Ananya Panday: ಮಾಲ್ಡೀವ್ಸ್‌ನಲ್ಲಿ ಬಿಕಿನಿ ಧರಿಸಿ ಹಾಟ್ ಅವತಾರ ತಾಳಿದ ಅನನ್ಯಾ ಪಾಂಡೆ; ಫ್ಯಾನ್ ಫುಲ್ ಫಿದಾ
ಬಾಲಿವುಡ್ ನಟಿ ಅನನ್ಯಾ ಪಾಂಡೆ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಅವರು ಬೋಲ್ಡ್ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಭಾರೀ ಮಾಲ್ಡೀವ್ಸ್‌ಗೆ ಅವರು ಜಾಲಿ ಟ್ರಿಪ್ ಕೈಗೊಂಡಿದ್ದು ಹಾಟ್ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿವಿಧ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಅವರ ಹಾಟ್ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ.
ಮಾಲ್ಡೀವ್ಸ್‌ನ ಪ್ರವಾಸಿ ಸ್ಥಾನಗಳಲ್ಲಿ ಫೋಟೊಶೂಟ್ ಮಾಡಿಸಿರುವ ಅನನ್ಯಾ ತಮ್ಮ ಬೋಲ್ಡ್ ಲುಕ್‌ನಿಂದ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ಈ ಫೋಟೊಗಳಲ್ಲಿ ಅವರು ಬಿಳಿ ಬಣ್ಣದ ಬಿಕಿನಿ ಧರಿಸಿ ತಮ್ಮ ಸುಂದರ ಮತ್ತು ಫಿಟ್ ಫಿಗರ್ ಪ್ರದರ್ಶಿಸಿದ್ದಾರೆ
ಹಸಿರು, ಗುಲಾಬಿ ಮತ್ತು ಕೇಸರಿ ಬಣ್ಣದ ಬಿಕಿನಿಗಳಲ್ಲಿಯೂ ಅವರು ಮಿಂಚಿದ್ದಾರೆ. ಕೆಂಪು ಬಿಕಿನಿಯಲ್ಲಿ ಪೂಲ್ ಬಳಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸರೆಯಾಗಿದ್ದು ಫ್ಯಾನ್ಸ್ ಲೈಕ್ಸ್ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.
ವಿಶೇಷವಾಗಿ, ಅವರ ನೀಲಿ ಬಣ್ಣದ ಒನ್-ಶೋಲ್ಡರ್ ಬಿಕಿನಿಯಲ್ಲಿ ಹೆಚ್ಚು ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಫೋಟೊದಲ್ಲಿ ಅವರ ಕಿಲ್ಲಿಂಗ್ ಆಬ್ಸ್ ಎದ್ದು ಕಾಣುತ್ತಿದ್ದು, ಫಿಟ್‌ನೆಸ್ ಬಗ್ಗೆ ಅನೇಕರಿಗೆ ಒಲವು ಹೆಚ್ಚು ಮಾಡುವಂತೆ ಮಾಡಿದೆ.
ಸಮುದ್ರ ತೀರದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಅನನ್ಯಾ ಪಾಂಡೆ ಅವರ ಬಿಕಿನಿ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದು ಭಾರಿ ವೈರಲ್ ಆಗಿದೆ.
ಅನನ್ಯಾ ಪಾಂಡೆ ಇತ್ತೀಚೆಗೆ 'ತು ಮೇರಿ ಮೈನ್ ತೇರಾ, ಮೈನ್ ತೇರಾ ತು ಮೇರಿ' ಎಂಬ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದು, ಇದರಲ್ಲಿ ಅವರು ನಟ ಕಾರ್ತಿಕ್ ಆರ್ಯನ್ ಜತೆ ನಟಿಸಿದ್ದಾರೆ. ಈ ರೊಮ್ಯಾಂಟಿಕ್ ಸಿನಿಮಾ 2025ರ ಡಿಸೆಂಬರ್ 31ರಂದು ತೆರೆಗೆ ಬರಲು ಸಿದ್ಧವಾಗಿದೆ.
ಅದೇ ರೀತಿ ಅವರು ಲಕ್ಷ್ಯ ಲಲ್ವಾನಿ ಅವರೊಂದಿಗೆ 'ಚಂದ್ ಮೇರಾ ದಿಲ್' ಎಂಬ ಮತ್ತೊಂದು ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ.