Profile

Pushpa Kumari

Pushpakumarisangee@gamil.com

Articles
Viral Video: ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ! ಭಯಾನಕ ವಿಡಿಯೊ ವೈರಲ್

ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ-ಶಾಕಿಂಗ್‌ ವಿಡಿಯೊ ವೈರಲ್‌

ಪ್ರಾಂಶುಪಾಲರು ಬೈದರೆಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಮನನೊಂದು ಶಾಲಾ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲಯಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

Health Tips: ತೂಕ ಇಳಿಸ್ಬೇಕಾ? ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಖರ್ಜೂರ ಸೇವಿಸಿ!

ಖರ್ಜೂರ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ನಿತ್ಯ ಪ್ರೊಟೀನ್‌ಯುಕ್ತ, ಕಡಿಮೆ ಕ್ಯಾಲೊರಿ ಇರುವ ಆಹಾರ ಸೇವಿಸುವುದು ಕಷ್ಟ ಎನ್ನುವವರು ನಿತ್ಯ ಖರ್ಜೂರ ಸೇವನೆ ಮಾಡುವುದರಿಂದ ಸುಲಭವಾಗಿ ತೂಕ ಇಳಿಸಬಹುದು.ಖರ್ಜೂರದಲ್ಲಿ ಇರುವ ಕೊಬ್ಬಿನ ಆಮ್ಲದಿಂದ ಉರಿಯೂತ ಕಡಿಮೆ ಮಾಡಬಹುದು. ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹ ,ಬೊಜ್ಜು ಇತರ ಸಮಸ್ಯೆ ತಡೆಯುತ್ತದೆ. ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಸೇರಿದಂತೆ ವಿವಿಧ ಖನಿಜಗಳು ಹೇರಳವಾಗಿದ್ದು ಅತಿಯಾಗಿ ಹಸಿವಾದಾಗ ಎರಡು ಖರ್ಜೂರ ಸೇವನೆ ಮಾಡಿದರೂ ಹಸಿವು ನೀಗಲಿದೆ

Drinking From Cans: ಕ್ಯಾನ್‌ನಲ್ಲಿ ತುಂಬಿಸಿಟ್ಟ ಕೋಲ್ಡ್ ಡ್ರೀಕ್ಸ್ ಬಳಸಿದ್ರೆ ಆರೋಗ್ಯಕ್ಕೆ ಕುತ್ತು!

ಕ್ಯಾನ್‌ನಲ್ಲಿ ತುಂಬಿಸಿಟ್ಟ ಕೋಲ್ಡ್ ಡ್ರಿಂಕ್ಸ್ ಆರೋಗ್ಯಕ್ಕೆ ಅಪಾಯ!

ಪ್ಯಾಕೆಟ್‌, ಕ್ಯಾನ್‌ನಲ್ಲಿ ತುಂಬಿಸಿಟ್ಟ ತಂಪು ಪಾನೀಯಗಳು ನಿಮಗಿಷ್ಟವೇ? ನೀವು ಕೂಲ್‌ ಡ್ರಿಂಕ್ಸ್‌ ಪ್ರಿಯರೇ ಹಾಗಿದ್ದರೆ ಈ ಸುದ್ದಿ ಓದ್ಲೇಬೇಕು. ಕ್ಯಾನ್‌ಗಳಲ್ಲಿ ಶೇಖರಣೆ ಮತ್ತು ಸಾಗಾಟ ಸಮಯದಲ್ಲಿ ಕ್ಯಾನ್‌ಗಳು ವಿವಿಧ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಳ್ಳಬಹುದು. ಇದರಿಂದ ನಾವು ಕುಡಿಯುವ ಕೋಲ್ಡ್ ಡ್ರೀಕ್ಸ್ ಕಲುಷಿತ ಗೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಇವು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು ಎಂದು ವೈದ್ಯಕೀಯ ಸಂಶೋಧನೆಗಳು ಹೇಳುತ್ತವೆ.

Zee Entertainers Comedy Awards: ಝೀ ಕನ್ನಡದಲ್ಲಿ ಕಾಮಿಡಿ ಸ್ಟಾರ್‌ಗಳ ಸಮಾಗಮ

ಝೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಅವಾರ್ಡ್ಸ್ ಕಾರ್ಯಕ್ರಮ

ಝೀ ಎಂಟರ್ಟೈನರ್ಸ್ ಕಾಮಿಡಿ ಅವಾರ್ಡ್ಸ್ 2025ರಲ್ಲಿ ಚಂದನವನದ ಹಾಸ್ಯ ಕಲಾವಿದರ ಸಮಾಗ ಮವಾಗಲಿದೆ. ಈ ವೇದಿಕೆಯಲ್ಲಿ ಕಣ್ಮರೆಯಾದ ಹಾಸ್ಯ ದಿಗ್ಗಜರ ಸ್ಮರಣೆ ಜತೆಗೆ ನಕ್ಕು ನಗಿಸುವ ಸ್ಕಿಟ್‌ಗಳೂ ಇರಲಿವೆ. ಸ್ಯಾಂಡಲ್‌ವುಡ್‌ನ ನಟರಾದ ಸಾಧು ಕೋಕಿಲ, ಪ್ರಾಣೇಶ್, ತರುಣ್ ಸುಧೀರ್, ಲೂಸ್ ಮಾದ ಯೋಗಿ, ದಿಗಂತ್, ಮಾಳವಿಕಾ, ಸೋನು ಗೌಡ, ರಿಷಿ ಸೇರಿ ಹಲವಾರು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Valentine's Day: ವ್ಯಾಲೆಂಟೈನ್ಸ್ ಡೇ ದಿನ ಔಟಿಂಗ್ ಹೋಗೋ ಪ್ಲ್ಯಾನ್ ಇದೆಯಾ? ಹಾಗಾದ್ರೆ ಈ ರೊಮ್ಯಾಂಟಿಕ್ ಪ್ಲೇಸ್​​ಗಳಿಗೆ ಭೇಟಿ ನೀಡಿ

ವ್ಯಾಲೆಂಟೈನ್ಸ್ ಡೇಗೆ ಔಟಿಂಗ್‌ ಹೋಗಲು ಈ ಸ್ಥಳಗಳು ಬೆಸ್ಟ್‌!

ವ್ಯಾಲೆಂಟೈನ್ಸ್ ಡೇಗೆ ಕೌಂಟ್‌ಡೌನ್‌ ಶುರುವಾಗಿದ್ದು ನಿಮ್ಮ ಸಂಗಾತಿ ಜೊತೆಗೆ ಔಟಿಂಗ್ ಹೋಗಲು ಪ್ಲ್ಯಾನ್ ಮಾಡಿದ್ದರೆ, ಈ ಕೆಳಗಿನ ರೋಮ್ಯಾಂಟಿಕ್ ಪ್ಲೇಸ್‌ಗಳಿಗೆ ಭೇಟಿ ನೀಡಬಹುದು. ಕೆಲವು ಪ್ರಮುಖ ಸ್ಥಳದಲ್ಲಿ ವ್ಯಾಲೆಂಟೈನ್ಸ್ ಡೇಯನ್ನು ಅದ್ಭುತವಾಗಿ ಆಚರಿಸಲು ಬೇಕಾದ ಡೆಕೊರೇಶನ್‌ ಜೊತೆಗೆ ಉತ್ತಮ ಪ್ಯಾಕೇಜ್ ಸೌಲಭ್ಯ ಕೂಡ ಇರಲಿದೆ. ಕ್ಯಾಂಡಲ್ ಲೈಟ್ ಡಿನ್ನರ್, ಪೂಲ್ ಲೈಟ್ ಡಿನ್ನರ್, ನೇಚರ್ ವೀವಿಂಗ್ , ಲೈವ್ ಮ್ಯುಸಿಕ್ ಸೇರಿದಂತೆ ಅನೇಕ ಹೊಸ ಹೊಸ ಆಯ್ಕೆಗಳು ಈ ಸ್ಥಳದಲ್ಲಿ ಲಭ್ಯವಿದ್ದು ಪ್ರೇಮಿಗಳ ದಿನವನ್ನು ಮೆಮೊರೆಬಲ್ ಆಗಿ ಆಚರಣೆ ಮಾಡಬಹುದು.

Viral Video: ಇದೆಂಥಾ ಅಸಹ್ಯ! ತಯಾರಿಸಿಟ್ಟ ಜಾಮೂನ್‌ ಗೆ ಮೂತ್ರ ವಿಸರ್ಜನೆ ಮಾಡಿದ ಕೊಳಕ- ವಿಡಿಯೊ ವೈರಲ್

ಜಾಮೂನ್ ಗೆ ಮೂತ್ರ ಬೆರೆಸಿದ ನೀಚ! ಅಸಹ್ಯಕರ ವಿಡಿಯೊ ಫುಲ್‌ ವೈರಲ್‌

ವ್ಯಕ್ತಿಯೊಬ್ಬ ತಯಾರಿಸಿಟ್ಟ ಸ್ವೀಟ್‌ಗೆ ಮೂತ್ರ ವಿಸರ್ಜಿಸುವ ಅಸಹ್ಯಕರ ವಿಡಿಯೊವೊಂದು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ಭಾರಿ ವೈರಲ್‌ ಆಗುತ್ತಿದ್ದು ಇದನ್ನು ನೋಡಿದ ನೆಟ್ಟಿಗರು ಛೀ, ಥೂ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿಯೊಬ್ಬ ಗುಲಾಬ್ ಜಾಮೂನು ತಯಾರಿಸಿಟ್ಟ ಕಡಾಯಿಗೆ ಮೂತ್ರ ವಿಸರ್ಜನೆ ಮಾಡುವ ದೃಶ್ಯ ವಿಡಿಯೊದಲ್ಲಿ ಕಂಡುಬಂದಿದೆ. ಆತನ ಪಕ್ಕದಲ್ಲಿ ನಿಂತಿದ್ದ ಸಹೋದ್ಯೋಗಿ ಇದನ್ನು ವಿಡಿಯೊ ಮಾಡಿದ್ದಾರೆ

High Heels Side Effects: ನೀವು ಹೈ ಹೀಲ್ಸ್‌ ಪ್ರಿಯರೇ? ಹಾಗಾದರೆ ಇದನ್ನು ಓದಲೇಬೇಕು!

ನೀವು ಹೈ ಹೀಲ್ಸ್ ಧರಿಸುತ್ತೀರಾ?ಈ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಚ್ಚರ!

ಮಹಿಳೆಯರನ್ನು ಹೆಚ್ಚು ಸ್ಟೈಲಿಶ್‌ ಆಗಿ ಕಾಣುವಂತೆ ಮಾಡುವ, ಇನ್ನಷ್ಟು ಎತ್ತರವಾಗಿಸುವ, ಹಾಕಿದ ಧಿರಿಸುಗಳಲ್ಲಿ ಮಾದಕತೆ ಹೆಚ್ಚಿಸುವ ಅಥವಾ ಇನ್ನೂ ಏನೇನೋ ಕಾರಣಗಳಿಗಾಗಿ ಎತ್ತರದ ಚಪ್ಪಲಿಗಳನ್ನು ತೊಡುವವರ ಸಂಖ್ಯೆ ವ್ಯಾಪಕವಾಗಿದೆ. ಆದರೆ ಇದರಿಂದ ಅಲ್ಪಕಾಲದ ಆರೋಗ್ಯ ತೊಂದರೆಗಳಿಂದ ಹಿಡಿದು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳವರೆಗೆ ಹಲವು ರೀತಿಯವು ಗಂಟು ಬೀಳಬಹುದು.

Kuno cheetah: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ ಚೀತಾ ವೀರಾ

ಕುನೊದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಚೀತಾ-26ಕ್ಕೇರಿದ ಚಿರತೆಗಳ ಸಂಖ್ಯೆ!

ಎರಡು ಮರಿಗಳ ಜನನದಿಂದ ಕುನೊದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆ ಯಾಗಿದೆ.2022ರ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆ ಹಾಗೂ ನಮೀಬಿಯಾದಿಂದ 8 ಚಿರತೆಯನ್ನು ಭಾರತಕ್ಕೆ ತರಲಾಗಿತ್ತು. ಅದರಲ್ಲಿ 7 ಚಿರತೆಗಳು ಮೃತಪಟ್ಟಿದ್ದು, ಚೀತಾ ಯೋಜನೆಗೆ ಆಘಾತ ತಂದಿತ್ತು. ಆದರೆ ಈಗ ಅದೇ ಚಿರತೆಯಲ್ಲಿ ಒಂದಾದ ವೀರಾ ಎರಡು ಮರಿಗಳಿಗೆ ಜನ್ಮ ನೀಡಿದ್ದು ಯೋಜನೆಗೆ ಮತ್ತಷ್ಟು ಬಲ ತಂದಾಂತಾಗಿದೆ.

Viral Video: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್‌- ಸಿಸಿಟಿವಿಯಲ್ಲಿ ಕೃತ್ಯದ ದೃಶ್ಯಾವಳಿ ಸೆರೆ!

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿಯ ವಿಡಿಯೊ ವೈರಲ್!

ವಿಕೃತ ಕಾಮಿಯೋರ್ವ ಮನೆಯೊಂದರ ಮುಂದೆ ಒಣಗಲು ಹಾಕಿದ್ದ ಒಳ ಉಡುಪುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾನೆ. ಮನೆಯ ಮುಂದೆ ಒಗೆದು ಹಾಕಿದ್ದ ಮಹಿಳೆಯ ಒಳ ಉಡುಪನ್ನು‌ ‌ತನ್ನ ಪ್ಯಾಂಟ್​ನ ಒಳಗೆ ಹಾಕಿ ಕೊಂಡಿದ್ದಾನೆ. ಬಳಿಕ ಸಿಸಿ ಕ್ಯಾಮರಾ ಅಳವಡಿಸಿದ್ದನ್ನು ಕಂಡು ಒಳ ಉಡುಪನ್ನು ಇದ್ದ ಜಾಗದಲ್ಲೇ ಇರಿಸುತ್ತಾನೆ. ಸದ್ಯ ಈ ದೃಶ್ಯ ನೋಡಿದ ನೆಟ್ಟಿಗರು ಈತನ ಅಸಹ್ಯಕರ ವರ್ತನೆಗೆ ಗರಂ ಆಗಿದ್ದಾರೆ.

Viral Video: ಯಪ್ಪಾ... ಎದೆ ಝಲ್ ಅನಿಸುತ್ತೆ ಈ ವಿಡಿಯೊ! ರೂಂ ಬಾಗಿಲು ತೆರೆದ್ರೆ ಹುಲಿರಾಯ ಪ್ರತ್ಯಕ್ಷ

ರೂಂ ಬಾಗಿಲು ತೆರೆದ್ರೆ ಹುಲಿ ಪ್ರತ್ಯಕ್ಷ! ಶಾಕಿಂಗ್‌ ವಿಡಿಯೊ ವೈರಲ್‌

ಮಹಿಳೆಯೊಬ್ಬರು ತನ್ನ ರೂಮ್ ಒಳಗೆ ಹೋಗಲು ನಿಧಾನವಾಗಿ ಬಾಗಿಲು ತೆರೆಯುತ್ತಿದ್ದಂತೆ ಹುಲಿಯೊಂದು ಅವಳನ್ನೇ ದಿಟ್ಟಿಸಿ ನೋಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಮಹಿಳೆ ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದಂತೆ ಹುಲಿಯು ಆಕೆಯನ್ನೇ ದಿಟ್ಟಿಸಿ ನೋಡುತ್ತದೆ. ಮಹಿಳೆ ಬಾಗಿಲು ಮುಚ್ಚದೆ ಮತ್ತೆ ತೆರೆಯಲು ಪ್ರಯತ್ನಿಸಿದಾಗ ಹುಲಿ ಆಕೆ ಇದ್ದಲ್ಲಿ ಬರಲು ಪ್ರಯತ್ನಿಸುತ್ತದೆ. ಆಗ ಮತ್ತೆ ಮಹಿಳೆ ಬಾಗಿಲು ಹಾಕಿಕೊಳ್ಳುತ್ತಾಳೆ.

Viral News: ಸರ್ಪೈಸ್‌ ಪ್ರೊಪೋಸ್‌ಗಾಗಿ ಪ್ರಿಯತಮ ಕೇಕ್​ನೊಳಗೆ ಇಟ್ಟಿದ್ದ ಉಂಗುರವನ್ನೂ ತಿಂದ ಪ್ರೇಯಸಿ

ಕೇಕ್​ನೊಳಗೆ ಉಂಗುರ ಇಟ್ಟ ಪ್ರಿಯತಮ! ಪ್ರೇಯಸಿ ಮಾಡಿದ್ದೇನು ಗೊತ್ತಾ?

ಚೀನಾದ ವ್ಯಕ್ತಿಯೊಬ್ಬಕೇಕ್‌ನೊಳಗೆ ಉಂಗುರ ಬಚ್ಚಿಟ್ಟು ಸರ್ಪ್ರೈಸ್‌ ಪ್ರೊಪೋಸ್‌ ಪ್ಲ್ಯಾನ್‌ ಮಾಡಿದ್ದ. ಆದರೆ ಇದ್ಯಾವುದನ್ನೂ ತಿಳಿಯದೆ‌ ಯುವತಿ ಕೇಕ್ ಜತೆಗೆ ಉಂಗುರವನ್ನೂ ನುಂಗಿದ್ದಾಳೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಚೀನಾದ ಸೌತ್ ಗುವಾಂಗ್‌ಆನ್‌ ನಲ್ಲಿ ಈ ಘಟನೆ ನಡೆದಿದೆ.

Toxic movie: ಟಾಕ್ಸಿಕ್ ಶೂಟಿಂಗ್ ಜೋರು! ರಾಕಿ ಭಾಯ್ ಫುಲ್ ಬ್ಯುಸಿ

3 ದಿನ ಕ್ಯಾರವಾನ್‌ನಲ್ಲೇ ರಾಕಿ ಭಾಯ್‌ ನಿದ್ದೆ! ʻಟಾಕ್ಸಿಕ್ʼ ಶೂಟಿಂಗ್‌ನಲ್ಲಿ ಫುಲ್‌ ಬ್ಯುಸಿ

ಮಲಯಾಳಂನ ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಸಿನೆಮಾ ಬಗ್ಗೆ ಆಗಾಗ ಹೊಸ ಹೊಸ ವಿಚಾರ ಕೇಳಿಬರುತ್ತಲೇ ಇದೆ. ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ಯಶ್ ಹಾಗೂ ಟೀಂ ಬ್ಯುಸಿಯಾಗಿದ್ದು ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾಕ್ಕಾಗಿ ತಮ್ಮನ್ನು ತಾವೇ ಪೂರ್ತಿಯಾಗಿ ಸಮರ್ಪಿಸಿಕೊಳ್ಳುತ್ತಿದ್ದಾರಂತೆ. ಸದ್ಯ ಯಶ್ ಸಿನಿಮಾದ ಮೇಲೆ ಮಾತ್ರ ಫುಲ್ ಫೋಕಸ್ ಮಾಡುತ್ತಿದ್ದಾರೆ. ಈಗಾಗಲೇ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗೋವಾ ಹಾಗೂ ಮುಂಬೈನಲ್ಲಿ ಚಿತ್ರಿಕರಣಗೊಂಡಿದ್ದು, ಈ ವರ್ಷದೊಳಗೆ ಸಿನೆಮಾ ತೆರೆಗೆ ಬರಲು ಸಜ್ಜಾಗುತ್ತಿದೆ.

Tooth Brush: ನಿಮ್ಮ ಟೂತ್‌ಬ್ರಷ್‌ಗಳು ಸ್ವಚ್ಛವಾಗಿವೆಯೇ?

ಹಲ್ಲುಜ್ಜುವ ಟೂತ್ ಬ್ರಷ್ ಬಳಕೆ ಬಗ್ಗೆ ಈ ಕಾಳಜಿ ಇರಲಿ!

ಬ್ರಷ್‌ ಹಿಡಿಕೆ ಮತ್ತು ಬ್ರಿಸಲ್‌ಗಳ ಮೇಲೆ ನೂರಾರು ಬಗೆಯ ಬ್ಯಾಕ್ಟೀರಿಯಗಳು ಬೆಳೆಯುತ್ತವೆ ಎಂಬುದನ್ನು ಅಧ್ಯಯನಗಳು ತೋರಿಸಿವೆ. ಹಾಗೆಂದು ಈ ಸಾಮಾನ್ಯ ಬ್ಯಾಕ್ಟೀರಿಯಗಳನ್ನು ಮಟ್ಟಹಾಕುವ ಶಕ್ತಿ ನಮ್ಮ ದೇಹಕ್ಕೆ ಮಾಮೂಲಾಗಿಯೇ ಇರುತ್ತದೆ. ಆದರೂ ಕೆಲವೊಮ್ಮೆ ಬ್ರಷ್‌ ಮುಖೇನವಾಗಿಯೇ ಸೋಂಕುಗಳು ಒಬ್ಬರಿಂದೊಬ್ಬರಿಗೆ ಅಂಟುವುದಕ್ಕೆ ಸಾಧ್ಯವಿದೆ.ಸ್ಯಾನಿಟೈಸ್‌ ಮಾಡುವುದಕ್ಕೆ ಮೈಕ್ರೋವೇವ್‌ ಅಥವಾ ಡಿಷ್‌ವಾಷರ್‌ಗೆ ಹಾಕುವಂಥ ಆಯ್ಕೆಗಳು ಅಷ್ಟೇನೂ ಸೂಕ್ತವಲ್ಲ. ಹಾಗಾದರೆ ಇದಕ್ಕೆ ಬದಲಿ ಮಾರ್ಗಗಳೇನು?

Shiva Rajkumar: ಶಿವಣ್ಣನ ಆರೋಗ್ಯದ ಬಗ್ಗೆ ಅಮಿತಾಭ್​ ಬಚ್ಚನ್‌ಗೆ​ ವಿಶೇಷ ಕಾಳಜಿ

ಪ್ರತಿದಿನ ಶಿವರಾಜ್ ಕುಮಾರ್ ಆರೋಗ್ಯದ ವಿಚಾರಿಸುತ್ತಿದ್ದಾರೆ ಬಿಗ್ ಬಿ

ಬಾಲಿವುಡ್‌ ಮೇರು ನಟ ಅಮಿತಾಭ್ ಬಚ್ಚನ್ ಅವರು ಮೆಸೇಜ್ ಮೂಲಕ ಶಿವಣ್ಣನ ಆರೋಗ್ಯ ವಿಚಾರಿಸುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್‌ ಅವರಿಗೆ ಮೇಸೇಜ್ ಮಾಡುವ ಮೂಲಕ ಬಿಗ್‌ ಬಿ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಶಿವಣ್ಣ ಹೇಗಿದ್ದಾರೆ, ಚೇತರಿಸಿಕೊಂಡ್ರಾ ಎಂದು ಮಾಹಿತಿ ಪಡೆಯುತ್ತಲೇ ಇದ್ದಾರೆ. ಇವರ ಜತೆ ಟಾಲಿವುಡ್ ನಟ ಬಾಲಕೃಷ್ಣ ಅವರು ಸಹ ಶಿವಣ್ಣನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

Viral Video: ಚೀನಾದ ಅತೀ ಎತ್ತರದ‌ ಅಪಾರ್ಟ್‌ಮೆಂಟ್‌ನಲ್ಲಿರುವ ಅತ್ಯಾಧುನಿಕ ಸೌಲಭ್ಯ ನಿಜಕ್ಕೂ ಅದ್ಭುತ!

ವಿಶ್ವದ ಅತೀ ಎತ್ತರದ ಅಪಾರ್ಟ್​ಮೆಂಟ್​ ಹೇಗಿದೆ ನೋಡಿ! ವಿಡಿಯೊ ವೈರಲ್

ರಿಜೆಂಟ್ ಇಂಟರ್ ನ್ಯಾಶನಲ್ ಅಪಾರ್ಟ್ ಮೆಂಟ್ ವಿಶ್ವದ ಅತೀ ಎತ್ತರದ ಕಟ್ಟಡವಾಗಿದೆ. ಇದು ಚೀನಾದಲ್ಲಿದ್ದು ಅತ್ಯಾಧುನಿಕ ಸೌಲಭ್ಯ ಒಳಗೊಂಡಂತೆ ಸಣ್ಣ ನಗರದ ಜನಸಂಖ್ಯೆಗೆ ಸಮಾನವಾದ ಈ ಕಟ್ಟಡದಲ್ಲಿ ಸುಮಾರು 20000 ಜನರು ವಾಸಿಸುತ್ತಿದ್ದಾರೆ. ಇದರ ಡ್ರೋನ್ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರು ಈ ವಿಡಿಯೊಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Mamta Kulkarni: ಟಾಪ್‌ಲೆಸ್‌ ಫೋಟೋಶೂಟ್‌ ಬಗ್ಗೆ ಮೌನ ಮುರಿದ ನಟಿ ಮಮತಾ ಕುಲಕರ್ಣಿ!

ಟಾಪ್‌ಲೆಸ್ ಫೋಟೋ ಶೂಟ್ ಬಗ್ಗೆ ನಟಿ ಮಮತಾ ಕುಲಕರ್ಣಿ ಹೇಳಿದ್ದೇನು?

ನಾನು 9ನೇ ತರಗತಿಯಲ್ಲಿ ಓದುತ್ತಿರಬೇಕಾದರೆ ಈ ಫೋಟೋ ಶೂಟ್ ಮಾಡಿಸಿದ್ದರು. ಆಗ ನನಗೆ ಸೆಕ್ಸ್ ಬಗ್ಗೆಯಾಗಲಿ, ನ್ಯೂಡ್ ಫೋಟೋ ಶೂಟ್ ಇದ್ಯಾವುದು ಗೊತ್ತಿರಲಿಲ್ಲ. ಆ ಸಮಯದಲ್ಲಿ ನಾನು ತುಂಬಾ ಮುಗ್ಧಳಾಗಿದ್ದೆ. ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೆ ಎಂದು ನಟಿ ಮಮತಾ ಕುಲಕರ್ಣಿ ಹೇಳಿಕೊಂಡಿದ್ದಾರೆ.

Health Tips: ಹೆಚ್ಚುತ್ತಿರುವ ಜಿಬಿಎಸ್‌- ಆಹಾರದ ಸ್ವಚ್ಛತೆಗೆ ಆದ್ಯತೆ ನೀಡಿ

ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ತಡೆಗಟ್ಟಲು ಪರಿಹಾರ ಇಲ್ಲಿದೆ!

ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಗುಯಿಲಿನ್‌ ಬಾರ್‌ ಸಿಂಡ್ರೋಮ್‌ (ಜಿಬಿಎಸ್‌) ಎಂಬ ಅಪರೂಪದ ನರರೋಗವೊಂದು ಆತಂಕ ಸೃಷ್ಟಿಸಿದೆ. ಜಿಬಿಎಸ್‌ ಎಂದೇ ಕರೆಯಲಾಗುವ ಈ ರೋಗವು ಮೂಲದಲ್ಲಿ ಬ್ಯಾಕ್ಟೀರಿಯ ಸೋಂಕಿನಿಂದ ಪ್ರಚೋದನೆ ಗೊಳ್ಳುವಂಥದ್ದು. ಆಹಾರದಿಂದ ಈ ಸೋಂಕು ಬರುವುದನ್ನು ತಡೆಯುವುದೇ ಸದ್ಯಕ್ಕಿರುವ ಮಾರ್ಗ. ಹಾಗಾಗಿ ಆಹಾರದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಿ. ಶುದ್ಧ ಕುಡಿಯುವ ನೀರನ್ನೇ ಬಳಸಿ. ಸಾಧ್ಯವಾದಷ್ಟೂ ಕುದಿಸಿದ ನೀರನ್ನೇ ಕುಡಿಯಿರಿ.

Viral Video: ಈ ಕೋತಿಗಳ ಕುಚೇಷ್ಟೆ ಒಂದೆರಡಲ್ಲ! ಕಪಿರಾಯನ ಕಾಟಕ್ಕೆ ಪ್ರವಾಸಿಗರು ಕಂಗಾಲು;  ವಿಡಿಯೊ ಭಾರೀ ವೈರಲ್

ಕಪಿರಾಯನ ಚೇಷ್ಟೆಗೆ ಹೈರಾಣಾದ ಪ್ರವಾಸಿಗರು! ವಿಡಿಯೊ ನೋಡಿ

ಬಾಲಿಯ ಉಬುದ್‌ನಲ್ಲಿರುವ ಮಂಕಿ ಫಾರೆಸ್ಟ್ ವೊಂದರಲ್ಲಿ ಪಾರ್ಕಿಂಗ್‌ ಮಾಡಿದ್ದ ದ್ವಿಚಕ್ರ ವಾಹನಗಳ ಸೀಟ್ ಕವರ್‌ ಕಿತ್ತು ಹಾಕಿರುವ ದೃಶ್ಯಾವಳಿಗಳು ಕಂಡು ಬಂದಿದ್ದು‌ ಕಪಿರಾಯನ ಚೇಷ್ಟೆಗೆ ಪ್ರವಾಸಿಗರು ಹೈರಾಣಾಗಿದ್ದಾರೆ. ಸದ್ಯ ಈ ಕುರಿತ ವಿಡಿಯೊವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಪರಿಣಾಮ ಬೈಕ್ ಸೀಟ್ ಗಳು ಹಾನಿಯಾಗಿದ್ದು ಈ ಬಗ್ಗೆ ವಿಡಿಯೊವೊಂದನ್ನು ಅರಣ್ಯ ಸಿಬ್ಬಂದಿ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Health Tips :ಆತುರಾತುರವಾಗಿ ತಿನ್ನುತ್ತೀರಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಎಚ್ಚರ ವಹಿಸಿ!

ಅವಸರದಲ್ಲೇ ತಿನ್ನುತ್ತೀರಾ? ಹಾಗಾದರೆ ಇದನ್ನು ಖಂಡಿತ ಓದಿ!

ತಿನ್ನುವ ಕ್ರಮಕ್ಕೂ ಆರೋಗ್ಯಕ್ಕೂ ಸಂಬಂಧ ಉಂಟೇ? ಖಂಡಿತಾ ಹೌದು ಹಾಗಾದ್ರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಎಚ್ಚರ ವಹಿಸಿ! ನಾವು ಆತು ರಾತುರವಾಗಿ ತಿನ್ನುವುದರಿಂದ ಹಲವು ರೀತಿಯ ಸಮಸ್ಯೆಗಳು ಕಾಡಲಿದೆ. ಸತ್ವಗಳು ಸರಿಯಾಗಿ ವಿಘಟನೆ ಗೊಳ್ಳದೆ ಹೊಟ್ಟೆ ಉಬ್ಬರಿಸುತ್ತದೆ, ಅಜೀರ್ಣ ಕಾಡುತ್ತದೆ. ಜೊಲ್ಲು ರಸದಲ್ಲಿ ಇರುವಂಥ ಪಚನಕಾರಿ ಕಿಣ್ವಗಳ ಸಹವಾಸ ಆಹಾರಗಳಿಗೆ ದೊರೆಯದೆ ಆಗುವ ಸಮಸ್ಯೆಯಿದು.

Health Tips: ನೀರು ಕುಡಿದ ಕೂಡಲೇ ಈ ತೊಂದರೆ ಕಾಣಿಸ್ತಿದ್ಯಾ? ಕಿಡ್ನಿ ಸಮಸ್ಯೆ ಇವೆ ಎನ್ನುವ ಲಕ್ಷಣಗಳಿವು!

ನೀರು ಕುಡಿದ ತಕ್ಷಣ ಈ ಸಮಸ್ಯೆ ಕಾಣಿಸಿಕೊಂಡರೆ ನಿಮಗೆ ಕಿಡ್ನಿ ಸಮಸ್ಯೆ ಶುರುವಾಗಿದೆ ಎಂದರ್ಥ!

ನೀರು ಕುಡಿದ ತಕ್ಷಣ ಕಾಣಿಸಿಕೊಳ್ಳುವ ಲಕ್ಷಣಗಳು‌ ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ಹೊರ ಹೋಗುವಾಗ ನೋವು ಅಥವಾ ಕಿರಿಕಿರಿ ಇತ್ಯಾದಿ ಲಕ್ಷಣ ಕಾಣಿಸಿಕೊಂಡರೆ ಕಿಡ್ನಿ ಸಮಸ್ಯೆಯು ಆಗಿರಬಹುದು. ನೀರು ಕುಡಿದ ತಕ್ಷಣ ಮೂತ್ರಪಿಂಡಗಳು ಇರುವ ಜಾಗದಲ್ಲಿ ನೋವು ಕಾಣಿಸಿಕೊಂಡರೆ, ಸೂಜಿಯಿಂದ ಚುಚ್ಚಿದಂತೆ ಅನಿಸಿದರೆ ತಕ್ಷಣ ಎಚ್ಚರವಹಿಸಬೇಕು. ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಸಂಬಂಧಿತ ಚಿಕಿತ್ಸೆಗಳನ್ನು ಪಡೆಯಬೇಕು.

Health Tips: ಹುರುಳಿ ಕಾಳು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಬುತ ಪ್ರಯೋಜನಗಳೇನು?

ಆರೋಗ್ಯಕ್ಕೆ ಹುರುಳಿ ಕಾಳುಗಳ ಸೇವನೆ ಎಷ್ಟು ಉಪಯುಕ್ತ ಗೊತ್ತಾ?

ಹುರುಳಿಯು ಪ್ರೋಟೀನ್, ಫೈಬರ್, ಜೀವಸತ್ವ ಮತ್ತು ಖನಿಜಗಳ ಮುಖ್ಯ ಆಗರವಾಗಿದ್ದು ವಾರಕ್ಕೊಮ್ಮೆ ಯಾದರೂ ಇದರ ಸೇವನೆ ಮಾಡುವುದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹುರುಳಿ ಸೇವನೆ ಮಧುಮೇಹಿಗಳಿಗೆ ಬಹಳ ಉತ್ತಮ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಅಲ್ಲದೆ ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದ್ದು ಮಧು ಮೇಹಿಗಳು ವಾರಕ್ಕೊಮ್ಮೆಯಾದರೂ ಹುರುಳಿ ಸೇವನೆ ಮಾಡಿದರೆ ಉತ್ತಮ.

Viral Video: ಬೆಂಕಿ ಉಪಯೋಗಿಸಿ ಮಸಾಜ್ ! ಈ ಕಣ್ಣಲ್ಲಿ ಏನೆಲ್ಲ ನೋಡ್ಬೇಕೊ ಎಂದ ನೆಟ್ಟಿಗರು

ವೈರಲ್‌ ಆಗ್ತಿದೆ ಈ ಸ್ಪೆಶಲ್‌ ಮಸಾಜ್ ವಿಡಿಯೊ

ದಕ್ಷಿಣ ಏಷ್ಯಾದ ಮಸಾಜ್ ಪಾರ್ಲರ್ ಒಂದರಲ್ಲಿ ಗ್ರಾಹಕನ‌ ಮೇಲೆ ಬೆಂಕಿ ಪ್ರಯೋಗ ಮಾಡುವ ವಿಡಿಯೊವೊಂದು ವೈರಲ್ ಆಗುತ್ತಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ. ಮಸಾಜ್ ಪಾರ್ಲರ್‌ನಲ್ಲಿ‌ ಗ್ರಾಹಕನ ಮೇಲೆ ದಪ್ಪ ಟವೆಲ್ ಹೊದಿಸಿ ಬೆಂಕಿ ಹೊತ್ತಿಸಲಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಮತ್ತೊಬ್ಬ ಒದ್ದೆಯಾದ ಟವೆಲ್‌ನಿಂದ ಬೆಂಕಿಯನ್ನು ನಂದಿಸಿರುವ ವಿಡಿಯೊ ವೈರಲ್ ಆಗಿದೆ.

Producer Pushkara Mallikarjunaiah: 'ಹಾಯ್‌ ನನ್ನಾ' ತೆಲುಗು ಚಿತ್ರತಂಡದ ವಿರುದ್ಧ ನಿರ್ಮಾಪಕ ಪುಷ್ಕರ್ ಕಿಡಿ; ಕಾರಣವೇನು?

ತೆಲುಗು ನಟ ನಾನಿ ವಿರುದ್ಧ ನಿರ್ಮಾಪಕ ಪುಷ್ಕರ್ ಗರಂ

2023ರಲ್ಲಿ ತೆರೆಕಂಡ ಟಾಲಿವುಡ್‌ ಸ್ಟಾರ್‌ ನಟ ನಾನಿ ಅಭಿನಯದ ʼಹಾಯ್ ನಾನ್ನʼ ಚಿತ್ರದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ತಾವು ನಿರ್ಮಿಸಿದ ಭೀಮಸೇನ ನಳ ಮಹಾರಾಜ ಕನ್ನಡ ಚಿತ್ರದ ರಿಮೇಕ್‌ ಇದಾಗಿದ್ದು, ಹಕ್ಕು ಪಡೆದುಕೊಂಡಿರಲಿಲ್ಲ ಎಂದು ಕನ್ನಡ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಆರೋಪಿಸಿದ್ದಾರೆ. ನಾನಿ ಅವರೇ ಎಷ್ಟು ಕೀಳುಮಟ್ಟದ ಕೆಲಸ ಮಾಡಿದ್ದೀರಿ ಎಂದು ಪುಷ್ಕರ್ ಅಸಮಾಧಾನ ಹೊರ ಹಾಕಿದ್ದಾರೆ.

Health tips: ತೂಕ ಇಳಿಸಬೇಕೇ? ಇಲ್ಲಿವೆ ರುಚಿಯಾದ ಚಟ್ನಿಗಳು!

ತೂಕ ಇಳಿಕೆಯ ಜೊತೆ ಬಾಯಿ ರುಚಿಯನ್ನೂ ಹೆಚ್ಚಿಸುವ ಚಟ್ನಿಗಳಿವು!

ತೂಕ ಇಳಿಸುವ ಮಂತ್ರವನ್ನೇ ಈಗ ಲೋಕವೆಲ್ಲ ಜಪಿಸುತ್ತಿರುವ ಹೊತ್ತಿನಲ್ಲಿ, ʻವೆಯ್ಟ್‌ಲಾಸ್‌ ರೆಸಿಪಿʼ ಎನ್ನುತ್ತಾ ಉಪ್ಪು-ಖಾರವಿಲ್ಲದ, ಬೋಳು ಆಹಾರವನ್ನು ಮುಂದಿಟ್ಟರೆ ಹೇಗೆ? ತೂಕ ಇಳಿಸುವ ಕೆಲಸ ಮೂರು ದಿನಕ್ಕೆ ಮುಕ್ತಾಯ ವಾಗುತ್ತದೆ. ಬದಲಿಗೆ, ತೂಕ ಇಳಿಸಿಕೊಳ್ಳಲು ರುಚಿಕರ ಅಡುಗೆಗಳನ್ನು ಚಪ್ಪರಿಸುವಂತಾದರೆ…? ಇಲ್ಲಿವೆ ಅಂಥ ಕೆಲವು ಆಯ್ಕೆಗಳು.