ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shanaya Kapoor: 'ಆಂಖೋನ್ ಕಿ ಗುಸ್ತಾಖಿಯಾನ್' ಚಿತ್ರದ ಟ್ರೈಲರ್ ಲಾಂಚ್ ಇವೆಂಟ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಶನಾಯಾ ಕಪೂರ್

ಬಾಲಿವುಡ್‌ಗೆ ಮತ್ತೊಬ್ಬ ಸ್ಟಾರ್ ಕಿಡ್ ಎಂಟ್ರಿ ನೀಡಿದ್ದಾರೆ. ನಟ ಸಂಜಯ್ ಕಪೂರ್ ಮತ್ತು ಮಾಹೀಪ್ ಕಪೂರ್ ಮಗಳು ಶನಾಯಾ ಕಪೂರ್ ‘ಆಂಖೋನ್ ಕಿ ಗುಸ್ತಾಖಿಯಾನ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಈ ರೊಮ್ಯಾಂಟಿಕ್ ಡ್ರಾಮಾ ಚಿತ್ರದಲ್ಲಿ ಅವರು ವಿಕ್ರಾಂತ್ ಮಸ್ಸಿ ಅವರ ಜತೆಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ನಡೆದಿದ್ದು, ಶನಾಯಾ ಕಪೂರ್ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ‌.

Shanaya Kapoor
1/6

ನಟ, ನಿರ್ಮಾಪಕ ಸಂಜಯ್ ಕಪೂರ್ ಪುತ್ರಿ ಶನಾಯಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಸದ್ಯ 'ಆಂಖೋನ್ ಕಿ ಗುಸ್ತಖಿಯಾನ್' ಚಿತ್ರದ ಮೂಲಕ ಶನಾಯಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

2/6

ಶನಾಯಾ ಕಪೂರ್ ಯೆಲ್ಲೋ ಕ್ರಿಸ್ಟಲ್ ಸೀರೆಯುಟ್ಟು ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್‌ಗೆ ಎಂಟ್ರಿ ನೀಡಿದ್ದರು. ಇದರ ಜತೆ ಶನಾಯ್ ಶಾಟ್ ಹೆರ್‌ಸ್ಟೈಲ್ ಎಲ್ಲರ ಗಮನ ಸೆಳೆಯಿತು.

3/6

ವಿಕ್ರಾಂತ್ ಮಸ್ಸಿ, ಫಾರ್ಮಲ್ ಲುಕ್‌ನಲ್ಲಿ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಕೋಟ್ ಹಾಗೂ ವೈಟ್ ಪ್ಯಾಂಟ್ ಧರಿಸಿ ಸಖತ್ ಯಂಗ್ ಲುಕ್‌ನಲ್ಲಿ ಮಿಂಚಿದ್ದಾರೆ.

4/6

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಜೈನ್ ಖಾನ್ ದುರಾನಿ ಕೂಡ ಟ್ರೈಲರ್ ಲಾಂಚ್‌ಗೆ ಆಗಮಿಸಿದ್ದರು. ಇವರು ಕೂಡ ಸ್ಮಾರ್ಟ್ ಲುಕ್ ಮೂಲಕ ಪೋಸ್ ನೀಡಿದ್ದಾರೆ.

5/6

ಶನಾಯಾ ತಂದೆ ಸಂಜಯ್ ಕಪೂರ್, ತಾಯಿ ಮಾಹೀಪ್, ಮತ್ತು ಸಹೋದರ ಜಹಾನ್ ಕಪೂರ್ ಕೂಡ ಭಾಗಿಯಾಗಿ ಶುಭ ಹಾರೈಸಿದ್ದಾರೆ.

6/6

'ಆಂಖೋನ್ ಕಿ ಗುಸ್ತಾಖಿಯಾನ್' ಜುಲೈ 11ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರೊಮ್ಯಾಂಟಿಕ್ ಡ್ರಾಮಾ ಕಥೆ ಇರುವ ಈ ಚಿತ್ರವನ್ನು ಸಂತೋಷ್ ಸಿಂಗ್ ನಿರ್ದೇಶಿಸಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.