ಬೆಂಗಳೂರು: ಅಶ್ವ ಫಿಲಂಸ್ ಲಾಂಛನದಲ್ಲಿ ಯಶೋಧರ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಅಭಿಮನ್ಯು ನಾಯಕನಾಗಿ ನಟಿಸಿರುವ ವಿಭಿನ್ನ ಕಥೆ ಹೊಂದಿರುವ ನೂತನ ಚಿತ್ರದ ಶೀರ್ಷಿಕೆ ಇತ್ತೀಚೆಗೆ ಅನಾವರಣಗೊಂಡಿದೆ. ಚಿತ್ರಕ್ಕೆ ʼಹಚ್ಚೆʼ (Kannada New Movie) ಎಂದು ಹೆಸರಿಡಲಾಗಿದೆ. ಅಭಿಮನ್ಯು ಅವರಿಗೆ ನಾಯಕಿಯಾಗಿ ಅದ್ಯಾ ಪ್ರಿಯಾ ನಟಿಸಿದ್ದಾರೆ. ಅನುಪ್ರೇಮ, ಗುರುರಾಜ್ ಹೊಸಕೋಟೆ, ದುಷ್ಯಂತ್, ಶ್ರೀಮಂತ್ ಸುರೇಶ್, ಚಂದ್ರು ಬಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ.
ʼಹಚ್ಚೆʼ ಚಿತ್ರಕ್ಕೆ ಇತಿಹಾಸದ ಶಕ್ತಿ ಎಂಬ ಅಡಿಬರಹವಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕರ್ನಾಟಕದ ಸುಂದರ ಸ್ಥಳಗಳಲ್ಲಿ 50 ದಿನಗಳ ಚಿತ್ರೀಕರಣ ನಡೆದಿದೆ.
ಈ ಸುದ್ದಿಯನ್ನೂ ಓದಿ | LV Autorikshaw Handbag 2025: ಆಟೋರಿಕ್ಷಾ ಹ್ಯಾಂಡ್‌ಬ್ಯಾಗ್ ಅನಾವರಣಗೊಳಿಸಿದ ಲೂಯಿಸ್ ವ್ಯುಟನ್; ಬೆಲೆ ಕೇಳಿದ್ರೆ ದಂಗಾಗುತ್ತೀರಾ!
ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಯಾಸಿನ್ ಅವರ ಛಾಯಾಗ್ರಹಣವಿರುವ ಈ ಚಿತ್ರದ ಟೀಸರ್ ಹಾಗೂ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಲಿದೆ.