ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Betting App Case: ಬೆಟ್ಟಿಂಗ್‌ ಆ್ಯಪ್‌ ಪ್ರಕರಣದಲ್ಲಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ, ನಟಿ ಊರ್ವಶಿ ರೌಟೇಲಾಗೆ ಸಂಕಷ್ಟ; ಇಡಿಯಿಂದ ಸಮನ್ಸ್‌

ಬೆಟ್ಟಿಂಗ್‌ ಆ್ಯಪ್‌ ಪ್ರಕರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್‌ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಮತ್ತು ನಟಿ ಊರ್ವಶಿ ರೌಟೇಲಾಗೆ ಸಂಕಷ್ಟ ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದೆ. 1xBet ಆ್ಯಪ್‌ಗೆ ಸಂಬಂಧಿಸಿ ಮಿಮಿ ಚಕ್ರವರ್ತಿಗೆ ಸೋಮವಾರ (ಸೆಪ್ಟೆಂಬರ್‌ 15) ಮತ್ತು ಊರ್ವಶಿ ರೌಟೇಲಾ ಅವರಿಗೆ ಮಂಗಳವಾರ ದಿಲ್ಲಿಯ ಮುಖ್ಯ ಕಚೇರಿಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ: ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಪ್ರಕರಣಕ್ಕೆ (Betting App Case) ಸಂಬಂಧಿಸಿ ತೃಣಮೂಲ ಕಾಂಗ್ರೆಸ್‌ ಮಾಜಿ ಸಂಸದೆ ಮಿಮಿ ಚಕ್ರವರ್ತಿ (Mimi Chakraborty) ಮತ್ತು ನಟಿ ಊರ್ವಶಿ ರೌಟೇಲಾ (Urvashi Rautela) ಅವರಿಗೆ ಜಾರಿ ನಿರ್ದೇಶನಾಲಯ (Enforcement Directorate) ಸಮನ್ಸ್‌ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 1xBet ಆ್ಯಪ್‌ಗೆ ಸಂಬಂಧಿಸಿ ಮಿಮಿ ಚಕ್ರವರ್ತಿಗೆ ಸೋಮವಾರ (ಸೆಪ್ಟೆಂಬರ್‌ 15) ಮತ್ತು ಊರ್ವಶಿ ರೌಟೇಲಾ ಅವರಿಗೆ ಮಂಗಳವಾರ ದಿಲ್ಲಿಯ ಮುಖ್ಯ ಕಚೇರಿಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

1xBet ಬೆಟ್ಟಿಂಗ್‌ ಆ್ಯಪ್‌ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದರ ಭಾಗವಾಗಿ ಸಮನ್ಸ್‌ ಜಾರಿಗೊಳಿಸಲಾಗಿದ. ಆರ್ಥಿಕ ಅವ್ಯವಹಾರದ ತನಿಖೆ ನಡೆಸುತ್ತಿರುವ ಇಡಿ ಈ ಹಿಂದೆ ಹಲವು ನಟರು ಮತ್ತು ಕ್ರಿಕೆಟಿಗರನ್ನು ವಿಚಾರಣೆ ನಡೆಸಿತ್ತು. ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ಅನೇಕ ಪ್ರಕರಣಗಳನ್ನು ಸಂಸ್ಥೆ ತನಿಖೆ ನಡೆಸುತ್ತಿದೆ. ಇವು ಗಣನೀಯ ಪ್ರಮಾಣದಲ್ಲಿ ತೆರಿಗೆ ಹಣವನ್ನು ತಪ್ಪಿಸಿವೆ ಎನ್ನುವ ಆರೋಪ ಕೇಳಿ ಬಂದಿದೆ.



ಈ ಸುದ್ದಿಯನ್ನೂ ಓದಿ: Online Gaming Bill 2025: ಆನ್‌ಲೈನ್‌ ಗೇಮಿಂಗ್‌ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ

ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ 1xBet ವಿರುದ್ಧವೂ ಹಣ ಅಕ್ರಮ ವರ್ಗಾವಣೆ ಮತ್ತು ತೆರಿಗೆ ವಂಚನೆಯ ಆರೋಪ ಕೇಳಿ ಬಂದಿದೆ. ಮಿಮಿ ಚಕ್ರವರ್ತಿ ಈ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಬಗ್ಗೆ ಇಡಿ ಪ್ರಶ್ನಿಸುವ ಸಾಧ್ಯತೆ ಇದೆ. ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ ಹಲವು ಪ್ರಭಾವಿಗಳು 1xBet ಅಪ್ಲಿಕೇಷನ್‌ನೊಂದಿಗೆ ಸಂಪರ್ಕ ಹೊಂದಿರುವ ಅನುಮಾನ ಮೇಲೆ ಈಗಾಗಲೇ ವಿಚಾರಣೆ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಕಾನೂನು ಜಾರಿ ಮಾಡುವ ಮೂಲಕ ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸಿದೆ. ತನಿಖಾ ಸಂಸ್ಥೆಗಳ ಅಂದಾಜಿನ ಪ್ರಕಾರ, ಅಂತಹ ವಿವಿಧ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ ಅನ್ನು ಸುಮಾರು 22 ಕೋಟಿ ಭಾರತೀಯ ಬಳಸುತ್ತಿದ್ದಾರೆ.

ಆನ್‌ಲೈನ್‌ ಗೇಮ್‌ ನಿಷೇಧ

ಇತ್ತೀಚೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹಣವನ್ನು ತೊಡಗಿಸಿ ಆಡುವ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಮಹತ್ವದ ವಿದೇಯಕಕ್ಕೆ ಅಂಗೀಕಾರ ನೀಡಲಾಯಿತು. ಗೇಮಿಂಗ್‌ ಅಪ್ಲಿಕೇಷನ್‌ಗಳಿಂದಾಗಿ ಯುವ ಜನತೆಯಲ್ಲಿ ಹೆಚ್ಚುತ್ತಿರುವ ವ್ಯಸನ, ಮಾನಸಿಕ ಅಸ್ವಸ್ಥತೆ, ಹಣ ಅಕ್ರಮ ವರ್ಗಾವಣೆ ಹಾಗೂ ಹಣಕಾಸು ವಂಚನೆ ತಡೆಯುವುದು ಉದ್ದೇಶದಿಂದ ಈ ಕಾನೂನು ಜಾರಿಗೊಳಿಸಲಾಗಿದೆ. ಈ ಆನ್‌ಲೈನ್‌ ಗೇಮಿಂಗ್‌ ಉತ್ತೇಜನ ಮತ್ತು ನಿಯಂತ್ರಣ ವಿಧೇಯಕ-2025 ಅನ್ನು ಮಂಡಿಸಿದ ಐಟಿ ಸಚಿವ ಅಶ್ವಿನಿ ವೈಷ್ಣವ್‌, ಆನ್‌ಲೈನ್‌ ಗೇಮಿಂಗ್‌ನಿಂದ ವಾರ್ಷಿಕವಾಗಿ ಸುಮಾರು 20,000 ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿದ್ದರು.

ಈ ಕಾನೂನಿನ ಮೂಲಕ ಇ-ಸ್ಪೋರ್ಟ್ಸ್ ಮತ್ತು ಆನ್‌ಲೈನ್ ಸಾಮಾಜಿಕ ಗೇಮಿಂಗ್ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ. ಈ ವಿದೇಯಕವು ಜಾಹೀರಾತುಗಳನ್ನು ನಿಷೇಧಿಸುತ್ತದೆ. ಬ್ಯಾಂಕ್‌ ಇಲ್ಲವೇ ಹಣಕಾಸು ಸಂಸ್ಥೆಗಳು ನಡೆಸುವ ಹಣ ವರ್ಗಾವಣೆಗೂ ಕಡಿವಾಣ ಹಾಕಲಿದೆ. ಪೋರ್ಕರ್‌, ರಮ್ಮಿ ಮತ್ತಿತರ ಕಾರ್ಡ್‌ ಆಟ, ಆನ್‌ಲೈನ್‌ ಲಾಟರಿ, ಬೆಟ್ಟಿಂಗ್‌, ಜೂಜುಗಳನ್ನೂ ನಿಯಂತ್ರಿಸಲಿದೆ.