ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tharun Sudhir: ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ' ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

Elumale Movie: ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ. ಹಾಡುಗಳು ಹಾಗೂ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದ್ದು, ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಪುನೀತ್ ರಂಗಸ್ವಾಮಿ ಆ್ಯಕ್ಷನ್‌ ಕಟ್ ಹೇಳಿರುವ ʼಏಳುಮಲೆʼ ಸಿನಿಮಾ ಸೆಪ್ಟೆಂಬರ್ 5ರಂದು ತೆರೆಗೆ ಬರಲಿದೆ.

ಬೆಂಗಳೂರು: ತರುಣ್ ಸುಧೀರ್ (Tharun Sudhir) ನಿರ್ಮಾಣದ 'ಏಳುಮಲೆ' ಸಿನಿಮಾ (Elumale Movie) ತನ್ನ ಕಂಟೆಂಟ್ ಮೂಲಕ ಸುದ್ದಿ ಮಾಡುತ್ತಿದೆ. ಕ್ರೇಜಿಕ್ವೀನ್‌ ರಕ್ಷಿತಾ ಪ್ರೇಮ್‌ ಅವರ ಸಹೋದರೆ ರಾಣಾ ಅಭಿನಯದ ಈ ಸಿನಿಮಾ ಹಾಡುಗಳು ಹಾಗೂ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದ್ದು, ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಪುನೀತ್ ರಂಗಸ್ವಾಮಿ ಆ್ಯಕ್ಷನ್‌ ಕಟ್ ಹೇಳಿರುವ ʼಏಳುಮಲೆʼ ಸಿನಿಮಾ ಸೆಪ್ಟೆಂಬರ್ 5ರಂದು ತೆರೆಗೆ ಬರಲಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಕರ್ನಾಟಕ-ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯಾಗಿರುವ ʼಏಳುಮಲೆ’ ಸಿನಿಮಾದಲ್ಲಿ ನಟಿ ರಕ್ಷಿತಾ ಸೋದರ ರಾಣಾ ಕನ್ನಡದ ಹುಡುಗ ಹರೀಶ್ ಆಗಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ಮೈಸೂರಿನ ಹುಡುಗಿ ಪ್ರಿಯಾ ಆಚಾರ್ ತಮಿಳು ಹುಡುಗಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ ಜತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ತಾರಾಬಳಗದಲ್ಲಿದ್ದಾರೆ.

ʼಚೌಕʼ ಮತ್ತು ʼಕಾಟೇರʼ ಚಿತ್ರಗಳ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಭಾವನಾತ್ಮಕವಾದ ಕಥೆಯನ್ನು ಒಳಗೊಂಡಿರಲಿದೆ. ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.



ಈ ಸುದ್ದಿಯನ್ನೂ ಓದಿ: Elumale Movie: 'ಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್! ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

ಗಮನ ಸೆಳೆದ ಟೀಸರ್‌

ಕೆಲವು ತಿಂಗಳ ಹಿಂದೆ ಸಿನಿಮಾದ ಟೈಟಲ್‌ ಟೀಸರ್‌ ರಿಲೀಸ್‌ ಆಗಿತ್ತು. ಬೆಂಗಳೂರಿನ ಒರಿಯನ್‌ ಮಾಲ್‌ನಲ್ಲಿ ಟೈಟಲ್‌ ಲಾಂಚ್‌ ಕಾರ್ಯಕ್ರಮ ನಡೆದಿತ್ತು. ಕರುನಾಡ ಚಕ್ರವರ್ತಿ ಶಿವಣ್ಣ ಟೈಟಲ್‌ ಟೀಸರ್‌ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದರು. ಜೋಗಿ ಪ್ರೇಮ್‌ ಕೂಡ ಕಾರ್ಯಕ್ರಮಕ್ಕೆ ವಿಶೇಷ ಅಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಬೆಸ್ಟ್‌ ವಿಷಸ್‌ ತಿಳಿಸಿದ್ದರು.

ಶಿವಣ್ಣ ಹೇಳಿದ್ದೇನು?

ಟೈಟಲ್‌ ಟೀಸರ್‌ ರಿಲೀಸ್‌ ಬಳಿಕ ಮಾತನಾಡಿದ ಶಿವಣ್ಣ, ʼʼಟೈಟಲ್‌ ಟೀಸರ್‌ ತುಂಬಾ ಚೆನ್ನಾಗಿದೆ. ಒಳ್ಳೆಯವರಿಗೆ ಒಳ್ಳೆದಾಗುತ್ತದೆ ಎನ್ನುವುದಕ್ಕೆ ಟೈಟಲ್‌ ಟೀಸರ್‌ ಸಾಕ್ಷಿ. ರಾಣಾ ತುಂಬಾ ಹ್ಯಾಂಡ್ಸಮ್‌ ಇದ್ದಾನೆ. ʼವಿಲನ್‌ʼ ಸಮಯದಲ್ಲಿ ಅವನಿಗೆ ಹೇಳಿದ್ದೇ ಹೀರೋ ಆಗ್ತಾನೆ ಎಂದಿದ್ದೆ. ʼಏಳುಮಲೆʼ ಪ್ರಾಮಿಸಿಂಗ್‌ ಆಗಿದೆ. ಪ್ರಿಯಾಂಕಾ ಫಸ್ಟ್‌ ಟೈಮ್‌ ಅಭಿನಯಿಸುತ್ತಾರೆ ಅನಿಸುವುದಿಲ್ಲ. ಹೊಸಬರು ಬರಬೇಕು ಸಿನಿಮಾ ಮಾಡಬೇಕು. ಮೆಚ್ಚುಗೆ ಬಂದ ಮೇಲೆ ಹಣ ಮಾಡೋದು ಹೆಚ್ಚಿಗೆ ಆಮೇಲೆ ಇದ್ದೇ ಇದೆ. ಅದು ತಾನಾಗಿಯೇ ಆಗಲಿದೆʼʼ ಎಂದು ಹೇಳಿದ್ದರು.

ʼಜೋಗಿʼ ಪ್ರೇಮ್‌ ಮಾತನಾಡಿ, ʼʼಜೋಗಿʼ ಸಿನಿಮಾ ಮಾಡುವಾಗ ಅಪ್ಪಾಜಿ ಜತೆಯಲ್ಲಿ ಕಾಲ ಕಳೆದಿದ್ದೆ. ನಮ್ಮ ಕಾಡಿನವರು ಎಂದು ಹೇಳುತ್ತಿದ್ದರು. ಶಿವಣ್ಣ ಲಾಂಚ್‌ ಮಾಡಿದ್ದಾರೆ. ನೂರಷ್ಟು ಸಿನಿಮಾ ಸಕ್ಸಸ್‌ ಆಗಲಿದೆʼʼ ಎಂದು ವಿವರಿಸಿದ್ದರು.