ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ajith Kumar: ನಟ ಅಜಿತ್‌ಗೆ ಹುಟ್ಟುಹಬ್ಬದ ಸಂಭ್ರಮ- ಹಳೆಯ ಫೋಟೋ ಶೇರ್‌ ಮಾಡಿದ ಪತ್ನಿ ಶಾಲಿನಿ

ತಮಿಳು ನಟ ಅಜಿತ್ ಕುಮಾರ್ ಇತ್ತೀಚೆಗೆ ಸಾಲು ಸಾಲು ಸಿನಿಮಾ ಶೂಟಿಂಗ್‌, ಮೋಟಾರ್‌ಸ್ಪೋರ್ಟ್ ಇವೆಂಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅಜಿತ್ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು ಪತ್ನಿ ಶಾಲಿನಿ ರೇಸ್ ಥೀಮ್‌ನ ಬರ್ತ್ ಡೇ ಪಾರ್ಟಿಯ ಹಳೆಯ ಫೋಟೋಗಳನ್ನು ಸೋಷಿಯಲ್ ಮೀಡಿಯದಲ್ಲಿ ಹಂಚಿಕೊಂಡಿದ್ದಾರೆ.

1/5

ತಮಿಳು ನಟ ಅಜಿತ್ ಕುಮಾರ್ ಸಿನಿ ವೃತ್ತಿ ಬದುಕಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮೇ 1 ರಂದು ಅಜಿತ್ ಕುಮಾರ್ ತಮ್ಮ 54 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಪತ್ನಿ ಶಾಲಿನಿ, 2024 ರಲ್ಲಿ ಆಯೋಜಿಸಿದ್ದ ರೇಸ್ ಥೀಮ್‌ನ ಬರ್ತ್‌ಡೇ ಪಾರ್ಟಿಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2/5

ನಟ ಪ್ರಸ್ತುತ ಚೆನ್ನೈನಲ್ಲಿದ್ದು ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ವರ್ಷ, ಶಾಲಿನಿ ಅಜಿತ್‌ಗಾಗಿ ರೇಸ್ ಥೀಮ್‌ನ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದರು. ಅಜಿತ್‌ಗೆ ಶುಭ ಹಾರೈಸಲು "2024 ರ ಹುಟ್ಟುಹಬ್ಬದ ನೆನಪನ್ನು ಪತ್ನಿ ಶಾಲಿನಿ ಹಂಚಿಕೊಂಡು ಉತ್ತಮ ದಿನಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯಲು ಅರ್ಹವಾಗಿವೆ ಎಂದು ಬರೆದು ಕೊಂಡಿದ್ದಾರೆ.

3/5

ಫೋಟೋ ದಲ್ಲಿ ಅಜಿತ್ ಕ್ಯಾಶುವಲ್ ಉಡುಪುಗಳನ್ನು ಧರಿಸಿದ್ದರೆ, ಪತ್ನಿ ಶಾಲಿನಿ, ಮಗಳು ಅನುಷ್ಕಾ ಮತ್ತು ಮಗ ಆದ್ವಿಕ್ ಥೀಮ್‌ಗೆ ಅನುಗುಣವಾಗಿ ಡ್ರೆಸ್ ಧರಿಸಿದ್ದರು. ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ.

4/5

ಅಜಿತ್ ಸಿನಿಮಾ ಸಾಧನೆಗಾಗಿ ಕಳೆದ ಜನವರಿಯಲ್ಲಿ‌ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ,  ಏಪ್ರಿಲ್ 28 ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಜಿತ್‌ಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು.ಪದ್ಮ ಭೂಷಣ ಪ್ರಶಸ್ತಿ ಪಡೆದು ನಟ ಹೊರಬರುತ್ತಿದ್ದಂತೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಇದರಿಂದ ಅಜಿತ್ ಕಾಲಿಗೆ ಗಾಯವಾಗಿದ್ದು ಆಸ್ಪತ್ರೆಗೆ ಕೂಡ ದಾಖಲಾಗಿದ್ದರು.

5/5

ಇನ್ನು ಅಜಿತ್ ಕುಮಾರ್ ಈ ವರ್ಷದ ಆರಂಭದಿಂದಲೇ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ವರ್ಷದ ಆರಂಭದಲ್ಲಿಯೇ ಅವರು ನಟಿಸಿದ 'ವಿಡಾಮುಯಾರ್ಚಿ' ಸಿನಿಮಾ ಬಿಡುಗಡೆಯಾಗಿತ್ತು. ಆದರೆ, ಆ ಸಿನಿಮಾ ಅಜಿತ್ ಅಂದು ಕೊಂಡಂತೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ.ಆ ನಂತರ ಇತ್ತೀಚೆಗೆ ಬಿಡುಗಡೆಯಾಗ 'ಗುಡ್ ಬ್ಯಾಡ್ ಅಗ್ಲಿ' ಚಿತ್ರ  ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಕಂಡಿತು. ಅಜಿತ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಇದಾಗಿದೆ.