಶ್ಮಿಕಾ ಮಂದಣ್ಣ-ನಾಗಾರ್ಜುನ್‌ ಜತೆಗೆ ಅವರು ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಈ ಚಿತ್ರದ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿ ಈ ವರ್ಷದ ಯಶಸ್ವಿ ಸಿನಿಮಾ ಎನಿಸಿಕೊಂಡಿದೆ. ಜತೆಗೆ ಧನುಷ್‌ ನಟನೆಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ. ಭಿಕ್ಷುಕನ ಪಾತ್ರದಲ್ಲಿ ಮೋಡಿ ಮೋಡಿದ್ದು, ಮತ್ತೊಂದು ರಾಷ್ಟ್ರ ಪ್ರಶಸ್ತಿಯ ಸಾಧ್ಯತೆ ಇದೆ ಎಂದು ಫ್ಯಾನ್ಸ್‌ ಭವಿಷ್ಯ ನುಡಿಯುತ್ತಿದ್ದಾರೆ. ಈ ಮಧ್ಯೆ ಧನುಷ್‌ ದಕ್ಷಿಣ ಭಾರತದ ಸ್ಟಾರ್‌ ನಟಿ, ಬಹುಭಾಷಾ ನಟಿ ಜತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ವದಂತಿ ಹಬ್ಬಿದೆ. ಹಾಗಾದರೆ ಯಾರು ಆ ನಟಿ?

ಮೂಲಗಳ ಪ್ರಕಾರ ಸದ್ಯ ವಿವಿಧ ಭಾಷೆಗಳಲ್ಲಿ ಬಹು ಬೇಡಿಕೆ ಹೊಂದಿರುವ ಮೃಣಾಲ್‌ ಠಾಕೂರ್‌ (Mrunal Thakur) ಜತೆ ಧನುಷ್‌ ಡೇಟಿಂಗ್‌ ನಡೆಸುತ್ತಿದ್ದಾರಂತೆ. ಸದ್ಯ ಇಂತಹದ್ದೊಂದು ವದಂತಿ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ.



ಈ ಸುದ್ದಿಯನ್ನೂ ಓದಿ: Kuberaa Movie: ʼಕುಬೇರʼನಿಗೂ ತಟ್ಟಿದ ಪೈರಸಿ ಕಾಟ; ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕಾಯ್ತು ಧನುಷ್‌-ರಶ್ಮಿಕಾ ಚಿತ್ರ

ಧನುಷ್‌ ಜತೆ ಮೃಣಾಲ್‌ ಡೇಟಿಂಗ್‌?

ಐಶ್ವರ್ಯಾ ರಜನಿಕಾಂತ್‌ ಜತೆ ಡಿವೋರ್ಸ್‌ ಪಡೆದ ಬಳಿಕ ಇದೀಗ ಮೃಣಾಲ್‌ ಜತೆ ಧನುಷ್‌ ಸುತ್ತಾಡುತ್ತಿದ್ದಾರಂತೆ. ಇದಕ್ಕೆ ಹರಿದಾಡುತ್ತಿರುವ ಕೆಲವು ವಿಡಿಯೊಗಳೇ ಸಾಕ್ಷಿ ಎಂದು ಮೂಲಗಳು ತಿಳಿಸಿವೆ. ಆಗಸ್ಟ್‌ 1ರಂದು ಮೃಣಾಲ್‌ ಠಾಕೂರ್‌ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಆಯೋಜಿಸಿದ್ದ ಪಾರ್ಟಿಯಲ್ಲಿ ಧನುಷ್‌ ಭಾಗವಹಿಸಿದ್ದರು. ಅಲ್ಲದೆ ಮುಂಬೈಯಲ್ಲಿ ನಡೆದ ʼಸನ್‌ ಆಫ್‌ ಸರ್ದಾರ್‌ 2ʼ ಹಿಂದಿ ಸಿನಿಮಾದ ಸ್ಪೆಶಲ್‌ ಸ್ಕ್ರೀನಿಂಗ್‌ನಲ್ಲಿ ಧನುಷ್‌ ಪಾಲ್ಗೊಂಡಿದ್ದರು. ಈ ಚಿತ್ರದಲ್ಲಿ ಅಜಯ್‌ ದೇವಗನ್‌-ಮೃಣಾಲ್‌ ಠಾಕೂರ್‌ ನಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಇವರಿಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದು, ವದಂತಿಗೆ ಇನ್ನಷ್ಟು ತುಪ್ಪ ಸುರಿದಂತಾಗಿದೆ.

ಧನುಷ್‌ ಮತ್ತು ಮೃಣಾಲ್‌ ಆತ್ಮೀಯವಾಗಿ ಸಂಭಾಷೆಣೆಯಲ್ಲಿ ತೊಡಗಿಸಿಕೊಂಡಿರುವುದು ಕೂಡ ಕಂಡುಬಂದಿದ್ದು, ಅಭಿಮಾನಿಗಳು ಇವರ ಮಧ್ಯೆ ಏನೋ ನಡೆಯುತ್ತಿದೆ ಎಂದು ಗುಸುಗುಸು ಮಾತನಾಡುತ್ತಿದ್ದಾರೆ. ಅದಾಗ್ಯೂ ಇವರಿಬ್ಬರು ಈ ವದಂತಿಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಧನುಷ್‌ ಅಭಿನಯದ ಮುಂದಿನ ಚಿತ್ರಗಳು

ರಜನಿಕಾಂತ್‌ ಪುತ್ರಿ ಐಶ್ವರ್ಯಾ ಅವರನ್ನು ಮದುವೆಯಾಗಿದ್ದ ಧನುಷ್‌ 18 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿ 2022ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಸದ್ಯ ಧನುಷ್‌ ʼಇಡ್ಲಿ ಕಡೈʼ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿಯ ʼತೇರೆ ಇಷ್ಕ್‌ ಮೇʼ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ. ಜತೆಗೆ ವಿಘ್ನೇಶ್‌ ರಾಜ ನಿರ್ದೇಶನದ ತಮಿಳು ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ.

ಇತ್ತ ಮೃಣಾಲ್‌ ಠಾಕೂರ್‌ ʼಹೇ ಜವಾನಿ ತೊ ಇಷ್ಕ್‌ ಹೋನಾ ಹೆʼ, ʼತುಮ್‌ ಹೊ ತೊ,ʼ ʼಪೂಜಾ ಮೇರಿ ಜಾನ್‌ʼ ಮುಂತಾದ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ಅಟ್ಲಿ-ಅಲ್ಲು ಅರ್ಜುನ್‌-ದೀಪಿಕಾ ಪಡುಕೋಣೆ ಕಾಂಬಿನೇಷನ್‌ನ ಪ್ಯಾನ್‌ ಇಂಡಿಯಾ ಸಿನಿಮಾದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ.