The Devil Movie: ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್; ʼದಿ ಡೆವಿಲ್ʼ ಚಿತ್ರದ ಮೋಷನ್ ಪೋಸ್ಟರ್ ಔಟ್
Actor Darshan: ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಚಿತ್ರಗಳ ಪೈಕಿ ʼದಿ ಡೆವಿಲ್ʼ ಕೂಡ ಒಂದು. ದರ್ಶನ್ ಅಭಿನಯದ ಸಿನಿಮಾ ಎನ್ನುವ ಕಾರಣಕ್ಕೆ ಇದು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಇದೀಗ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಸದ್ಯದಲ್ಲೇ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.


ಬೆಂಗಳೂರು: ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಚಿತ್ರಗಳ ಪೈಕಿ ʼದಿ ಡೆವಿಲ್ʼ (The Devil) ಕೂಡ ಒಂದು. ದರ್ಶನ್ (Actor Darshan) ಅಭಿನಯದ ಸಿನಿಮಾ ಎನ್ನುವ ಕಾರಣಕ್ಕೆ ಇದು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ತೆರೆ ಕಾಣಲಿರುವ ದರ್ಶನ್ ಚಿತ್ರ ಇದಾಗಿದ್ದು, ಈಗಾಗಲೇ ಶೂಟಿಂಗ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದವರಿಗೆ ಇದೀಗ ಗುಡ್‌ನ್ಯೂಸ್ ಸಿಕ್ಕಿದೆ. ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಮತ್ತೊಮ್ಮೆ ಸ್ಟೈಲಿಶ್, ರಗಡ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ.
ʼತಾರಕ್ʼ ಚಿತ್ರದ ಬಳಿಕ ಪ್ರಕಾಶ್ ವೀರ್ (Prakash Veer) ಚಾಲೆಂಜಿಂಗ್ ಸ್ಟಾರ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ರಿಲೀಸ್ ಡೇಟ್ ಸದ್ಯದಲ್ಲೇ ಘೋಷಿಸುವುದಾಗಿ ಸಿನಿಮಾತಂಡ ಹೇಳಿದೆ. ಚಿತ್ರದ ಸಂಭಾಷಣಾ ರೆಕಾರ್ಡಿಂಗ್ ಪೂರ್ತಿಯಾಗಿರುವುದಾಗಿ ಸಿನಿಮಾತಂಡ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿತ್ತು. ಇದೀಗ ಮೋಷನ್ ಪೋಸ್ಟರ್ ಮೂಲಕ ದರ್ಶನ್ ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ʼದಿ ಡೆವಿಲ್ʼ ಚಿತ್ರದ ಮೋಷನ್ ಪೋಸ್ಟರ್ ಇಲ್ಲಿದೆ:
ಇದನ್ನೂ ಓದಿ: Actor Darshan: ದರ್ಶನ್‌ಗೆ ಜಾಮೀನು ನೀಡುವಾಗ ಕರ್ನಾಟಕ ಹೈಕೋರ್ಟ್ ವಿವೇಚನೆ ಬಳಸಿಲ್ಲ; ಸುಪ್ರೀಂ ಕೋರ್ಟ್ ಆಕ್ಷೇಪ
ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ಅದ್ಧೂರಿ ನಿರ್ಮಾಣವಾಗುತ್ತಿರುವ ʼಡೆವಿಲ್ʼ ಚಿತ್ರಕ್ಕೆ ನಿರ್ದೇಶನದ ಜತೆಗೆ ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ವರ್ಷವೇ ಚಿತ್ರ ತೆರೆಗ ಬರುವ ಸಾಧ್ಯತೆ ಇದೆ.
ಡೆವಿಲ್ʼ ಚಿತ್ರದಲ್ಲಿ ನಾಯಕಿಯಾಗಿ ಹೊಸ ಪ್ರತಿಭೆ ರಚನಾ ರೈ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮುಖ್ಯ ಪಾತ್ರಗಳಲ್ಲಿ ಶರ್ಮಿಳಾ ಮಾಂಡ್ರೆ, ತುಳಸಿ, ಅಚ್ಯುತ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು, ಶೋಭ್ ರಾಜ್ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಥೈಲ್ಯಾಂಡ್‌ನಲ್ಲಿ ದರ್ಶನ್ ಜಾಲಿ ಪಾರ್ಟಿ
ಸದ್ಯ ದರ್ಶನ್ ʼದಿ ಡೆವಿಲ್ʼನ ಹಾಡಿನ ಚಿತ್ರೀಕರಣಕ್ಕಾಗಿ ಥೈಲ್ಯಾಂಡ್‌ಗೆ ತೆರಳಿದ್ದು, ಬಿಂದಾಸ್ ಆಗಿ ಪಾರ್ಟಿ ಹಾಗೂ ಯಾಚ್ ರೈಡ್‌ಗಳಲ್ಲಿ ಮಗ್ನರಾಗಿದ್ದಾರೆ. ಈ ಕುರಿತ ಫೋಟೊ ಹಾಗೂ ವಿಡಿಯೊಗಳು ವೈರಲ್ ಆಗುತ್ತಿವೆ. ವೈರಲ್ ಆಗಿರುವ ಒಂದು ವಿಡಿಯೊದಲ್ಲಿ ಥೈಲ್ಯಾಂಡ್ ಸಮುದ್ರದಲ್ಲಿ ದರ್ಶನ್ ಯಾಚ್‌ನಲ್ಲಿ ಜಾಲಿ ರೈಡ್ ನಡೆಸುತ್ತಿರುವುದು ಕಂಡುಬಂದಿದೆ. ಯಾಚ್‌ನಲ್ಲಿ ದಾಸ ಬಣ್ಣಬಣ್ಣದ ಅಂಗಿ ಧರಿಸಿ ಡ್ರೈವ್ ಮಾಡುತ್ತ ದಶಾವತಾರ ತೋರಿಸಿದ್ದಾರೆ. ಕಾರು, ಬೈಕ್ ಕ್ರೇಜ್ ಹೊಂದಿರುವ ಜತೆಗೆ ಯಾಚ್‌ನಲ್ಲೂ ದರ್ಶನ್ ಡ್ರೈವ್ ಮಾಡಿದ್ದಾರೆ. ಈ ಯಾಚ್ ಚಿತ್ರೀಕರಣದ ಭಾಗ ಎಂದು ಹೇಳಲಾಗಿದೆ.
ಇನ್ನೊಂದು ವಿಡಿಯೋದಲ್ಲಿ ಥೈಲ್ಯಾಂಡ್‌ನ ದುಬಾರಿ ರೆಸ್ಟುರಾದಲ್ಲಿ ದರ್ಶನ್ ಬಿಂದಾಸ್ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಡೆವಿಲ್ ಸಿನಿಮಾದ ಶೂಟಿಂಗ್‌ಗಾಗಿ ಥೈಲ್ಯಾಂಡ್‌ಗೆ ಹೋಗಿರುವ ದರ್ಶನ್, ಚಿತ್ರೀಕರಣ ಮುಗಿಸಿ ಗೆಳೆಯರ ಜತೆಗೆ ಪಾರ್ಟಿ ಮಾಡಿದ್ದಾರೆ. ಬೆನ್ನು ನೋವಿಗೆ ಸರ್ಜರಿ ಮಾಡಿಸಬೇಕು ಎಂಬ ಕಾರಣ ನೀಡಿ ಕರ್ನಾಟಕ ಹೈಕೋರ್ಟ್‌ನಿಂದ ದರ್ಶನ್ ಜಾಮೀನು ಪಡೆದಿದ್ದರು.