ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Arbaaz Khan: 57ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗುತ್ತಿದ್ದಾರೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್‌ ಖಾನ್‌

ನಟ ಸಲ್ಮಾನ್ ಖಾನ್ ಅವರ ಸಹೋದರ ನಟ-ನಿರ್ಮಾಪಕ ಅರ್ಬಾಜ್ ಖಾನ್ ಅವರ ಪತ್ನಿ ಶುರಾ ಖಾನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗಿತ್ತು. ಇದೀಗ ಸ್ವತಃ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Arbaaz Khan and Sshura Khan
1/5

ನಟ-ನಿರ್ಮಾಪಕ ಅರ್ಬಾಜ್ ಖಾನ್ ಅವರ ಪತ್ನಿ ಶುರಾ ಖಾನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಶುರಾ ಖಾನ್ ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್.‌ ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ಅವರ ಪುತ್ರಿ ರಾಶಾ ಟಂಡನ್‌ಗೆ ಇವರೇ ಖಾಯಂ ಆಗಿ ಮೇಕಪ್ ಮಾಡುತ್ತಿದ್ದರು. ಹೀಗಾಗಿ ಅನೇಕ ಸಿನಿ ಸೆಲೆಬ್ರಿಟಿಗಳ ಪರಿಚಯ ಕೂಡ ಇವರಿಗೆ ಇದೆ. ಸಿನಿಮಾ ಸೆಟ್‌ನಲ್ಲಿಯೇ ಅರ್ಬಾಜ್ ಖಾನ್ ಪರಿಚಯವಾಗಿ ಬಳಿಕ ಇವರ ಸಂಬಂಧ ಸ್ನೇಹಕ್ಕೆ ತಿರುಗಿ ಪ್ರೀತಿ ಉಂಟಾಯಿತು. ಹೀಗೆ 2023ರ ಡಿಸೆಂಬರ್‌ನಲ್ಲಿ 22 ವರ್ಷ ಚಿಕ್ಕವಳಾದ ಶುರಾ ಖಾನ್ ಜೊತೆ ಆತ್ಮೀಯರ ಸಮ್ಮುಖದಲ್ಲಿ ಅರ್ಬಾಜ್ ಖಾನ್ ವಿವಾಹವಾಗಿದ್ದರು. ವಿವಾಹವಾಗಿ ಎರಡು ವರ್ಷಗಳು ಕಳೆಯುತ್ತಿದ್ದು, ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

2/5

57 ವರ್ಷದ ನಟ ಅರ್ಬಾಜ್ ಖಾನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಸಂತೋಷದ ಸುದ್ದಿಯನ್ನು ಹಂಚಿ ಕೊಂಡಿದ್ದಾರೆ. ತಾವು ಮತ್ತೊಮ್ಮೆ ತಂದೆಯಾಗುತ್ತಿರುವ ವಿಚಾರವನ್ನು ಅವರು ಖುಷಿಯಿಂದ ಹಂಚಿಕೊಂಡಿದ್ದು ಫ್ಯಾನ್ಸ್ ಶುಭ ಹಾರೈಸಿದ್ದಾರೆ.

3/5

ನಾನು ಮತ್ತೊಮ್ಮೆ ತಂದೆಯಾಗುತ್ತಿದ್ದೇನೆ. ಶುರಾ ಗರ್ಭಿಣಿ ಎನ್ನುವ ವಿಚಾರ ನಿಜ. ಇದರಿಂದ ನನಗೇನು ಸಮಸ್ಯೆ ಇಲ್ಲ. ಮಗುವಿನ ಬಗ್ಗೆ ಬಹಳ ಕನಸು ಇದೆ. ಈ ಬಗ್ಗೆ ತುಂಬಾ ಸಂತೋಷವಿದೆ ಎಂದು ಸಂದರ್ಶನದಲ್ಲಿ ಅರ್ಬಾಜ್ ಖಾನ್ ಹೇಳಿದ್ದರು.

4/5

ನಟ ಅರ್ಬಾಜ್ ಖಾನ್ ಮೊದಲು ಮಲೈಕಾ ಅವರನ್ನು ವಿವಾಹವಾಗಿದ್ದರಿ. ಇಬ್ಬರು 19 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದರು. ಇವರಿಬ್ಬರಿಗೂ ಅರ್ಹಾನ್ ಎಂಬ ಮಗ ಇದ್ದಾನೆ. ಇವರಿಬ್ಬರ ನಡುವೆ ವೈಮನಸ್ಸು ಮೂಡಿದ್ದ ಕಾರಣ ಪರಸ್ಪರ ಸಮ್ಮತಿಯಿಂದ ವಿಚ್ಛೇದನ ಪಡೆದಿದ್ದಾರೆ. ಬಳಿಕ ಶುರಾ ಖಾನ್ ಅವರನ್ನು ಅರ್ಬಾಜ್ ಖಾನ್ ವಿವಾಹವಾಗಿದ್ದಾರೆ. ನಟ ತಮ್ಮ 57ನೇ ವಯಸ್ಸಿಗೆ ಮತ್ತೆ ತಂದೆಯಾಗುತ್ತಿದ್ದು, ಸೋಶಿಯಲ್ ಮಿಡಿಯಾದಲ್ಲಿ ಈ ವಿಚಾರದ ಬಗ್ಗೆ ನಾನಾ ಬಗೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

5/5

ಇತ್ತೀಚೆಗಷ್ಟೇ ಸಹೋದರಿ ಅರ್ಪಿತಾ ಖಾನ್ ಅವರ ಹೊಸ ರೆಸ್ಟೋರೆಂಟ್ ಒಂದರಲ್ಲಿ ಅರ್ಬಾಜ್ ಖಾನ್ ಮತ್ತು ಪತ್ನಿ ಶುರಾ ಜತೆಯಾಗಿ ಕಾಣಿಸಿಕೊಂಡಿದ್ದರು. ಆ ವಿಡಿಯೊ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಶುರಾ ಗರ್ಭಧಾರಣೆಯ ಬಗ್ಗೆ ಹಲವು ಗಾಸಿಪ್ ಅನೇಕ ದಿನದಿಂದ ಕೇಳಿ ಬರುತ್ತಿತ್ತು‌. ಆದರೆ ದೃಢಪಟ್ಟಿರಲಿಲ್ಲ. ಇದೀಗ ಶುರಾ ಗರ್ಭಿಣಿಯಾಗಿರುವುದು ನಿಜವೆಂದು ಅವರ ಪತಿ ಅರ್ಬಾಜ್ ಖಾನ್ ಒಪ್ಪಿಕೊಂಡಿದ್ದಾರೆ.