ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1 X Review: ಗೂಸ್‌ಬಂಪ್ಸ್‌, ಅದ್ಭುತ...: ʼಕಾಂತಾರ: ಚಾಪ್ಟರ್‌ 1' ಚಿತ್ರಕ್ಕೆ ಸಿಕ್ತು ಅಭೂತಪೂರ್ವ ಪ್ರತಿಕ್ರಿಯೆ

Kantara Chapter 1: ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್‌ 1' ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋ ಆರಂಭವಾಗಿದೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಿಷಬ್‌ ಶೆಟ್ಟಿ ನಟನೆ, ನಿರ್ದೇಶನಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ.

ಬೆಂಗಳೂರು: ಕೊನೆಗೂ ಬಹು ದಿನಗಳ ಕಾಯುವಿಕೆ ಅಂತ್ಯಗೊಂಡಿದ್ದು, ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್‌ 1' (Kantara Chapter 1) ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋ ಆರಂಭವಾಗಿದೆ. ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಾಣದ ಈ ಚಿತ್ರ ಅಕ್ಟೋಬರ್‌ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದ್ದು, ಅದರ ಹಿಂದಿನ ದಿನವಾದ ಬುಧವಾರ ವಿವಿಧ ಕಡೆ ಪ್ರೀಮಿಯರ್‌ ಶೋ ಆಯೋಜಿಸಲಾಗಿದೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಿಷಬ್‌ ಶೆಟ್ಟಿ (Rishab Shetty) ನಟನೆ, ನಿರ್ದೇಶನಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ರುಕ್ಮಿಣಿ ವಸಂತ್‌ (Rukmini Vasanth) ಚಿತ್ರಕ್ಕೆ ಹೊಸದೊಂದು ಕಳೆ ತಂದಿದ್ದು, ಅವರ ಅಭಿನಯಕ್ಕೂ ಪೂರ್ಣಾಂಕ ಸಿಕ್ಕಿದೆ (Kantara Chapter 1 X Review). ಹಾಗಾದರೆ ಎಕ್ಸ್‌ ಬಳಕೆದಾರರು ಹೇಳಿದ್ದೇನು? ಇಲ್ಲಿದೆ ವಿವರ:

ಚಿತ್ರ ವೀಕ್ಷಿಸಿದ ಬಹುತೇಕರು ರಿಷಬ್‌ ಶೆಟ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ಬಿ. ಅಜನೀಶ್‌ ಲೋಕನಾಥ್‌ ಅವರ ಸಂಗೀತ, ಹಿನ್ನೆಲೆ ಸಂಗೀತ, ಅರವಿಂದ್‌ ಎಸ್‌. ಕಶ್ಯಪ್‌ ಅವರ ಕ್ಯಾಮರಾ ವರ್ಕ್‌, ಚಿತ್ರಕಥೆಯನ್ನು ಕೂಡ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಅದರಲ್ಲಿಯೂ ಯುದ್ಧದ ದೃಶ್ಯವನ್ನು ನೋಡಿ ರೋಮಾಂಚನಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Kantara Chapter 1 Advance Booking: ಅಡ್ವಾನ್ಸ್‌ ಬುಕ್ಕಿಂಗ್‌ನಿಂದಲೇ 13 ಕೋಟಿ ರೂ. ದೋಚಿಕೊಂಡ ʼಕಾಂತಾರ: ಚಾಪ್ಟರ್‌ 1'; ಮೊದಲ ದಿನದ ಕಲೆಕ್ಷನ್‌ ಬಗ್ಗೆ ಆರಂಭವಾಯ್ತು ಲೆಕ್ಕಾಚಾರ



ರವಿ ಚೌಧರಿ ಎನ್ನವವರು ಚಿತ್ರಕ್ಕರ 5ಕ್ಕೆ 4 ಅಂಕ ನೀಡಿದ್ದಾರೆ. ʼʼಕಾಂತಾರ ಚಾಪ್ಟರ್‌ 1ʼ ಕಣ್ಣಿಗೆ ಹಬ್ಬ. ರಿಷಬ್‌ ಶೆಟ್ಟಿ ನಾಯಕನಾಗಿ, ನಿರ್ದೇಶಕನಾಗಿ ಎರಡೂ ಕಡೆ ಮಿಂಚಿದ್ದಾರೆ. ಸಂಗೀತ ಮತ್ತು ಸಿನಿಮಾಟೋಗ್ರಫಿ ರೋಮಾಂಚನಗೊಳಿಸುತ್ತದೆ. ಒಟ್ಟಿನಲ್ಲಿ ಇದೊಂದು ಅದ್ಭುತ ಪೌರಾಣಿಕ ಚಿತ್ರʼʼ ಎಂದು ಬರೆದುಕೊಂಡಿದ್ದಾರೆ.



ʼʼರಿಷಬ್‌ ಶೆಟ್ಟಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಇದು ಕೇವಲ ಚಿತ್ರವಲ್ಲ-ಇದೊಂದು ಅನುಭವ. ಮೊದಲ ದೃಶ್ಯದಿಂದಲೇ ಗಮನ ಸೆಳೆಯುವ ಇದು ಎಲ್ಲೂ ಬೋರ್‌ ಹೊಡೆಸುವುದಿಲ್ಲ. ದೈವಿಕ ಅನುಭವ ನೀಡುವ ಇದು ತೆರೆಮೇಲೆ ಹೊಸ ಜಗತ್ತನ್ನೇ ಅನಾವರಣಗೊಳಿಸಿದೆʼʼ ಎಂದು ಮ್ಯಾಡ್‌ಮ್ಯಾಕ್ಸ್‌ ತಿಳಿಸಿದ್ದಾರೆ. ʼʼಫಸ್ಟ್‌ ಹಾಫ್‌ ನೋಡಿ ರೋಮಾಂಚನವಾಯ್ತು. ರಿಷಬ್‌ ಶೆಟ್ಟಿ ನಿಮ್ಮನ್ನು ಹೊಸದೊಂದು ಜಗತ್ತಿಗೆ, ಜಾನಪದ ಲೋಕಕ್ಕೆ ಕರೆದೊಯ್ಯುತ್ತಾರೆʼʼ ಎಂದು ರಾಕಿ ಬಾಯ್‌ ಬರೆದುಕೊಂಡಿದ್ದಾರೆ.

ವಿಶ್ವಜಿತ್‌ ಪಾಟೀಲ್‌ ಎನ್ನುವವರು ಚಿತ್ರಕ್ಕೆ ನಾಲ್ಕೂವರೆ ಸ್ಟಾರ್‌ ನೀಡಿದ್ದಾರೆ. ʼʼಕಾಂತಾರ ಚಾಪ್ಟರ್‌ 1ʼ ಅದ್ಭುತ ಚಿತ್ರ. ಉತ್ತಮ ಕಥೆ, ಭಾವನೆಗಳ ಸಮ್ಮಿಶ್ರಣ. ಕ್ಲೈಮ್ಯಾಕ್ಸ್‌ನ ಕೊನೆಯ 10 ನಿಮಿಷವಂತೂ ನೋಡಿಯೇ ಅನುಭವಿಸಬೇಕು. ರಿಷಬ್‌ ಶೆಟ್ಟಿ ನಿರ್ದೇಶನದ ಜತೆಗೆ ನಟನೆಯಲ್ಲೂ ಪೂರ್ಣಾಂಕ ಗಿಟ್ಟಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಇದೊಂದು ಅದ್ಭುತ ಚಿತ್ರʼʼ ಎಂದಿದ್ದಾರೆ.



ನಿರ್ಮಲ್‌ ಪುರಿ ಎನ್ನುವವರು ಕೂಡ 5ಕ್ಕೆ 4.5 ಸ್ಟಾರ್‌ ನೀಡಿದ್ದಾರೆ. ʼʼರಿಷಬ್‌ ಶೆಟ್ಟಿ ತಾವೊಬ್ಬ ಉತ್ತಮ ಕಥೆಗಾರ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಚಿತ್ರದ ದೃಶ್ಯ ವೈಭವ ನೋಡಿಯೇ ಅನುಭವಿಸಬೇಕು. ಕ್ಲೈಮ್ಯಾಕ್ಸ್‌ ಅಂತೂ ಮೈನವಿರೇಳಿಸುತ್ತದೆ. ಇದು ಭಾರತೀಯ ಮಣ್ಣಿನ ನಿಜವಾದ ಕಥೆʼʼ ಎಂದು ಹೇಳಿದ್ದಾರೆ.

ಇನ್ನು ಹಲವರಂತು ಇದು ಉತ್ತಮ ಜಾನಪದ ಕಥೆ. ಕೆಲವು ದೃಶ್ಯಗಳಂತೂ ಅದ್ಭುತ. ಸಂಗೀತ, ಕ್ಯಾಮರಾ ವರ್ಕ್‌ ಗಮನ ಸೆಳೆಯುತ್ತದೆ. ರಿಷಬ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಕೆಲವೊಂದು ಕಡೆ ಸ್ವಲ್ಪ ಎಳೆದಂತೆ ಭಾಸವಾಗುತ್ತಿದೆಯಾದರೂ ಇಂಟರ್‌ವೆಲ್‌ ಮತ್ತು ಕ್ಲೈಮ್ಲ್ಯಾಕ್ಸ್‌ ಚಿತ್ರಮಂದಿರದಿಂದ ಹೊರ ಬಂದರೂ ಕಾಡುತ್ತದೆ. ನೋಡಲೇಬೇಕಾದ ಚಿತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಪಾಸಿಟಿವ್‌ ಪ್ರತಿಕ್ರಿಯೆಗಳು ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌ ಆಗಲಿದೆ.