ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rukmini Vasanth: ʼಕಾಂತಾರ: ಚಾಪ್ಟರ್‌ 1ʼ ಚಿತ್ರದ ಡಬ್ಬಿಂಗ್‌ ಪೂರ್ಣಗೊಳಿಸಿದ ರುಕ್ಮಿಣಿ ವಸಂತ್‌

Kantara: Chapter 1: ಈ ವರ್ಷದ ಬಹು ನಿರೀಕ್ಷಿತ ಚಿತ್ರ ʼಕಾಂತಾರ: ಚಾಪ್ಟರ್‌ 1ʼ ರಿಲೀಸ್‌ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್‌ 2ರಂದು ಸುಮಾರು 30 ದೇಶಗಳಲ್ಲಿ, 7 ಭಾಷೆಗಳಲ್ಲಿ ತೆರೆಗೆ ಬರಲಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ನಾಯಕಿಯಾಗಿ ನಟಿಸಿರುವ ರುಕ್ಮಿಣಿ ವಸಂತ್‌ ಇದೀಗ ಡಬ್ಬಿಂಗ್‌ ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರು: ʼಕಾಂತಾರ: ಚಾಪ್ಟರ್‌ 1ʼ (Kantara: Chapter 1)- ಈ ವರ್ಷ ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ಚಿತ್ರ. ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ (Hombale Films) ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) 2ನೇ ಬಾರಿಗೆ ಒಂದಾಗುತ್ತಿರುವ ಈ ಸಿನಿಮಾ ಅಕ್ಟೋಬರ್‌ 2ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಕೊನೆಯ ಕ್ಷಣದ ತಯಾರಿಯಲ್ಲಿದ್ದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿದೆ. ಇದೀಗ ನಾಯಕಿ ರುಕ್ಮಿಣಿ ವಸಂತ್‌ (Rukmini Vasanth) ತಮ್ಮ ಪಾಲಿನ ಡಬ್ಬಿಂಗ್‌ ಮುಗಿಸಿದ್ದಾರೆ.

ನಾಯಕಿಯಾಗಿ ಮಹಾರಾಣಿ ಕನಕವತಿ ಪಾತ್ರದಲ್ಲಿ ನಟಿಸುತ್ತಿರುವ ರುಕ್ಮಿಣಿ ವಸಂತ್‌ ಡಬ್ಬಿಂಗ್‌ ಪೂರ್ಣಗೊಳಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ವಿಡಿಯೊ ಹಂಚಿಕೊಂಡಿರುವ ರುಕ್ಮಿಣಿ, ʼʼಕನಕವತಿ ನಿಮ್ಮ ಬಳಿಗೆ ಬರುತ್ತಿದ್ದಾಳೆ. ʼಕಂತಾರ: ಚಾಪ್ಟರ್‌ 1ʼ ಡಬ್ಬಿಂಗ್‌ ಪೂರ್ತಿಯಾಗಿದೆʼʼ ಎಂದು ಬರೆದುಕೊಂಡಿದ್ದಾರೆ.



ಈ ಸುದ್ದಿಯನ್ನೂ ಓದಿ: Rukmini Vasanth: ʼಕಾಂತಾರʼ ಜಗತ್ತಿಗೆ ಕಾಲಿಟ್ಟಿದ್ದೇ ಥ್ರಿಲ್ಲಿಂಗ್‌ ಅನುಭವ: ಕನಕವತಿ ಪಾತ್ರದ ಬಗ್ಗೆ ರುಕ್ಮಿಣಿ ವಸಂತ್‌ ಹೇಳಿದ್ದೇನು?

2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಇದಾಗಿದ್ದು, ಈ ಕಾರಣಕ್ಕೆ ಕುತೂಹಲ ಕೆರಳಿಸಿದೆ. ʼಕಾಂತಾರʼದಲ್ಲಿ ತುಳುನಾಡಿನ ವಿಶಿಷ್ಟ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ್ದ ರಿಷಬ್‌ ಶೆಟ್ಟಿ, ಜಾನಪದ ನಂಬಿಕೆ, ಅಲ್ಲಿನ ಜನಜೀವನ, ಭಾಷೆಯನ್ನು ಸಮರ್ಥವಾಗಿ ತೆರೆ ಮೇಲೆ ತಂದು ಯಶಸ್ವಿಯಾಗಿದ್ದರು. ಕರ್ನಟಕ ಮಾತ್ರವಲ್ಲ ಇಡೀ ದೇಶದ ಜನರೇ ಬೆರಗಿನಿಂದ ಚಿತ್ರವನ್ನು ನೋಡುವಂತೆ ಮಾಡಿದ್ದರು. ರಿಷನ್‌ ಶೆಟ್ಟಿ ನಿರ್ದೇಶಕನಾಗಿ ಮಾತ್ರವಲ್ಲಿ ನಟನಾಗಿಯೂ ಗಮನ ಸೆಳೆದಿದ್ದರು. ಅದರಲ್ಲಿಯೂ ಕ್ಲೈಮಾಕ್ಸ್‌ನಲ್ಲಿ ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಜತೆಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಸುಮಾರು 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ 400 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿತ್ತು.

ಹೀಗೆ ವಿಮರ್ಶಕರಿಂದ, ಪ್ರೇಕ್ಷಕರಿಂದ ಮೆಚುಗೆ ಪಡೆದ ಚಿತ್ರದ ಪ್ರೀಕ್ವೆಲ್‌ ಆಗಿ ʼಕಾಂತಾರ: ಚಾಪ್ಟರ್‌ 1ʼ ಸಿದ್ಧವಾಗಿದೆ. ಅಂದರೆ ʼಕಾಂತಾರʼ ಕಥೆ ನಡೆಯುವದಕ್ಕಿಂತ ಮೊದಲು ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಪಂಜುರ್ಲಿ ದೈವದ ಹಿನ್ನೆಲೆಯನ್ನು ಅವರು ರೋಚಕವಾಗಿ ತಿಳಿಸಿ ಕೊಡಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಿರೀಕ್ಷೆ ಮೂಡಿದೆ.

ಕದಂಬರ ಕಾಲದ ಕಥೆ?

ʼಕಾಂತಾರ: ಚಾಪ್ಟರ್‌ 1ʼ ಸಿನಿಮದ ಕಥೆ ಕದಂಬ ರಾಜಾಡಳಿತದ ಕಾಲದಲ್ಲಿ ನಡೆಯಲಿದೆ. ಹೀಗಾಗಿ ಬನವಾಸಿಯ ದಟ್ಟ ಕಾಡಿನ ಚಿತ್ರಣ ಇರಲಿದೆ. ಅಲ್ಲಿನ ನಿಗೂಢ ಪ್ರಪಂಚಕ್ಕೆ ಚಿತ್ರತಂಡ ನಿಮ್ಮನ್ನು ಕರೆದೊಯ್ಯಲಿದೆ ಎಂದು ವರದಿಯೊಂದು ತಿಳಿಸಿದೆ. ಜಾನಪದ ನಂಬಿಕೆಯೊಂದಿಗೆ ಆಳವಾಗಿ ಬೇರೂರಿರುವ ಶ್ರೀಮಂತ ಸಂಸ್ಕೃತಿಯ ಹಿನ್ನೆಲೆ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ.

ಕುಂದಾಪುರ, ಉತ್ತರ ಕನ್ನಡ, ಸಕಲೇಶಪುರ, ಉಡುಪಿ ಮುಂತಾದ ಕಡೆಯ ದಟ್ಟ ಕಾಡಿನಲ್ಲಿ, ಬೃಹತ್‌ ಸೆಟ್‌ನಲ್ಲಿ ಶೂಟಿಂಗ್‌ ನಡೆದಿದ. ಚಿತ್ರಕ್ಕಾಗಿ ಸಾವಿರಾರು ಸ್ಟಂಟ್‌ ಮಾಸ್ಟರ್‌ಗಳು ಕಾರ್ಯ ನಿರ್ವಹಿಸಿದ್ದು, ಯುದ್ಧದ ದೃಶ್ಯ ಹೈಲೈಟ್‌ ಆಗಿರಲಿದೆ. ಮಾತ್ರವಲ್ಲ ರಿಷಬ್‌ ಕುದುರೆ ಸವಾರಿ, ಕಳರಿಪಯಟ್ಟು ಕಲಿತಿದ್ದು, ಡ್ಯೂಪ್‌ ಇಲ್ಲದೆ ಸಾಹಸ ದೃಶ್ಯಗಳನ್ನು ಕಾಣಿಸಿಕೊಂಡಿದ್ದಾರೆ. ನಾಯಕಿ ರಕ್ಮಿಣಿ ಅವರಿಗೂ ಪವರ್‌ಫುಲ್‌ ಪಾತ್ರವಿದೆ ಎನ್ನುವ ಮಾತು ಕೇಳಿ ಬಂದಿದೆ. ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದು, ಹಾಡುಗಳು ಕೂಡ ಹೈಲೈಟ್‌ ಆಗಲಿವೆ.