ನಾಣ್ಯಗಳಿಂದ ಕಾರನ್ನು ಸಿಂಗರಿಸಿದ ಯುವಕ! ಇಲ್ಲಿದೆ ವೈರಲ್ ವಿಡಿಯೊ!
ರಾಜಾಸ್ಥಾನದ ಯುವಕ ಮಾರುತಿ ಡಿಸೈನರ್ ಕಾರಿಗೆ ಹೊರಭಾಗದಲ್ಲಿ ಈ ನಾಣ್ಯಗಳನ್ನು ಹೊದಿಕೆಗಳಂತೆ ಅಲಂಕರಿಸಿದ್ದು ಕಾರಿನ ಮುಂಭಾಗದಿಂದ ಹಿಂಭಾಗದವರೆಗೂ ಒಂದು ರೂಪಾಯಿ ನಾಣ್ಯವನ್ನು ಅತ್ಯಂತ ಕ್ರಮಬದ್ಧವಾಗಿ ಜೋಡಿಸಿ ಅಲಂಕರಿಸಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ಮೂಲಕ ಒಂದು ರೂಪಾಯಿ ನಾಣ್ಯದ ಕಾರು ಎಂದೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹೆಚ್ಚು ವೈರಲ್ ಆಗಿದೆ.