Hanumantha: ಧನರಾಜ್ ಮಗಳ ಜೊತೆ ಫೋಟೋಕ್ಕೆ ಕ್ಯೂಟ್ ಆಗಿ ಪೋಸ್ ಕೊಟ್ಟ ಹನುಮಂತ
ಬಿಗ್ ಬಾಸ್ ವಿನ್ನರ್ ಹನುಮಂತು ದೋಸ್ತಾ ಧನು ಮನೆಗೆ ತೆರಳಿ, ಧನರಾಜ್ ಪುತ್ರಿ ಪ್ರಸಿದ್ಧಿ ಜೊತೆ ಆಟವಾಡುತ್ತಾ ಖುಷಿ ಪಟ್ಟಿದ್ದಾರೆ. ಆ ಫೋಟೊಗಳನ್ನು ಹನುಮಂತ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಕಂಡ ಮುಗ್ಧ ಮನಸ್ಸಿನ ಸ್ಪರ್ಧಿಗಳೆಂದರೆ ಅದು ಧನರಾಜ್ ಆಚಾರ್ ಮತ್ತು ಹನುಮಂತ ಲಮಾಣಿ. ಇದೇ ಕಾರಣಕ್ಕೆ ಧನು ಫಿನಾಲೆ ವಾರಕ್ಕೊರಗೆ ಬಂದರೆ ಹನುಮಂತ ಟ್ರೋಫಿ ಎತ್ತಿ ಹಿಡಿದರು.
ಹನುಮಂತನ ಜೊತೆಗೆ ಧನರಾಜ್ ಒಡನಾಟ ಕಂಡು ಕರ್ನಾಟಕ ಮಂದಿಯ ಹೃದಯದಲ್ಲಿ ದೋಸ್ತಾ ಎಂಬ ಸ್ಥಾನ ಪಡೆದಿದದ್ದಾರೆ. ಹನು-ಧನು ಜೋಡಿ ಇಂದು ಇಡೀ ಕರ್ನಾಟಕದಲ್ಲಿ ಫೇಮಸ್. ಹನುಮಂತ ಅವರು ಆಗಾಗಾ ಧನರಾಜ್ ಮನೆಗೆ ಹೋಗಿ ಸಮಯ ಕಳೆಯುತ್ತ ಇರುತ್ತಾರೆ.
ಇದೀಗ ಹನುಮಂತು ದೋಸ್ತಾ ಧನು ಮನೆಗೆ ತೆರಳಿ, ಧನರಾಜ್ ಪುತ್ರಿ ಪ್ರಸಿದ್ಧಿ ಜೊತೆ ಆಟವಾಡುತ್ತಾ ಖುಷಿ ಪಟ್ಟಿದ್ದಾರೆ. ಆ ಫೋಟೊಗಳನ್ನು ಹನುಮಂತ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹನುಮಂತ ಅವರು ಪ್ರಸಿದ್ಧಿಯನ್ನು ಕೈಯಲ್ಲಿ ಹಿಡಿದು ಫೋಟೊಗೆ ಪೋಸ್ ಕೂಡ ಕೊಟ್ಟಿದ್ದಾರೆ. ಫೋಟೊಗಳ ಜೊತೆಗೆ ಮುದ್ದು ಸೊಸೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೊಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ವಾವ್ ಫೋಟೋ ಆಫ್ ದಿ ಡೇ, ಸೂಪರೋ ಸೂಪರ್ ದೋಸ್ತ್ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ಹನುಮಂತ ಧನರಾಜ್ ಆಚಾರ್ ಹಾಗೂ ಅವರ ಪತ್ನಿ ಪ್ರಜ್ಞಾ ಜೊತೆಗೂ ಪೋಸ್ ಕೊಟ್ಟಿದ್ದಾರೆ. ಮೊನ್ನೆಯಷ್ಟೆ ಮುದ್ದು ಸೊಸೆ ಸೀರಿಯಲ್ ಸೆಟ್‌ಗೆ ಹನುಮಂತು ಮತ್ತು ಧನು ಭೇಟಿ ನೀಡಿ, ತ್ರಿವಿಕ್ರಮ್ ಅವರ ಜೊತೆಗೆ ಸಮಯ ಕಳೆದಿದ್ದರು.