ಚೆನ್ನೈ/ಮುಂಬೈ: 74 ವರ್ಷದ ಇಳಿ ವಯಸ್ಸಿನಲ್ಲೂ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ತಮ್ಮ ಚಾರ್ಮ್ ಕಳೆದುಕೊಂಡಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆಗಸ್ಟ್ 14ರಂದು ವಿಶ್ವಾದ್ಯಂತ ತೆರೆಕಂಡ ʼಕೂಲಿʼ (Coolie) ತಮಿಳು ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ರಿಲೀಸ್ ಆದ ಎರಡನೇ ದಿನಕ್ಕೆ ಭಾರತದಲ್ಲಿ 100 ಕೋಟಿ ರೂ. ಗಳಿಸಿದ್ದು, ಜಾಗತಿಕವಾಗಿ 200 ಕೋಟಿ ರೂ. ಗಡಿ ದಾಟಿದೆ. ಇತ್ತ ಅದೇ ದಿನ ಬಿಡುಗಡೆಗೊಂಡ ಹೃತಿಕ್ ರೋಷನ್ ಮತ್ತು ಜೂ. ಎನ್‌ಟಿಆರ್ (Hrithik Roshan-Jr NTR) ಅಭಿನಯದ ʼವಾರ್ 2ʼ (War 2) ಹಿಂದಿ ಚಿತ್ರವೂ ಅಬ್ಬರಿಸುತ್ತಿದ್ದು, ಪ್ರಬಲ ಪೈಪೋಟಿ ಒಡ್ಡಿದೆ (Coolie-War 2 Collection). ಇದು ಭಾರತದಲ್ಲಿ 2 ದಿನಗಳಲ್ಲಿ 115 ಕೋಟಿ ರೂ. ಗಳಿಸಿದ್ದು, ವಿಶ್ವಾದ್ಯಂತ 155 ಕೋಟಿ ರೂ. ದೋಚಿಕೊಂಡಿದೆ.
ಸ್ವಾಂತ್ರ್ಯೋತ್ಸವದ ರಜೆ ಮತ್ತು ಲಾಂಗ್ ವೀಕೆಂಡ್ ಗಮನದಲ್ಲಿಟ್ಟುಕೊಂಡು ಈ ಎರಡು ಚಿತ್ರಗಳು ತೆರೆ ಕಂಡಿದ್ದವು. ನಿರೀಕ್ಷೆಯಂತೆಯೇ ಇವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಕಮರ್ಷಿಯಲ್ ಸಿನಿಮಾ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
I am seeing your love for #War2 and I love you back for it… Incredible to see the public support for our film which we made with a lot of passion. Let’s goooo!@ihrithik @advani_kiara #AyanMukerji @yrf #YRFSpyUniverse pic.twitter.com/fl0eEoO9hK
— Jr NTR (@tarak9999) August 16, 2025
ಈ ಸುದ್ದಿಯನ್ನೂ ಓದಿ: Coolie-War 2 First Reactions: ಬಾಕ್ಸ್ ಆಫೀಸ್‌ನಲ್ಲಿ ರಜನಿಕಾಂತ್-ಹೃತಿಕ್, ಜೂ. ಎನ್‌ಟಿಆರ್ ಬಿಗ್ ಫೈಟ್; ಪ್ರೇಕ್ಷಕರ ಒಲವು ಯಾರ ಕಡೆಗೆ?
'ಕೂಲಿ'ಯಲ್ಲಿ ರಜನಿಕಾಂತ್ ಅಬ್ಬರ
ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಮೊದಲ ದಿನವೇ ಭಾರತದಲ್ಲಿ 65 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಜಾಗತಿಕವಾಗಿ ಬರೋಬ್ಬರಿ 151 ಕೋಟಿ ರೂ. ಬಾಚಿಕೊಂಡಿದೆ. ಈ ಪೈಕಿ ತಮಿಳಿನಲ್ಲಿ 44.5 ಕೋಟಿ ರೂ. ಗಳಿಸಿದರೆ, ತೆಲುಗಿನಲ್ಲಿ 15.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಿಂದಿಯಿಂದ 4.5 ಕೋಟಿ ರೂ. ಮತ್ತು ಕನ್ನಡದಿಂದ 50 ಲಕ್ಷ ರೂ. ಹರಿದುಬಂದಿದೆ. ಇನ್ನು ಎರಡನೇ ದಿನ ಭಾರತದಲ್ಲಿ 53.5 ಕೋಟಿ ರೂ. ಗಳಿಕೆಯಾಗಿದೆ. ಮೂರನೇ ದಿನವಾದ ಶನಿವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 2 ದಿನ ಒಟ್ಟು 118.5 ಕೋಟಿ ರೂ. ಗಳಿಸಿದಂತಾಗಿದೆ. ಇನ್ನು ವಿಶ್ವಾದ್ಯಂತ 245 ಕೋಟಿ ರೂ. ಬಾಚಿಕೊಂಡಿದೆ. ಭಾನುವಾರ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ. ಮತ್ತೊಮ್ಮೆ ಮಾಸ್ ಅವತಾರದಲ್ಲಿ ರಜನಿಕಾಂತ್ ಮಿಂಚಿದ್ದು ಫ್ಯಾನ್ಸ್‌ಗೆ ಇಷ್ಟವಾಗಿದೆ. ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್, ಸೌಬಿನ್ ಶಹೀರ್, ಶ್ರುತಿ ಹಾಸನ್, ರಚಿತಾ ರಾಮ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ʼವಾರ್ 2ʼಗೂ ಜೈ ಎಂದ ಪ್ರೇಕ್ಷಕ
ಇತ್ತ ʼವಾರ್ 2ʼ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅಯನ್ ಮುಖರ್ಜಿ ನಿರ್ದೇಶನ, ಹೃತಿಕ್ ರೋಷನ್-ಜೂ. ಎನ್‌ಟಿಆರ್ ಆ್ಯಕ್ಷನ್, ಕಿಯಾರಾ ಅಡ್ವಾಣಿ ಗ್ಲ್ಯಾಮರ್‌ಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಇದು ಮೊದಲೆರಡು ದಿನ ಭಾರತದಲ್ಲಿ 115 ಕೋಟಿ ರೂ. ಗಳಿಸಿದೆ. ಜಾಗತಿಕವಾಗಿ 155 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲಿ ಈ ಎರಡೂ ಚಿತ್ರಗಳು ಯಾವ ರೀತಿ ಕಲೆಕ್ಷನ್ ಮಾಡುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.