ಚೆನ್ನೈ: ಕಾಲಿವುಡ್‌ನ ಹಿರಿಯ ನಟ, ಬಹುಭಾಷಾ ಕಲಾವಿದ ಮದನ್ ಬಾಬ್ (Madhan Bob) ಶನಿವಾರ (ಆಗಸ್ಟ್ 2) ಚೆನ್ನೈಯಲ್ಲಿ ನಿಧನ ಹೊಂದಿದರು. ಕೃಷ್ಣಮೂರ್ತಿ ಎಂಬ ಹೆಸರಿನಿಂದಲೂ ಗುರುತಿಸ್ಪಡುತ್ತಿದ್ದ ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರು ಕೆಲವು ಸಮಯಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 1953ರಲ್ಲಿ ಜನಿಸಿದ ಅವರು ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನರಂಜಿಸಿದ್ದರು. ರಜನಿಕಾಂತ್, ಕಮಲ್ ಹಾಸನ್, ಅಜಿತ್ ಕುಮಾರ್, ಸೂರ್ಯ, ವಿಜಯ್ ಮುಂತಾದ ಸ್ಟಾರ್ ಕಲಾವಿದರ ಸಿಮಾಗಳಲ್ಲಿ ಮದನ್ ಬಾಬ್ ನಟಿಸಿದ್ದರು.
ಕೆಲವು ವರ್ಷಗಳಿಂದ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರ ನಿಧನಕ್ಕೆ ಹಲವು ಸೆಲೆಬ್ರಿಟಿಗಳು ಕಂಬಿನಿ ಮಿಡಿದಿದ್ದಾರೆ.
We shared the screen, and his presence always brought joy to the set.
— Prabhudheva (@PDdancing) August 2, 2025
Cheerful, kind, and full of humour he made everyone feel happy around him.
Heartfelt condolences to his family.
He’ll always be remembered 🙏 pic.twitter.com/Ji5sqMlsDW
ಈ ಸುದ್ದಿಯನ್ನೂ ಓದಿ: Kalabhavan Navas: ಮಲಯಾಳಂ ಖ್ಯಾತ ನಟ ಹೋಟೆಲ್ ರೂಂನಲ್ಲಿ ಶವವಾಗಿ ಪತ್ತೆ!
ಮದನ್ ಜತೆ ತೆರೆ ಹಂಚಿಕೊಂಡಿದ್ದ ಪ್ರಭುದೇವ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಎಕ್ಸ್‌ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ʼʼಅವರ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ಅವರು ಯಾವಾಗಲೂ ಸೆಟ್‌ನಲ್ಲಿ ನಗಿಸುತ್ತಿದ್ದರು. ಅವರ ಕುಟುಂಬಕ್ಕೆ ಹೃತ್ಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ಅವರನ್ನು ಯಾವಾಗಲೂ ಮನಸ್ಸಿನಲ್ಲಿರುತ್ತಾರೆʼʼ ಎಂದು ಹೇಳಿದ್ದಾರೆ.
1984ರಲ್ಲಿ ರಿಲೀಸ್ ಆದ ʼನೀಂಗಲ್ ಕೆಟ್ಟವೈʼ ಸಿನಿಮಾ ಮೂಲಕ ಅವರ ಕಾಲಿವುಡ್‌ಗೆ ಪ್ರವೇಶಿಸಿದ್ದರು. ಸುಮಾರು 40 ವರ್ಷಗಳ ಸಿನಿಜರ್ನಿಯಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದ ಅವರು ತಮಿಳು ಜತೆಗೆ ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು. ಅವರು ಕೊನೆಯದಾಗಿ ಕಾಣಿಸಿಕೊಂಡ ಚಿತ್ರ ಈ ವರ್ಷ ರಿಲೀಸ್ ಆದ ʼಯಮನ್ ಕಟ್ಟಲೈʼ.
ಮದನ್ ಬಾಬ್ ಬೆಳ್ಳಿತೆರೆ ಜತೆಗೆ ಕಿರುತೆರೆಯಲ್ಲಿಯೂ ಸಕ್ರಿಯರಾಗಿದ್ದರು. ಟಿವಿ ಕಾಮಿಡಿ ಶೋಗಳಲ್ಲಿ ಜಡ್ಜ್ ಆಗಿ ಅವರು ಕಾಣಿಸಿಕೊಂಡಿದ್ದರು. ಕೆಲವು ಧಾರಾವಾಹಿಗಳಿಗೂ ಬಣ್ಣ ಹಚ್ಚಿದ್ದರು. ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದ ಕೀಬೋರ್ಡ್ ನುಡಿಸುತ್ತಿದ್ದರು.